ಕಾಲ್ನಡಿಗೆ ಜಾಥಾ, ಮಾನವ ಸರಪಳಿ  ಮೂಲಕ ಮತದಾನದ ಬಗ್ಗೆ ಜಾಗೃತಿ
ಮೈಸೂರು

ಕಾಲ್ನಡಿಗೆ ಜಾಥಾ, ಮಾನವ ಸರಪಳಿ ಮೂಲಕ ಮತದಾನದ ಬಗ್ಗೆ ಜಾಗೃತಿ

April 12, 2023

ಮೈಸೂರು,ಏ.11-ಜಿಲ್ಲೆಯ ಹೆಚ್.ಡಿ. ಕೋಟೆ ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾ ಹಾಗೂ ಮಾನವ ಸರಪಳಿ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ ವತಿ ಯಿಂದ ತಾಲೂಕು ಪಂಚಾಯ್ತಿ ಆವರಣ ದಿಂದ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ, ಪುರಸಭೆ ಮುಂಭಾಗ, ಮೇಟಿ ಕುಪ್ಪೆ ಸರ್ಕಲ್ ಹಾಗೂ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ, ಮತ ದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. `ಮತದಾನ ನಮ್ಮ ಹಕ್ಕು’, `ಜಾಗೃತ ಮತ ದಾರ ಪ್ರಜಾಪ್ರಭುತ್ವದ ನೇತಾರ’, `ನಿಮ್ಮ ಬೆರಳಿಗೆ ಇಂಕು ಪ್ರಜಾಪ್ರಭುತ್ವಕ್ಕೆ ಲಿಂಕು’ ಇನ್ನಿತರ ಘೋಷಣೆ ಕೂಗಲಾಯಿತು. ಪುರ ಸಭೆ ಮುಂಭಾಗದ ರಸ್ತೆಯಲ್ಲಿ ತೋರು ಬೆರಳಿಗೆ ಇಂಕು ಹಾಕಿರುವ ಚಿತ್ರ ಬಿಡಿಸಿ, ಮೇ 10ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಿದ್ದು ವಿಶೇಷವಾಗಿತ್ತು. ಹೆಚ್.ಡಿ.ಕೋಟೆ ತಹಸೀ ಲ್ದಾರ್ ಮಹೇಶ್ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿ ಯೊಬ್ಬ ಪ್ರಜೆಯ ಹಕ್ಕು. ಅದನ್ನು ತಪ್ಪದೇ ಚಲಾಯಿಸಬೇಕು. ಎಲ್ಲಾ ಮತದಾರರು ಚುನಾವಣಾ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸಬೇಕು. ದೇಶದ ಅಭಿವೃದ್ಧಿಗೆ ಒಂದೊಂದು ಮತವೂ ಮಹತ್ವದ್ದಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ತೋರದೆ ಸ್ವಇಚ್ಛೆ ಯಿಂದ ಮತಗಟ್ಟೆಗೆ ತೆರಳಿ ಮತಚಲಾಯಿ ಸಬೇಕು. ಆ ಮೂಲಕ ನೆರೆಹೊರೆಯವ ರಿಗೂ ಮತದಾನಕ್ಕೆ ಪ್ರೇರೇಪಣೆ ನೀಡ ಬೇಕು ಎಂದು ಮನವಿ ಮಾಡಿದರು.

ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜೆರಾಲ್ಡ್ ರಾಜೇಶ್ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ಮತ ದಾರರೂ ಮತ ಚಲಾಯಿಸಬೇಕು. ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಮೂಲಕ ಸಾಕಷ್ಟು ಕಾರ್ಯಕ್ರಮ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್, ತಾಲೂಕು ಯೋಜ ನಾಧಿಕಾರಿ ರಂಗಸ್ವಾಮಿ, ಸಹಾಯಕ ನಿರ್ದೇ ಶಕ ಕಿರಣ್ ಆರ್.ಜಹಗೀರ್‍ದಾರ್ ಸೇರಿ ದಂತೆ ಅನೇಕ ಅಧಿಕಾರಿಗಳು ಇದ್ದರು.

ಕೆಎಸ್‍ಸಿಎ ಮೈಸೂರು ವಿಭಾಗದ ಸಂಯೋಜಕ ಹರಿಕೃಷ್ಣ, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಎ.ಎನ್.ಸಂತೋಷ್ ಕುಮಾರ್, ಕುಲಸಚಿವ ಡಾ.ಎಸ್.ಎ.ಧನರಾಜ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಸಿ.ರೇವಣ್ಣ ಉಪಸ್ಥಿತರಿದ್ದರು.

 

Translate »