ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ರಾಜೀನಾಮೆ?
ಮೈಸೂರು

ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ರಾಜೀನಾಮೆ?

May 21, 2022

 ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಹಠಾತ್ ದೆಹಲಿಗೆ ದೌಡು

 ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ನಂತರ ವರಿಷ್ಠರಿಂದ ಅಧಿಕೃತ ಘೋಷಣೆ

ಇತ್ತೀಚೆಗೆ ತ್ರಿಪುರದಲ್ಲೂ ದಿಢೀರ್ ನಾಯಕತ್ವ ಬದಲಾವಣೆ ಆಗಿತ್ತು ಇದುವರೆಗೆ ಯುಪಿ ಹೊರತು ನಾಯಕತ್ವ ಬದಲಾವಣೆ ಯಾದ ಕಡೆ ಬಿಜೆಪಿ ಮತ್ತೆ ಗೆದ್ದಿದೆ; ನಾಯಕತ್ವ ಬದಲಾಗದ ಮಹಾರಾಷ್ಟçದಲ್ಲಿ ಸೋತಿದೆ

ಬೆಂಗಳೂರು, ಮೇ. ೨೦(ಕೆಎಂಶಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ವರಿಷ್ಠರ ಆದೇಶದ ಮೇರೆಗೆ ಹಠಾತ್ತನೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಅವರು ಇಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಯನ್ನು ರಾಷ್ಟಿçÃಯ ನಾಯಕರಿಗೆ ನೀಡಿದ್ದಾರೆನ್ನಲಾಗಿದೆ.

ವರಿಷ್ಠರ ಆದೇಶದ ಮೇರೆಗೆ ರಾಜೀನಾಮೆ ನೀಡಿದ್ದು, ರಾಜ್ಯಸಭಾ, ವಿಧಾನಪರಿಷತ್ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದಿನ ಕಾರ್ಯಕ್ರಮದಂತೆ ಮುಖ್ಯಮಂತ್ರಿ ಅವರು ನಾಳೆ ರಾತ್ರಿ ದಾವೋಸ್‌ಗೆ ತೆರಳಿ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸಿ ಮೇ ೨೬ ರಂದು ನಗರಕ್ಕೆ ಹಿಂತಿರುಗಲಿದ್ದಾರೆ.
ನಂತರ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ನಡೆಯು ತ್ತಿರುವ ದೈವಾರ್ಷಿಕ ಚುನಾ ವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಧಿಕೃತವಾಗಿ ರಾಜೀ ನಾಮೆ ಪ್ರಕಟಿಸಲಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ.

ಆದರೆ ಮುಖ್ಯಮಂತ್ರಿಯವರ ಆಪ್ತರು ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಹಾಗೂ ಸಂಪುಟ ಪುನರ್ ರಚನೆಗೆ ಅನುಮತಿ ಪಡೆಯಲು ದೆಹಲಿಗೆ ತೆರಳಿ ದ್ದಾರೆ ಎಂದು ಹೇಳುತಿದ್ದಾರೆ. ಈ ಹಿಂದೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಇದೇ ಮಾತುಗಳು ಅವರ ವಲಯದಿಂದ ಕೇಳಿ ಬಂದಿದ್ದವು. ಕಳೆದ ಕೆಲವು ತಿಂಗಳಿAದ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ಪ್ರಸ್ತಾಪ ಪಕ್ಷದ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿತ್ತು.

ಇತ್ತೀಚೆಗೆ ಬಿಜೆಪಿ ನಾಯಕರು ದೆಹಲಿಯಲ್ಲಿ ಆರ್‌ಎಸ್‌ಎಸ್ ಮುಖಂಡರೊಟ್ಟಿಗೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದರಾದರೂ ಅಂತಿಮವಾಗಿ ಪ್ರಧಾನಿಯವರ ನಿರ್ಧಾರಕ್ಕೆ ಬಿಟ್ಟಿದ್ದರು.

ಈ ಬೆಳವಣ ಗೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಎರಡು ಬಾರಿ ಪ್ರವಾಸ ಕೈಗೊಂಡಿ ದ್ದರು. ಇದೇ ವೇಳೆ ಮುಖ್ಯಮಂತ್ರಿ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಹಿಂತಿರುಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ರಾಷ್ಟಿçÃಯ ಕಾರ್ಯಕಾರಿಣ ಯಲ್ಲೂ ಕರ್ನಾಟಕದಲ್ಲಿನ
ನಾಯಕತ್ವ ಬದಲಾವಣೆ ಮತ್ತು ಮುಂಬರುವ ವಿಧಾನಸಭೆ ಚುನಾವಣೆ ಕುರಿತಂತೆ ಚರ್ಚೆ ನಡೆದಿದೆ. ಇದರ ಬೆನ್ನಲ್ಲೆ ಮುಖ್ಯಮಂತ್ರಿಯವರು ಇಂದು ತಮ್ಮ ಮಧ್ಯಾಹ್ನದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಹಠಾತ್ತನೆ ದೆಹಲಿಗೆ ತೆರಳಿದ್ದಾರೆ. ದೆಹಲಿಯಿಂದ ನಗರಕ್ಕೆ ಹಿಂತಿರುಗುವ ಅಧಿಕೃತ ಸಮಯ ಪ್ರಕಟಗೊಂಡಿಲ್ಲ.

ಕಳೆದ ವಾರ ತ್ರಿಪುರ ಮುಖ್ಯಮಂತ್ರಿಯಾಗಿದ್ದ ಬಿಪ್ಲಬ್‌ಕುಮಾರ್ ದೇಬ್ ಅವರನ್ನು ಇದೇ ರೀತಿ ದೆಹಲಿಗೆ ದಿಢೀರನೆ ಕರೆಸಿಕೊಂಡ ವರಿಷ್ಠರು ರಾಜೀನಾಮೆ ಪಡೆದಿದ್ದರು.ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಹೊರ ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ವಿಷಯವನ್ನು ಬಿಪ್ಲಬ್ ಬಹಿರಂಗಪಡಿಸಿದರು.

ಉತ್ತರ ಪ್ರದೇಶ ಹೊರತುಪಡಿಸಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಮಾಡಿ ಅಲ್ಲೆಲ್ಲಾ ಮತ್ತೆ ಅಧಿಕಾರಕ್ಕೆ ಬಂದಿದೆ. ಮಹಾರಾಷ್ಟç ಸೇರಿದಂತೆ ಎಲ್ಲಿ ನಾಯಕತ್ವ ಬದಲಾವಣೆ ಮಾಡಿಲ್ಲವೋ ಅಂತಹ ಕಡೆ ಬಿಜೆಪಿ ಪರಾಭವಗೊಂಡಿದೆ. ಇದೇ ಭಯದಿಂದ ಕರ್ನಾಟಕದಲ್ಲೂ ಹೊಸ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ವರಿಷ್ಠರು ಮುಂದಾಗಿದ್ದಾರೆ ಎಂದು ಇದೇ ಮೂಲಗಳು ತಿಳಿಸಿವೆ.

Translate »