ಗ್ರಾಪಂ ಸಿಬ್ಬಂದಿ ಮೇಲೆ ಮತ್ತು ಬರುವ ಔಷಧಿ ಸಿಂಪಡಿಸಿ ಚಿನ್ನಾಭರಣ, ಮೊಬೈಲ್ ಕಳವು
ಮೈಸೂರು

ಗ್ರಾಪಂ ಸಿಬ್ಬಂದಿ ಮೇಲೆ ಮತ್ತು ಬರುವ ಔಷಧಿ ಸಿಂಪಡಿಸಿ ಚಿನ್ನಾಭರಣ, ಮೊಬೈಲ್ ಕಳವು

May 22, 2022

ಕೌಲಂದೆ,ಮೇ ೨೧-ಗ್ರಾಮ ಪಂಚಾಯಿತಿ ಮಹಿಳಾ ಕ್ಲರ್ಕ್ವೊಬ್ಬರಿಗೆ ಮತ್ತು ಬರುವ ಔಷಧಿ ಸಿಂಪಡಿಸಿ ಚಿನ್ನಾಭರಣ ಮತ್ತು ಮೊಬೈಲ್ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ನಂಜನಗೂಡು ತಾಲೂಕು ಹೆಮ್ಮರಗಾಲ ನಿವಾಸಿ ನೇರಳೆ ಗ್ರಾಮ ಪಂಚಾಯಿತಿ ಕ್ಲರ್ಕ್ ಎನ್. ಶಿಲ್ಪಾ(೩೩) ಚಿನ್ನಾಭರಣ ಹಾಗೂ ಮೊಬೈಲ್ ಕಳೆದುಕೊಂಡವರಾಗಿದ್ದು, ಇವರು ಮೇ ೧೮ರಂದು ಗ್ರಾಪಂ ಕಚೇರಿಗೆ ತೆರಳಿದ್ದು, ಅನಾರೋಗ್ಯ ಕಾರಣ ಕಾರ್ಯ ದರ್ಶಿಯಿಂದ ಅನುಮತಿ ಪಡೆದು ಸ್ವಗ್ರಾಮಕ್ಕೆ ತೆರಳಲು ಕಚೇರಿ ಮುಂಭಾಗ ಬಂದಾಗ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಾಗೂ ಮಹಿಳೆ ಇವರನ್ನು ಕಾರಿನಲ್ಲಿ ಕುಳ್ಳಿರಿಸಿ ಕೊಂಡು ಬದನವಾಳು ಬಸ್ ನಿಲ್ದಾಣದಲ್ಲಿ ಇಳಿಸಿದ್ದಾರೆ. ಅಲ್ಲಿದ್ದ ತಮ್ಮ ಪತಿಯ ಪುಸ್ತಕದ ಅಂಗಡಿಗೆ ಶಿಲ್ಪಾ ಅವರು ತೆರಳಿದಾಗ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಇಲ್ಲದೇ ಇರುವ ಬಗ್ಗೆ ಪತಿ ಗಮನ ಸೆಳೆದಿದ್ದಾರೆ. ಪರಿಶೀಲನೆ ಮಾಡಿ ನೋಡಿದಾಗ ಚಿನ್ನದ ಸರ, ಕಿವಿಯಲ್ಲಿದ್ದ ಓಲೆ ಕಾಣ ಸಲಿಲ್ಲ. ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ಮೊಬೈಲ್ ಕೂಡ ನಾಪತ್ತೆಯಾಗಿದೆ. ಆದರೆ, ಮೊಬೈಲ್‌ನಲ್ಲಿದ್ದ ೨ ಸಿಮ್ ಕಾರ್ಡ್ಗಳನ್ನು ಕಳಚಿ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದು ಕಂಡುಬAದಿದೆ. ಕಾರಿನಲ್ಲಿ ಬಂದ ಅಪರಿಚಿತ ಮಹಿಳೆ ಮತ್ತು ವ್ಯಕ್ತಿ ತಮಗೆ ಯಾವುದೋ ಮತ್ತು ಬರುವ ಔಷಧಿ ಸಿಂಪಡಿಸಿ ಚಿನ್ನಾಭರಣ ಮತ್ತು ಮೊಬೈಲ್ ಕದ್ದಿದ್ದಾರೆ ಎಂದು ಶಿಲ್ಪಾ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಕೌಲಂದೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Translate »