ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ಪಂಜಾಬ್‍ನ ಲವ್‍ಲೀ ಪ್ರೊಫೆಷನಲ್ ವಿವಿ ಚಾಂಪಿಯನ್
ಮೈಸೂರು

ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ಪಂಜಾಬ್‍ನ ಲವ್‍ಲೀ ಪ್ರೊಫೆಷನಲ್ ವಿವಿ ಚಾಂಪಿಯನ್

April 12, 2023

ಮೈಸೂರು, ಏ.11(ಎಂಕೆ)- ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್(ಎಸ್‍ಜೆಸಿಇ) ಕಾಲೇಜು ಹಾಗೂ ಕೆಎಸ್‍ಸಿಎ ಸಹಯೋಗದಲ್ಲಿ ನಡೆದ ‘ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆ ಯರ ಕ್ರಿಕೆಟ್ ಪಂದ್ಯಾವಳಿ-2023’ಯಲ್ಲಿ ಪಂಜಾಬ್‍ನ ಲವ್‍ಲೀ ಪ್ರೊಫೆಷನಲ್ ವಿಶ್ವವಿದ್ಯಾನಿಲಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕೆಎಸ್‍ಸಿಎ(ಜೆಎಸ್‍ಎಸ್ ಎಸ್‍ಟಿಯು) ಮೈದಾನ ದಲ್ಲಿ ಮಂಗಳವಾರ ನಡೆದ ಫೈನಲ್ ಹಣಾಹಣೆಯಲ್ಲಿ ಹರಿಯಾಣದ ಎಂಡಿ ವಿಶ್ವವಿದ್ಯಾನಿಲಯ ರೋಹಟಕ್ ತಂಡದ ವಿರುದ್ಧ ಪಂಜಾಬ್‍ನ ಲವ್ ಲೀ ಪ್ರೊಫೆಷ ನಲ್ ವಿಶ್ವವಿದ್ಯಾನಿಲಯ ತಂಡ 4 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್ ಆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣದ ಎಂಡಿ ವಿಶ್ವವಿದ್ಯಾನಿಲಯ ರೋಹಟಕ್ ತಂಡ ನಿಗದಿತ 25 ಓವರ್‍ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು 126 ರನ್‍ಗಳಿಸಲಷ್ಟೇ ಸಾಧ್ಯ ವಾಯಿತು. ತಂಡ ಪರ ಭಾವನಾ 55, ತನು 18 ಗಳಿಸಿದರೆ ಲವ್‍ಲೀ ಪ್ರೊಫೆಷನಲ್ ವಿಶ್ವವಿದ್ಯಾನಿಲಯ ತಂಡ ಪರವಾಗಿ ಸೋನಾಲ್ 17ಕ್ಕೆ3, ಶಿವಾನಿ ಜಂಗಿದ್ 24ಕ್ಕೆ2 ವಿಕೆಟ್ ಪಡೆದು ಗಮನ ಸೆಳೆದರು.

127 ರನ್‍ಗಳ ಗುರಿ ಬೆನ್ನತ್ತಿದ ಪಂಜಾಬ್‍ನ ಲವ್‍ಲೀ ಪ್ರೊಫೆಷನಲ್ ವಿಶ್ವವಿದ್ಯಾನಿಲಯ ತಂಡ 24.1 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 127 ರನ್ ಗಳಿಸುವ ಮೂಲಕ 4 ವಿಕೆಟ್‍ಗಳ ಜಯ ದಾಖಲಿಸಿತು. ನಜ್ಮಾ 65, ದೀಪಾಕುಮಾರಿ 25 ರನ್‍ಗಳ ಕಾಣಿಕೆ ನೀಡಿ ದರು. ಎಂಡಿ ವಿಶ್ವವಿದ್ಯಾನಿಲಯ ಪರವಾಗಿ ಸುಮನ್ ಗುಲಿಯಾ 24ಕ್ಕೆ 1 ವಿಕೆಟ್ ಗಳಿಸಿದ್ದು ಬಿಟ್ಟರೆ ಇನ್ನಿತರೆ ಬೌಲರ್‍ಗಳು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಈ ಮೂಲಕ ಎಂಡಿ ವಿಶ್ವವಿದ್ಯಾನಿಲಯ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

3ನೇ ಸ್ಥಾನ ಪಡೆದ ಗುರುನಾನಕ್ ದೇವ್ ವಿವಿ: ಪುಣೆಯ ಸಾವಿತ್ರಿ ಬಾಯಿ ಪುಲೆ ವಿವಿ ಹಾಗೂ ಪಂಜಾಬ್‍ನ ಗುರುನಾನಕ್ ದೇವ್ ವಿವಿ ನಡುವೆ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಂಜಾಬ್‍ನ ಗುರು ನಾನಕ್ ದೇವ್ ವಿಶ್ವವಿದ್ಯಾನಿಲಯ ತಂಡ 3 ವಿಕೆಟ್ ಗಳ ಜಯದೊಂದಿಗೆ ಟೂರ್ನಿಯಲ್ಲಿ 3ನೇ ಸ್ಥಾನ ಪಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸಾವಿತ್ರಿ ಬಾಯಿ ಪುಲೆ ವಿವಿ ತಂಡ ನಿಗದಿತ 25 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಈಶ್ವರಿ ಸಾವ್ಕರ್ 54, ಪ್ರಿಯಾಂಕಾ ಘೋಡಕೆ ಅಜೇಯ 57 ರನ್ ಗಳಿಸಿದರೆ, ಬೌಲಿಂಗ್‍ನಲ್ಲಿ ಪ್ರಿಯಾಂಕ್ ಮುತ್ರೇಜಾ 31ಕ್ಕೆ 1 ವಿಕೆಟ್ ಪಡೆದರು. 160 ರನ್‍ಗಳ ಗುರಿ ಪಡೆದ ಪಂಜಾಬ್‍ನ ಗುರುನಾನಕ್ ದೇವ್ ವಿಶ್ವವಿದ್ಯಾನಿಲಯ ತಂಡ 24 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್‍ಗಳಿಸುವ ಮೂಲಕ 3ನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಬಹುಮಾನ ವಿತರಣೆ: ಬಳಿಕ ಶ್ರೀ ಜಯಚಾಮ ರಾಜೇಂದ್ರ ಇಂಜಿನಿಯರಿಂಗ್(ಎಸ್‍ಜೆಸಿಇ) ಕಾಲೇ ಜಿನ ಸೆಮಿನಾರ್ ಹಾಲ್‍ನಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕೆಎಸ್‍ಸಿಎ ಮೈಸೂರು ವಿಭಾಗದ ಮುಖ್ಯಸ್ಥ ಬಾಲಚಂದರ್, ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಬಹುಮಾನ ವಿತರಿಸಿ, ಅಭಿನಂದಿ ಸಿದರು. ಅಲ್ಲದೆ ಪಂದ್ಯಾವಳಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ನೆನಪಿನ ಸ್ಮರಣಿಕೆ ನೀಡಲಾಯಿತು.

ನಂತರ ಮಾತನಾಡಿದ ಅವರು, ದೇಶದಲ್ಲಿ ಮಹಿಳಾ ಕ್ರಿಕೆಟ್ ಆರಂಭವಾಗಿ 50 ವರ್ಷಗಳಾಗಿದ್ದು, ಸಾಕಷ್ಟು ಬದಲಾವಣೆ ಜೊತೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗು ತ್ತಿದೆ. ಕ್ರಿಕೆಟ್‍ನಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶ ಗಳಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅರ್ಹತೆ ಪಡೆಯಬೇಕು. ಒಮ್ಮೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡುವ ಅವಕಾಶ ಲಭಿಸಿದರೆ ನಿಮ್ಮ ಜೀವನದ ಸ್ಥಿತಿ- ಗತಿಯೇ ಬದಲಾಗುತ್ತದೆ. ಆದ್ದರಿಂದ ಗುರಿ ತಲುಪುವ ಕಡೆಗೆ ಗಮನವಿಡಿ ಎಂದು ಕಿವಿಮಾತು ಹೇಳಿದರು.

Translate »