ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಸರ್ಕಾರ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು
ಮೈಸೂರು

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಸರ್ಕಾರ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು

February 24, 2021

ಮೈಸೂರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ
ಮೈಸೂರು, ಫೆ.23(ಆರ್‍ಕೆ)-ಚಿಕ್ಕಬಳ್ಳಾಪುರ ಸ್ಫೋಟ ಸಂಬಂಧ ಸರ್ಕಾರ ಇನ್ನಾ ದರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದ ಅವರು, ಒಂದು ಕಡೆ ಅಕ್ರಮ ಗಣಿಗಾರಿಕೆ ಅಂತಾರೆ, ಮತ್ತೊಂ ದೆಡೆ ಗಣಿಗಾರಿಕೆ ನಿಲ್ಲಿಸೋಲ್ಲ ಅಂತಾರೆ, ದೊಡ್ಡ ಪ್ರಮಾಣದಲ್ಲಿ ಸ್ಫೋಟ ಆದರೆ ಸುದ್ದಿ ಆಗುತ್ತೆ ಅಷ್ಟೆ. ಬಹುತೇಕ ಗಣಿಗಾರಿಕೆಯಲ್ಲಿ ಜನಪ್ರತಿನಿಧಿಗಳ ಪಾತ್ರವಿರುತ್ತದೆ. ಹಣ ಸಂಪಾದಿಸಲು ಸ್ಫೋಟ ಮಾಡುತ್ತಾರೆ. ಅದರಿಂದ ಬಡ ಕುಟುಂಬಸ್ಥರ ಪ್ರಾಣ ಹೋಗುತ್ತೆ ಅಷ್ಟೇ. ಇದು ಕೇವಲ ಪೊಲೀಸ್ ಇಲಾಖೆ ವೈಫಲ್ಯವಷ್ಟೇ ಅಲ್ಲ, ವಿಧಾನಸೌಧದ ಮೂರನೇ ಮಹಡಿಯಿಂದಲೇ ವೈಫಲ್ಯವಿದೆ. ಇಂತಹ ಘಟನೆ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂದರು.

ಸಚಿವರು, ಶಾಸಕರು ಒತ್ತಡ ಹಾಕುತ್ತಿರುವುದರಿಂದ ಇಂತಹ ಸಮಸ್ಯೆ ಆಗುತ್ತದೆ. ಮೊದಲು ಬಡವರ ಜೀವ ಉಳಿಸುವ ಕೆಲಸವಾಗಬೇಕು. ಇಂತಹ ಘಟನೆಗಳನ್ನು ನೋಡಿದರೆ ಮುಂದೆ ಇನ್ನಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೋ ಏನೋ ಎಂದು ನುಡಿದರು.

ಕೆಲವು ರಾಜಕಾರಣಿಗಳು ರಾಜ್ಯದಲ್ಲಿ ಭಾರೀ ಗಣಿಗಾರಿಕೆಯಿಂದ ಅನಾಹುತಗಳಾಗು ತ್ತವೆ ಎಂದು ಸಂಸತ್ತಿನಲ್ಲಿ ಮಾತನಾಡುತ್ತಾರೆ ಎಂದು ಹೆಸರೇಳದೇ ಸಂಸದೆ ಸುಮಲತಾ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ ಕುಮಾರಸ್ವಾಮಿ, ಗಣಿಗಾರಿಕೆಯಿಂದ ರಾಯಲ್ಟಿ ಬರುತ್ತಾ-ಇಲ್ಲವಾ ಅಂತಾನೂ ಹೇಳುತ್ತಾರೆ, ಏನಿದರರ್ಥ ಎಂದು ಪ್ರಶ್ನಿಸಿದ್ದಾರೆ.

ಜಯನಗರ ಹೋಟೆಲ್‍ನಲ್ಲಿ ಮೀಟಿಂಗ್ ಮಾಡಿದವರ್ಯಾರು? ಅವರೇನು ಸರ್ಕಾರದ ಖಜಾನೆ ತುಂಬಿಸಲು ಸಭೆ ಮಾಡಿದ್ರಾ? ಅಥವಾ ಅವರ ಖಜಾನೆ ತುಂಬಿಸಿಕೊಳ್ಳಲು ಮೀಟಿಂಗ್ ಮಾಡಿದ್ದಾರಾ ಎಂದು ಹೆಚ್‍ಡಿಕೆ ವಾಗ್ದಾಳಿ ಮಾಡಿದರು. ಅಹಿಂದ ಅನ್ನುತ್ತಿದ್ದಾರಲ್ಲಾ, ಅದರಲ್ಲಿ ಸೆಕ್ಯೂಲರಿಸಂ ಎಲ್ಲಿದೆ? ಹಿಂದುತ್ವ ಮಾತನಾಡುವವರು ಹೃದಯದಲ್ಲಿ ಆ ಭಾವನೆ ಇಟ್ಟುಕೊಂಡಿದ್ದಾರಾ? ಹಿಂದುತ್ವ ಮತ್ತು ಸೆಕ್ಯೂಲರಿಸಂ ಬಗ್ಗೆ ಮಾತನಾಡುವವರು ಮೊದಲು ಅದನ್ನು ಅನುಸರಿಸಲಿ ಎಂದು ಹೇಳಿದರು.

 

 

Translate »