ಮೈಸೂರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ

May 21, 2022

ಜೂ.೨೧ರಂದು ಅಂತಾರಾಷ್ಟಿçÃಯ ಯೋಗ ದಿನಾಚರಣೆ

 ಸಂಸದ ಪ್ರತಾಪ್ ಸಿಂಹ ಮನವಿಗೆ ಮನ್ನಣೆ
 ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಆಯುಷ್ ಕಾರ್ಯದರ್ಶಿ ಪತ್ರ

ಮೈಸೂರು, ಮೇ ೨೦(ಎಸ್‌ಬಿಡಿ)- ೮ನೇ ಅಂತಾರಾಷ್ಟಿçÃಯ ಯೋಗ ದಿನಾ ಚರಣೆ ಅಂಗವಾಗಿ ಬರುವ ಜೂನ್ ೨೧ರಂದು ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಸಾಮೂಹಿಕ ಯೋಗ ಪ್ರದರ್ಶನದ ನೇತೃತ್ವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಹಿಸಲಿದ್ದಾರೆ.

ಸ್ವಾತಂತ್ರೊö್ಯÃತ್ಸವ ಅಮೃತ ಮಹೋ ತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಅಂತರ ರಾಷ್ಟಿçÃಯ ಯೋಗ ದಿನವನ್ನು ವಿಶಿಷ್ಟವಾಗಿ ಆಚರಿಸಲು ಆಯುಷ್ ಸಚಿವಾಲಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಲ್ಲದೆ ದೇಶದ ೭೫ ಐತಿಹಾಸಿಕ ಸ್ಥಳಗಳಲ್ಲಿ ಸಾಮೂ ಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲು ಸಚಿವಾಲಯ ನಿರ್ಧರಿಸಿದ್ದು, ಆ ನಿಟ್ಟಿ ನಲ್ಲಿ ಈಗಾಗಲೇ ಕ್ರಮ ಕೈಗೊಂಡಿದೆ.

ಈ ಬಾರಿ ಅಂತಾರಾಷ್ಟಿçÃಯ ಯೋಗ ದಿನಾಚರಣೆಯ ಪ್ರಮುಖ ಕಾರ್ಯ ಕ್ರಮ ಮೈಸೂರಿನಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಅದರ ನೇತೃತ್ವ ವಹಿಸಲಿ ದ್ದಾರೆ. ಈ ವರ್ಷದ ಅಂತಾರಾಷ್ಟಿçÃಯ ಯೋಗ ದಿನವನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡಿAಗ್ ಇಂಡಿಯಾ ಆಗಿ ಬಿಂಬಿಸುವ ಮಹದುದ್ದೇಶವೂ ಇದೆ. ಯೋಗ ಪ್ರದರ್ಶನದಲ್ಲಿ ಸಾವಿರಾರು ಜನ ಭಾಗಿ ಯಾಗುವುದರಿಂದ ಸಾಮಾನ್ಯ ಯೋಗ ಶಿಷ್ಠಾಚಾರ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೇಚಾ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ಗೆ ನಿನ್ನೆ ಅಧಿಕೃತ ಪತ್ರ ರವಾನಿಸಿದ್ದಾರೆ.

ಪ್ರತಾಪ್ ಸಿಂಹ ಆಹ್ವಾನ: ಜೂನ್ ೨೧ರ ಅಂತಾರಾಷ್ಟಿçÃಯ ಯೋಗ ದಿನದಂದು ೧,೧೦,೦೦೦ಕ್ಕೂ ಅಧಿಕ ಮಂದಿ ಪಾಲ್ಗೊಂಡ ಸಾಮೂಹಿಕ ಯೋಗ ಪ್ರದರ್ಶನದ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಬರೆಯಲು ಮೈಸೂರು ಸಜ್ಜಾಗುತ್ತಿದ್ದು, ಈ ಬೃಹತ್ ಯೋಗ ಪ್ರದರ್ಶನಕ್ಕೆ ತಾವು ಆಗಮಿಸಬೇಕೆಂದು ಸಂಸದ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿಯವರನ್ನು ಖುದ್ದು ಆಹ್ವಾನಿಸಿದ್ದರು.

ತಿಂಗಳ ಹಿಂದೆ ಕೇಂದ್ರ ಸಚಿವ, ರಾಜ್ಯದವರೇ ಆದ ಪ್ರಹ್ಲಾದ್ ಜೋಷಿ ಅವರೊಂದಿಗೆ ಪ್ರತಾಪ್ ಸಿಂಹ, ತಮ್ಮ ಪತ್ನಿ ಅರ್ಪಿತಾ ಹಾಗೂ ಪುತ್ರಿ ವಿಪಂಚಿಯೊAದಿಗೆ ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಿ, ಆಹ್ವಾನಿಸಿದ್ದರು. ೨೦೧೭ರ ಅಂತಾರಾಷ್ಟಿçÃಯ ಯೋಗ ದಿನಾಚರಣೆಯಂದು ೫೫,೫೦೦ಕ್ಕೂ ಅಧಿಕ ಮಂದಿ ಸಾಮೂಹಿಕ ಯೋಗ ಪ್ರದರ್ಶಿಸಿದ್ದರು. ಅದು ಗಿನ್ನಿಸ್ ವಿಶ್ವ ದಾಖಲೆಯಾಗಿತ್ತು. ಅದರ ಶ್ರೇಯಸ್ಸನ್ನು ಪ್ರಧಾನಿಗಳಾದ ತಮಗೆ ಅರ್ಪಿಸಲಾಗಿತ್ತು. ೨೦೧೮ರಲ್ಲಿ ರಾಜಸ್ಥಾನದ ಕೋಟಾದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ೧,೦೦,೯೮೪ ಮಂದಿ ಭಾಗವಹಿಸುವ ಮೂಲಕ ಮೈಸೂರಿನ ಗಿನ್ನಿಸ್ ದಾಖಲೆ ಮುರಿಯ ಲಾಗಿತ್ತು. ಈ ಬಾರಿ ಮತ್ತೆ ದಾಖಲೆ ಬರೆಯಲು ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ಈ ಒಂದು ಸುಸಂದರ್ಭದಲ್ಲಿ ತಾವೂ ಭಾಗಿಯಾಗುವಂತೆ ಪ್ರತಾಪ್ ಸಿಂಹ ಕೋರಿದ್ದರು.

Translate »