ಗಣ ಗಾರಿಕೆಗೆ ಭೂಮಿ ನೀಡದ      ರೈತನ ಅಪಹರಿಸಿ ಹತ್ಯೆಗೈದು, ಹೂತರು…
ಮೈಸೂರು

ಗಣ ಗಾರಿಕೆಗೆ ಭೂಮಿ ನೀಡದ ರೈತನ ಅಪಹರಿಸಿ ಹತ್ಯೆಗೈದು, ಹೂತರು…

May 22, 2022

ನಾಗಮಂಗಲ ತಾಲೂಕಲ್ಲಿ ರಾಕ್ಷಸಿ ಕೃತ್ಯ

ಸಂಬAಧಿಯೂ ಪ್ರಕರಣದಲ್ಲಿ ಶಾಮೀಲು

ತಮಿಳ್ನಾಡಿನ ಉದ್ಯಮಿಯಿಂದ ಗಣ ಗಾರಿಕೆ; ಪಕ್ಕದ ಜಮೀನಿನ ಮೇಲೂ ಕಣ ್ಣತ್ತು

ಹತ್ಯೆಗೀಡಾದ ಮೋಹನ್ ತಾಯಿ, ಪತ್ನಿ ದೂರಿಗೆ ಸ್ಪಂದಿಸದ ಪೊಲೀಸರು

ನಾಗಮಂಗಲ, ಮೇ ೨೧ (ಮಹೇಶ್, ಎಸಿಪಿ)-ಗಣ ಗಾರಿಕೆಗೆ ಜಮೀನು ನೀಡಲು ನಿರಾಕರಿಸಿದ ರೈತನ ಅಪಹರಿಸಿ ಹತ್ಯೆ ಮಾಡಿರುವ ಘಟನೆ ನಾಗಮಂಗಲ ತಾಲೂಕು ನರಗಲು ಗ್ರಾಮದಿಂದ ವರದಿಯಾಗಿದೆ.ನರಗಲು ಗ್ರಾಮದ ರೈತ ಎನ್.ಆರ್.ಮೋಹನ್(೩೧)ನನ್ನು ಹತ್ಯೆ ಮಾಡಲಾಗಿದೆ. ಈತನನ್ನು ಮೇ ೧೫ರಂದು ಸಂಜೆ ತಮಿಳು ನಾಡು ಮೂಲದ ಗಣ ಉದ್ಯಮಿ ಹಾಗೂ ಈತನ ದೊಡ್ಡಪ್ಪನ ಮಗ, ಗ್ರಾಪಂ ಮಾಜಿ ಸದಸ್ಯ ಅಪಹರಿಸಿದ್ದು, ಅದೇ ದಿನ ರಾತ್ರಿ ಆತನ ತಾಯಿ ವಸಂತಮ್ಮ ಬಿಂಡಿಗನವಿಲೆ ಠಾಣೆ ಪೊಲೀಸರಿಗೆ ದೂರು ನೀಡಲು ತೆರಳಿದರಾದರೂ, ಅವರಿಗೆ ಪೊಲೀಸರು ಸ್ಪಂದಿಸಿಲ್ಲ. ಮರು ದಿನ ಮೋಹನ್‌ನ ಪತ್ನಿ ಯಮುನಾ ತನ್ನ ಪತಿಯನ್ನು ಅಪಹರಿಸಲಾಗಿದೆ ಎಂದು ಆಧಾರ ಸಮೇತ ದೂರು ನೀಡಿದಾಗ ಅದನ್ನು ಸ್ವೀಕರಿಸಲು ನಿರಾಕರಿಸಿದ ಪೊಲೀ ಸರು, ಆಕೆಯಿಂದ ನಾಪತ್ತೆ ದೂರು ಬರೆಸಿಕೊಂಡು ಸಾಗ ಹಾಕಿ ದ್ದಾರೆ. ಅನ್ಯ ಮಾರ್ಗವಿಲ್ಲದೆ ಪೊಲೀಸರು ಹೇಳಿದಂತೆ ನಾಪತ್ತೆ ದೂರು ಸಲ್ಲಿಸಿದ ನಂತರವೂ ಕೂಡ ಗಣ ಉದ್ಯಮಿ ಮತ್ತು ಗ್ರಾಪಂ ಮಾಜಿ ಸದಸ್ಯನನ್ನು ಕರೆದು ವಿಚಾರಣೆ ಕೂಡ ಮಾಡದೇ ಪೊಲೀಸರು ನಿರ್ಲಕ್ಷö್ಯ ವಹಿಸಿದ್ದರಿಂದ ಯಮುನಾ ಅವರು ತನ್ನ ಮಕ್ಕಳೊಂದಿಗೆ ಮಂಡ್ಯ ಎಸ್ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ. ಎಸ್ಪಿಯವರ ನಿರ್ದೇಶನದ ಮೇರೆಗೆ ಮೇ ೧೯ರಂದು ರಾತ್ರಿ ಬಿಂಡಿಗನವಿಲೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಯಮುನಾ ಸಂಶಯ ವ್ಯಕ್ತಪಡಿಸಿದ್ದ ಗಣ ಉದ್ಯಮಿಯನ್ನು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದಾಗ ರೈತ ಮೋಹನ್‌ನನ್ನು ಅಪಹರಿಸಿ ಹತ್ಯೆ ಮಾಡಿರುವುದು ಬಯಲಾಗಿದೆ.

ಗಣ ಉದ್ಯಮಿಯು ರೈತ ಮೋಹನ್‌ನನ್ನು ಮೇ ೧೫ರಂದು ಸಂಜೆಯೇ ಅಪಹರಿಸಿ ಹತ್ಯೆ ಮಾಡಿದ ನಂತರ ಶವವನ್ನು ಹೊಳೆನರಸೀಪುರ ತಾಲೂಕಿನ ತೇರಾಳು ಗ್ರಾಮದ ಗೋಮಾಳದಲ್ಲಿ ಹೂತು ಹಾಕಿರುವುದು ಬಯಲಾದ ನಂತರ ಪೊಲೀಸರು ಅಲ್ಲಿಗೆ ತೆರಳಿ, ಶವವನ್ನು ಹೊರ ತೆಗೆದಿದ್ದಾರೆ. ಹತ್ಯೆಗೀಡಾದ ರೈತ ಮೋಹನ್ ಪತ್ನಿ ಹೇಳಿದ್ದ ಗಣ ಉದ್ಯಮಿ ರಾಜು ಮತ್ತು ಗ್ರಾಪಂ ಮಾಜಿ ಸದಸ್ಯ ಕುಮಾರ್, ಮೋಹನ್‌ನನ್ನು ಅಪಹರಿಸಿ ಹತ್ಯೆ ಮಾಡಿದ್ದು, ಇವರಿಬ್ಬರ ಜೊತೆಗೆ ಜೆಸಿಬಿ ಚಾಲಕ ಸಂದೀಪ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ವಿವರ: ತಮಿಳುನಾಡು ಮೂಲದ ರಾಜು ಎಂಬ ಗಣ ಉದ್ಯಮಿ ನರಗಲು ಗ್ರಾಮದ ಹಲಗೇಗೌಡ ಅಲಿಯಾಸ್ ಕುಮಾರ ಎಂಬುವರ ಜಮೀನನ್ನು ಗುತ್ತಿಗೆಗೆ ಪಡೆದು ಕಳೆದ ೨ ವರ್ಷದಿಂದ ಗಣ ಗಾರಿಕೆ ನಡೆಸುತ್ತಿದ್ದ. ಆ ಜಮೀನಿಗೆ ಹೊಂದಿಕೊAಡAತೆಯೇ ಇರುವ ಕುಮಾರನ ಚಿಕ್ಕಪ್ಪನ ಮಗ ಮೋಹನ್‌ನ ಜಮೀನನ್ನೂ ಕೂಡ ಗಣ ಗಾರಿಕೆಗೆ ನೀಡುವಂತೆ ಒತ್ತಾಯಿಸಿದ್ದ ಎಂದು ಹೇಳಲಾಗಿದ್ದು, ಗಣ ಉದ್ಯಮಿ ರಾಜು ಜೊತೆ ಸೇರಿ ಮೋಹನ್‌ನ ದೊಡ್ಡಪ್ಪನ ಮಗ ಕುಮಾರನೂ ಕೂಡ ಗಣ ಗಾರಿಕೆಗೆ ಜಮೀನು ನೀಡಬೇಕೆಂದು ಮೋಹನ್‌ಗೆ ಒತ್ತಾಯ ಮಾಡುತ್ತಿದ್ದ ಎಂದು ಹೇಳಲಾಗಿದ್ದು, ವ್ಯವಸಾಯ ಮಾಡುತ್ತಿರುವ ಜಮೀನನ್ನು ಗಣ ಗಾರಿಕೆಗೆ ನೀಡುವುದಿಲ್ಲ ಎಂದು ಮೋಹನ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮೋಹನ್ ಮೇಲೆ ಗಣ ಉದ್ಯಮಿ ಮತ್ತು ದೊಡ್ಡಪ್ಪನ ಮಗ ಕುಮಾರ ದ್ವೇಷ ಸಾಧಿಸುತ್ತಿದ್ದರು ಎಂದು ಹೇಳಲಾಗಿದೆ.

ಮೇ ೧೫ರಂದು ಮಧ್ಯಾಹ್ನ ೩.೩೦ರ ಸುಮಾರಿನಲ್ಲಿ ಜಮೀನಿನಲ್ಲಿದ್ದ ದನಗಳನ್ನು ಮನೆಗೆ ಹೊಡೆದುಕೊಂಡು ಬರುತ್ತೇನೆ ಎಂದು ಪತ್ನಿಗೆ ತಿಳಿಸಿ, ಮೋಹನ್ ಬೈಕ್‌ನಲ್ಲಿ ತೆರಳಿದ್ದಾರೆ. ಸಂಜೆ ೪.೩೦ರ ವೇಳೆಗೆ ಮಳೆ ಬರುವ ವಾತಾವರಣವಿದ್ದ ಕಾರಣ ಯಮುನಾ ಪತಿಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಹುಡುಕಾಟ ನಡೆಸಿದ ವೇಳೆ ಅದ್ದಿಹಳ್ಳಿ ಹಾಲಿನ ಡೈರಿ ಮುಂಭಾಗ ಮೋಹನ್‌ನ ಬೈಕ್ ಪತ್ತೆಯಾಗಿದೆ.

ಮೋಹನ್‌ನನ್ನು ಗಣ ಉದ್ಯಮಿ ರಾಜು ಮತ್ತು ದೊಡ್ಡಪ್ಪನ ಮಗ, ಗ್ರಾಪಂ ಮಾಜಿ ಸದಸ್ಯ ಕುಮಾರ ಅಪಹರಣ ಮಾಡಿದ್ದಾರೆ ಎಂದು ಶಂಕಿಸಿದ ಮೋಹನ್ ತಾಯಿ ಅದೇ ದಿನ ರಾತ್ರಿ ೧೧.೩೦ಕ್ಕೆ ದೂರು ನೀಡಲು ಬಿಂಡಿಗನವಿಲೆ ಠಾಣೆಗೆ ತೆರಳಿದಾಗ ಪೊಲೀಸರು ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮರು ದಿನ ಯಮುನಾ ಅವರು ಠಾಣೆಗೆ ತೆರಳಿ ತನ್ನ ಪತಿಯನ್ನು ರಾಜು ಮತ್ತು ಕುಮಾರ ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದರೆ, ಅದನ್ನು ಸ್ವೀಕರಿಸಲು ನಿರಾಕರಿಸಿದ ಪೊಲೀಸರು, ಮೋಹನ್ ನಾಪತ್ತೆಯಾಗಿದ್ದಾರೆ ಎಂದು ದೂರನ್ನು ಬರೆಸಿಕೊಂಡು ಯಮುನಾ ಅವರನ್ನು ಸಾಗಹಾಕಿದ್ದಾರೆ.

ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷö್ಯ ವಹಿಸಿದ್ದರಿಂದ ಯಮುನಾ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮಂಡ್ಯ ಎಸ್ಪಿ ಯತೀಶ್ ಅವರನ್ನು ಮೇ ೧೯ರಂದು ಭೇಟಿ ಮಾಡಿದ್ದಾರೆ. ಎಸ್ಪಿ ನಿರ್ದೇಶನದ ಮೇರೆಗೆ ಅಂದು ರಾತ್ರಿ ೮ ಗಂಟೆ ಸಮಯದಲ್ಲಿ ಬಿಂಡಿಗನವಿಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಿದ ನಾಗಮಂಗಲ ಡಿವೈಎಸ್‌ಪಿ ನವೀನ್‌ಕುಮಾರ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸುಧಾಕರ್ ಬಿಂಡಿಗನವಿಲೆ ಠಾಣೆ ಸಬ್‌ಇನ್ಸ್ಪೆಕ್ಟರ್ ಶ್ರೀಧರ್ ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ ಫಲವಾಗಿ ಶುಕ್ರವಾರ ಗಣ ಉದ್ಯಮಿ ರಾಜುವನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ರೈತ ಮೋಹನ್‌ನನ್ನು ಅಪಹರಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮೇ ೧೫ರಂದು ಮಧ್ಯಾಹ್ನ ಜಮೀನಿನ ಬಳಿ ತೆರಳಿದ ಮೋಹನ್‌ನನ್ನು ಗಣ ಉದ್ಯಮಿ ರಾಜು ಮತ್ತಿತರರು ಕಾರಿನಲ್ಲಿ ಅಪಹರಿಸಿದ್ದಾರೆ. ಕಾರಿನಲ್ಲೇ ಉಸಿರುಗಟ್ಟಿಸಿ ಆತನನ್ನು ಹತ್ಯೆ ಮಾಡಿದ ನಂತರ ಹೊಳೆನರಸೀಪುರ ತಾಲೂಕು ತೇರಾಳು ಗ್ರಾಮದ ಗೋಮಾಳದಲ್ಲಿ ಜೆಸಿಬಿಯಿಂದ ಗುಂಡಿ ತೆಗೆದು ಶವವನ್ನು ಹೂತು ಹಾಕಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿಯನ್ನು ತೇರಾಳು ಗ್ರಾಮಕ್ಕೆ ಕರೆದೊಯ್ದ ಪೊಲೀಸರು ಹೊಳೆನರಸೀಪುರ ತಹಸೀಲ್ದಾರರ ಸಮ್ಮುಖದಲ್ಲಿ ಶವವನ್ನು ಹೊರ ತೆಗೆದರು. ಸ್ಥಳದಲ್ಲೇ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ವಾರಸುದಾರರ ವಶಕ್ಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಗಣ ಉದ್ಯಮಿ ರಾಜು, ಕೊಲೆಯಾದ ಮೋಹನ್ ದೊಡ್ಡಪ್ಪನ ಮಗ, ಗ್ರಾಪಂ ಸದಸ್ಯ ಕುಮಾರ್ ಮತ್ತು ಜೆಸಿಬಿ ಚಾಲಕ ಸಂದೀಪ್‌ನನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ಮುಂದು ವರೆಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಯರ‍್ಯಾರು ಭಾಗಿಯಾಗಿದ್ದಾರೆ ಎಂಬುದು ಮುಂದಿನ ವಿಚಾರಣೆಯಲ್ಲಿ ತಿಳಿಯಬೇಕಾಗಿದೆ ಡಿವೈಎಸ್‌ಪಿ ನವೀನ್‌ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಕೊಲೆಯಾದ ಮೋಹನ್ ಜೆಡಿಎಸ್ ಕಾರ್ಯಕರ್ತನಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಸುರೇಶ್‌ಗೌಡ ಗಣ ಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೇ, ಮೋಹನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

 

ಮೋಹನನ ತಾಯಿ, ಹೆಂಡತಿ ಮೊರೆ ಕೇಳದ ಪೊಲೀಸರು!
ಜಮೀನಿನಿಂದ ದನಗಳನ್ನು ಹೊಡೆದುಕೊಂಡು ಬರುತ್ತೇನೆ ಎಂದು ಮೇ ೧೫ರಂದು ಮಧ್ಯಾಹ್ನ ಮನೆಯಿಂದ ತೆರಳಿದ ರೈತ ಮೋಹನ್ ಅಪ ಹರಿಸ್ಪಟ್ಟಿದ್ದಾನೆ ಎಂಬುದಕ್ಕೆ ಸಾಂದರ್ಭಿಕ ಸಾಕ್ಷö್ಯವನ್ನು ಗ್ರಾಮಸ್ಥರ ಸಹಕಾರ ದಿಂದ ಮೋಹನ್‌ನ ಪತ್ನಿ ಯಮುನಾ ಅವರೇ ಬಿಂಡಿಗನವಿಲೆ ಪೊಲೀಸ ರಿಗೆ ಒದಗಿಸಿದ್ದರೂ ಕೂಡ ಅವರು ಅದನ್ನು ಗಣನೆಗೇ ತೆಗೆದುಕೊಂಡಿಲ್ಲ. ಅದ್ದಿಹಳ್ಳಿ ಹಾಲಿನ ಡೈರಿ ಮುಂಭಾಗ ರೈತ ಮೋಹನ್‌ನ ಬೈಕ್ ಪತ್ತೆಯಾದ ಹಿನ್ನೆಲೆಯಲ್ಲಿ ಮೋಹನ್‌ನ ಜಮೀನು ಮತ್ತು ಅದ್ದಿಹಳ್ಳಿ ಹಾಲಿನ ಡೈರಿ ಮಧ್ಯೆ ಇರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಗ್ರಾಮಸ್ಥರು ಪರಿಶೀಲಿಸಿದ್ದಾರೆ.

ಆ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮೋಹನ್‌ನ ಬೈಕ್ ಅನ್ನು ತಳ್ಳಿ ಕೊಂಡು ಹೋಗುತ್ತಿರುವುದು ಹಾಗೂ ಅನಂತರ ಮಾರುತಿ ಓಮ್ನಿವೊಂದು ತೆರಳುತ್ತಿರುವುದು ಕಂಡು ಬಂದಿದೆ. ಗಣ ಗಾರಿಕೆಗೆ ಮೋಹನ್ ಜಮೀನು ನೀಡದೇ ಇದ್ದಿದ್ದರಿಂದ ಗಣ ಉದ್ಯಮಿ ರಾಜು ಮತ್ತು ಗ್ರಾಪಂ ಮಾಜಿ ಸದಸ್ಯ ಕುಮಾರ್ ಅವರುಗಳು ಮೋಹನ್ ವಿರುದ್ಧ ದ್ವೇಷ ಸಾಧಿಸುತ್ತಿದ್ದುದು, ಅಲ್ಲದೇ ಇತ್ತೀಚೆಗೆ ರಾಜು ನಡೆಸುತ್ತಿದ್ದ ಗಣ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದ ರಿಂದ ಈ ದಾಳಿಯನ್ನು ಮೋಹನ್ ಮಾಡಿಸಿದ್ದಾನೆ
ಎಂದು ಭಾವಿಸಿ ಅವರಿಬ್ಬರೂ ಆತನ ವಿರುದ್ಧ ಕತ್ತಿ ಮಸೆಯುತ್ತಿರುವುದನ್ನು ಅರಿತಿದ್ದ ಗ್ರಾಮಸ್ಥರು, ಮೋಹನ್‌ನನ್ನು ರಾಜು ಮತ್ತು ಕುಮಾರ್ ಅಪಹರಣ ಮಾಡಿದ್ದಾರೆ ಎಂಬ ನಿರ್ಧಾರಕ್ಕೂ ಬಂದುಬಿಟ್ಟಿದ್ದರು.

ಹೀಗಾಗಿ ಮೇ ೧೬ರಂದು ಬಿಂಡಿಗನವಿಲೆ ಠಾಣೆಗೆ ತೆರಳಿದ ಯಮುನಾ, ತನ್ನ ಪತಿಯನ್ನು ರಾಜು ಮತ್ತು ಕುಮಾರ್ ಅಪಹರಿಸಿದ್ದಾರೆ ಎಂದು ಖಚಿತವಾಗಿ ತಿಳಿಸಿದ್ದಲ್ಲದೇ ಅದೇ ರೀತಿ ದೂರನ್ನೂ ಬರೆದುಕೊಂಡು ಹೋಗಿದ್ದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಲು ನಿರಾಕರಿಸಿದಾಗ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಬಗ್ಗೆ ಕೂಡ ತಿಳಿಸಿ ರಾಜು ಮತ್ತು ಕುಮಾರ್‌ನನ್ನು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕೊನೆಗೆ ಅನ್ಯ ಮಾರ್ಗವಿಲ್ಲದೆ ಪೊಲೀಸರು ಹೇಳಿದಂತೆ ನಾಪತ್ತೆ ದೂರು ನೀಡಿ ಬಂದಿದ್ದಾರೆ. ಮೂರು ದಿನಗಳಾದರೂ ಪೊಲೀಸರು ರಾಜು ಮತ್ತು ಕುಮಾರ್‌ನನ್ನು ವಿಚಾರಣೆಯೇ ಮಾಡದೇ ಇದ್ದುದರಿಂದ ಗ್ರಾಮಸ್ಥರ ಸಲಹೆಯಂತೆ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಮೇ ೧೯ರಂದು ಮಂಡ್ಯಗೆ ತೆರಳಿ ಎಸ್ಪಿ ಯತೀಶ್ ಅವರನ್ನು ಭೇಟಿ ಮಾಡಿ ಎಲ್ಲಾ ವಿದ್ಯಮಾನಗಳನ್ನೂ ತಿಳಿಸಿದ್ದಾರೆ.

ಕೊನೆಗೆ ಎಸ್ಪಿ ನಿರ್ದೇಶನದಂತೆ ಅಂದು ರಾತ್ರಿ ೮ ಗಂಟೆಗೆ ಬಿಂಡಿಗನವಿಲೆ ಠಾಣೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಮರುದಿನ ರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಒಂದು ವೇಳೆ ಯಮುನಾ ಮಂಡ್ಯಗೆ ತೆರಳಿ ಎಸ್ಪಿ ಅವರನ್ನು ಭೇಟಿ ಮಾಡದೇ ಇದ್ದಲ್ಲಿ ಈ ಪ್ರಕರಣವೇ ಮುಚ್ಚಿಹೋಗು ತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದು, ಆಧಾರ ಸಮೇತ ಅಪಹರಣ ದೂರು ನೀಡಿ ದರೂ ಸ್ವೀಕರಿಸಲು ನಿರಾಕರಿಸಿ ನಾಪತ್ತೆ ದೂರು ಬರೆಸಿಕೊಂಡಿದ್ದಲ್ಲದೇ ಅನಂತರವೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇದ್ದ ಬಿಂಡಿಗನವಿಲೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಧರ್ ಅವರನ್ನು ಅಮಾನತುಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Translate »