ಮರಕ್ಕೆ ಟೆಂಪೋ ಟ್ರಾಕ್ಸ್ ಡಿಕ್ಕಿ: 8 ಮಂದಿ ದಾರುಣ ಸಾವು ಮಸಣವಾಯ್ತುಮದುವೆ ಮನೆ
ಮೈಸೂರು

ಮರಕ್ಕೆ ಟೆಂಪೋ ಟ್ರಾಕ್ಸ್ ಡಿಕ್ಕಿ: 8 ಮಂದಿ ದಾರುಣ ಸಾವು ಮಸಣವಾಯ್ತುಮದುವೆ ಮನೆ

May 22, 2022

ಧಾರವಾಡ, ಮೇ ೨೧- ಟೆಂಪೋ ಟ್ರಾಕ್ಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ೮ ಜನ ಮೃತಪಟ್ಟಿದ್ದು, ೧೩ ಮಂದಿ ಗಾಯಗೊಂಡಿದ್ದಾರೆ.

ಬಾಡ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಪ ಘಾತಕ್ಕೀಡಾದ ಕ್ರೂಸರ್‌ನಲ್ಲಿ ೨೦ಕ್ಕೂ ಹೆಚ್ಚು ಜನ ಪ್ರಯಾ ಣ ಸುತ್ತಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿ ಮನ್ಸೂರು ಗ್ರಾಮದಿಂದ ಬೆನ ಕಟ್ಟಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭ ಸಕ್ಕೆ ನಾಲ್ವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ನಾಲ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತ ಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಇದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಎಸ್.ಪಿ.ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿ ದರು. ಮನ್ಸೂರು ಗ್ರಾಮ ದಿಂದ ನಿಗದಿ (ಬೆನಕನಕಟ್ಟಿ)ಗೆ ಹೋಗುವಾಗ ಈ ಘಟನೆ ನಡೆ ದಿದೆ. ಅನನ್ಯ, ಹರೀಶ, ಶಿಲ್ಪಾ, ನೀಲವ್ಚ, ಮಧುಶ್ರೀ, ಮಹೇ ಶ್ವರಯ್ಯ, ಶಂಭುಲಿAಗಯ್ಯ, ಸಾವನ್ನಪ್ಪಿದ ದುರ್ದೆÊವಿಗಳು.

 

Translate »