ಕೊಡಗಿನ ಸಾಕಾನೆ ಶಿಬಿರಗಳಲ್ಲಿ ವಿಶ್ವ ಆನೆ ದಿನಾಚರಣೆ
ಕೊಡಗು

ಕೊಡಗಿನ ಸಾಕಾನೆ ಶಿಬಿರಗಳಲ್ಲಿ ವಿಶ್ವ ಆನೆ ದಿನಾಚರಣೆ

August 13, 2021

ಕುಶಾಲನಗರ, ಆ.12- ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಗುರುವಾರ ವಿಶ್ವ ಆನೆಗಳ ದಿನಾಚರಣೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಿಬಿರದ ಎಲ್ಲಾ ಆನೆಗಳನ್ನು ಕಾವೇರಿ ನದಿಗೆ ಇಳಿಸಿ ಮಾವು ತರು ಹಾಗೂ ಕಾವಾಡಿಗರು ಸ್ನಾನ ಮಾಡಿಸಿದರು.
ನಂತರ ಅವುಗಳಿಗೆ ಹೂವಿನ ಹಾರ ಹಾಕಿ ಅಲಂಕಾರ ಮಾಡಿ ಆನೆ ಶಿಬಿರದ ಆವರಣದಲ್ಲಿರುವ ಬಸವೇಶ್ವರ ದೇವಾ ಲಯ ಬಳಿ ಆನೆಗಳಿಗೆ ವಿಶೇಷ ಪೂಜೆ ನಡೆಸಲಾಯಿತು.

ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ.ಅನನ್ಯ ಮತ್ತು ದುಬಾರೆ ಉಪ ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್ ಹಾಗೂ ಸಿಬ್ಬಂದಿಗಳು,ಮಾವುತರು ಆನೆಗಳಿಗೆ ಪೂಜೆ ಸಲ್ಲಿಸಿ, ಕಬ್ಬು, ಬೆಲ್ಲ, ಬಾಳೆಹಣ್ಣು ತಿನ್ನಿಸಿದರು.

ಈ ಸಂದರ್ಭ ಮಾತನಾಡಿದ ಆರ್‍ಎಫ್‍ಓ ಅನನ್ಯ ಕುಮಾರ್, ಪ್ರತಿ ವರ್ಷ ಆನೆಗಳ ದಿನಾಚರಣೆ ಸಂದರ್ಭ ದಲ್ಲಿ ಆನೆಗಳ ಕ್ರೀಡಾಕೂಟ ಆಯೋಜಿಸಲಾಗುತ್ತಿತ್ತು. ಕೋವಿಡ್ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಆನೆಗಳ ಕ್ರೀಡಾಕೂಟ ರದ್ದುಗೊಳಿಸಲಾಗಿದೆ. ಹೀಗಾಗಿ ಸರಳವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ, ಆನೆಗಳ ದಿನಾಚರಣೆ ಆಚರಿಸಲಾಯಿತು ಎಂದರು.ಈ ಸಂದರ್ಭ ಕೊಡಗು ವೃತ್ತದ ಪಶು ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಹಾಗೂ ಸಿಬ್ಬಂದಿ ಹಾಜರಿದ್ದರು.

ದಿನಸಿ ಕಿಟ್ ವಿತರಣೆ: ಪ್ರವಾಸಿ ಮಂದಿರದ ಆವರಣ ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಕಾನೆ ಶಿಬಿರದ ಮಾವುತರು ಹಾಗೂ ಕಾವಾಡಿಗರ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಮತ್ತಿಗೋಡು ವರದಿ: ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಗುರು ವಾರ ವಿಶ್ವ ಆನೆ ದಿನ ಆಚರಿಸಲಾಯಿತು.
ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಎಸ್‍ಪಿ ಕ್ಷಮಾ ಮಿಶ್ರ, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ಆನೆ ದಿನ ಪ್ರಯುಕ್ತ ಮತ್ತಿಗೋಡು ಸಾಕಾನೆ ಶಿಬಿರ ದಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಕಾವಾಡಿ ಗಳಾದ ಗಣೇಶ್(ಅಶ್ವತ್ಥಾಮ ಆನೆ) ಮತ್ತು ಜೆ.ಕೆ.ರವಿ (ವರಲಕ್ಷ್ಮಿ ಆನೆ) ಅವರನ್ನು ಸನ್ಮಾನಿಸಲಾಯಿತು. ಮಾವುತ ಮತ್ತು ಕಾವಾಡಿಗಳ ಮಕ್ಕಳಿಗೆ ಏರ್ಪಡಿಸಿದ್ದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸ ಲಾಯಿತು. ಶಿಬಿರದಲ್ಲಿದ್ದ ಪದವಿ ಪೂರ್ವ ವಿದ್ಯಾ ರ್ಥಿನಿಗೆ ಟ್ಯಾಬ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ವಲಯಗಳ ವಲಯ ಅರಣ್ಯಾಧಿಕಾರಿಗಳು ವಿಶೇಷ ಹುಲಿ ಸಂರಕ್ಷಣಾ ದಳದ(ಎಸ್‍ಟಿಪಿಎಫ್) ಸಿಬ್ಬಂದಿ, ಮಾವುತ ಹಾಗೂ ಕಾವಾಡಿ ಕುಟುಂಬದವರು ಭಾಗವಹಿಸಿದ್ದರು.

ಫೋಟೋ ಕ್ಯಾಪ್ಷನ್
ದುಬಾರೆ ಶಿಬಿರದಲ್ಲಿ ಆನೆಗಳಿಗೆ ವಿಶೇಷ ಪೂಜೆ. ಬಲಚಿತ್ರದಲ್ಲಿ ಮತ್ತಿಗೋಡು ಶಿಬಿರದಲ್ಲಿ ಡಿಸಿ ಚಾರುಲತಾ ಸೋಮಲ್ ಸಾಕಾನೆಗಳಿಗೆ ಕಬ್ಬು ಮತ್ತು ಬಾಳೆಹಣ್ಣು ಕೊಡುತ್ತಿರುವುದು

Translate »