ಜನರ ಸಮಸ್ಯೆಗಳಿಗೆ ಪೊಲೀಸರು ಉತ್ತಮವಾಗಿ ಸ್ಪಂದಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು
ಮೈಸೂರು

ಜನರ ಸಮಸ್ಯೆಗಳಿಗೆ ಪೊಲೀಸರು ಉತ್ತಮವಾಗಿ ಸ್ಪಂದಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು

February 24, 2021

ಮೈಸೂರು,ಫೆ.23(ಎಸ್‍ಪಿಎನ್)- ಸಾರ್ವ ಜನಿಕ ಸಮಸ್ಯೆಗಳಿಗೆ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಸ್ಪಂದಿಸಿದರೆ, ರಾಜ್ಯ ಸರ್ಕಾ ರಕ್ಕೆ ಉತ್ತಮ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿಯೇ ಪ್ರಶಿಕ್ಷಣಾರ್ಥಿಗಳು ತಮ್ಮ ವೃತ್ತಿಜೀವನ ಆರಂಭಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸಲಹೆ ನೀಡಿದರು.

ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಡಿವೈಎಸ್‍ಪಿ ಹಾಗೂ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಪ್ರಶಿಕ್ಷಣಾ ರ್ಥಿಗಳ ಜೊತೆಗಿನ ಸಂವಾದದಲ್ಲಿ ಭಾಗ ವಹಿಸಿದ್ದ ಅವರು, ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ನಡುವಿನ ಸಮನ್ವಯ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಹೊಸದಾಗಿ ಪೊಲೀಸ್ ಇಲಾಖೆ ಸೇರು ತ್ತಿರುವವರು ತಾವು ನಿಯೋಜನೆಗೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಕ್ಷತೆ ಯಿಂದ ಕೆಲಸ ಮಾಡಿದರೆ ಎಲ್ಲರೂ ಗೌರವಿಸುತ್ತಾರೆ ಎಂದರು.

ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿ ದರೆ, ಕರ್ನಾಟಕ ಪೊಲೀಸರು ಉತ್ತಮ ವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಲೆ ಪ್ರಕ ರಣದ ಆರೋಪಿಗಳನ್ನು ಬಂಧಿಸಿದ್ದೇ ನಮ್ಮ ಪೊಲೀಸರು, ಹಾಗಾಗಿ ನಮ್ಮ ಪೊಲೀಸ್ ಇಲಾಖೆ ಕರ್ತವ್ಯ ಪ್ರಜ್ಞೆ ದೇಶದಲ್ಲಿಯೇ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಪಿಎ ನಿರ್ದೇಶಕರಾದ ವಿಪುಲ್ ಕುಮಾರ್ ಸಮರ್ಥ ಅಧಿಕಾರಿ. ಅವರ ನೇತೃತ್ವದಲ್ಲಿ ಅಕಾಡೆಮಿಯಲ್ಲಿ ಚಟುವಟಿಕೆ ಗಳು ವ್ಯವಸ್ಥಿತವಾಗಿ ಜರುಗುತ್ತಿವೆ ಹಾಗೂ ಇಲ್ಲಿ ಸ್ವಚ್ಛತೆಗೂ ಒತ್ತು ನೀಡಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಉಸ್ತುವಾರಿ ಸಚಿವನಾಗಿ ಒಂದು ವರ್ಷ ದಿಂದ ಮೈಸೂರಿನಲ್ಲಿ ಕೆಲಸ ಮಾಡು ತ್ತಿದ್ದೇನೆ. ಈವರೆಗೂ ಸಣ್ಣ ಗಲಾಟೆಯೂ ನಡೆದಿಲ್ಲ. ಲಾಕ್‍ಡೌನ್ ಸಂದರ್ಭ ಮೈಸೂರು ಪೊಲೀಸರ ಕಾರ್ಯಗಳು ದಕ್ಷತೆಯಿಂದ ಕೂಡಿತ್ತು ಎಂದರು.

ಪ್ರಶಿಕ್ಷಣಾರ್ಥಿಗಳು ಉತ್ತಮ ತರಬೇತಿ ಪಡೆಯುವ ಜೊತೆಗೆ ಕಾನೂನು ಅಧ್ಯ ಯನ ಬಗೆಗೂ ಹೆಚ್ಚಿನ ಗಮನ ಹರಿಸ ಬೇಕು. ವೃತ್ತಿ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದು ರಿಸಬಹುದು ಎಂದರು.

ಇತ್ತೀಚೆಗೆ ಸಹಕಾರ ಸಂಸ್ಥೆಗಳಲ್ಲಿ ಕೋಟ್ಯಾಂತರ ರೂ ಅಕ್ರಮ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕುರಿತು ಪ್ರಶಿಕ್ಷಣಾರ್ಥಿಯೊಬ್ಬರು ಸಚಿವರ ಗಮನ ಸೆಳೆದಾಗ, ರಾಜ್ಯದಲ್ಲಿ 280 ಸಹ ಕಾರಿ ಬ್ಯಾಂಕ್‍ಗಳಿವೆ. 3-4 ಬ್ಯಾಂಕ್‍ಗಳಲ್ಲಿನ ಅಕ್ರಮಗಳು ಬಯಲಿಗೆ ಬಂದಿವೆ. ಇದನ್ನು ತಡೆಯಲು ಮುಂದೆ ಕಠಿಣ ಕಾನೂನು ತರಲಾಗುತ್ತಿದೆ ಎಂದು ತಿಳಿಸಿದರು.

ಸಹಕಾರ ಬ್ಯಾಂಕ್‍ಗಳನ್ನು ಆರ್‍ಬಿಐ ನಿಯಂತ್ರಣಕ್ಕೆ ಒಳÀಪಡಿಸುತ್ತಿರುವುದಕ್ಕೆ ರಾಜ್ಯ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದೆ. ಇದರಿಂದ ಜನಸಾಮಾನ್ಯರ ಠೇವಣಿ ಹಣಕ್ಕೂ ಭದ್ರತೆ ಇರುತ್ತದೆ. ಈ ನಿಟ್ಟಿನಲ್ಲಿ ಇಂತಹ ಸುಧಾರಣಾ ಕ್ರಮಗಳು ಆರೋಗ್ಯದಾಯಕ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಹಾಗೂ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಪೊಲೀಸ್ ಸಿಬ್ಬಂದಿಗೂ ಸಾಲ ಸೌಲಭ್ಯ ಸಿಗುತ್ತಿದ್ದು, ಇದರ ಸದುಪ ಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ವೇಳೆ ಪೊಲೀಸ್ ಅಧಿ ಕಾರಿಗಳು ಉಪಸ್ಥಿತರಿದ್ದರು.

 

Translate »