ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಅದ್ಧೂರಿ ತೆರೆ
ಮೈಸೂರು

ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಅದ್ಧೂರಿ ತೆರೆ

March 21, 2022

ಮೈಸೂರು, ಮಾ.೨೦(ಎಂಕೆ)- ಮೈಸೂರಿನ ರಂಗಾಯಣದಲ್ಲಿ ಕಳೆದ ಹತ್ತು ದಿನಗಳಿಂದ ಸಾವಿರಾರು ಮಂದಿ ರಂಗಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆದ ‘ಬಹುರೂಪಿ ರಾಷ್ಟಿçÃಯ ರಂಗೋತ್ಸವ’ಕ್ಕೆ ಭಾನುವಾರ ಅದ್ಧೂರಿ ತೆರೆಬಿದ್ದಿತು. ‘ತಾಯಿ’ ಶೀರ್ಷಿಕೆಯಡಿ ಜಾನಪದ ಉತ್ಸವದೊಂದಿಗೆ ಮಾ.೧೧ರಿಂದ ಆರಂಭಗೊAಡ ‘ಬಹುರೂಪಿ ರಾಷ್ಟಿçÃಯ ರಂಗೋತ್ಸವ’ ಅಪರೂಪದ ನಾಟಕಗಳು, ಚಲನಚಿತ್ರಗಳು, ಜನಪದ ಕಾರ್ಯಕ್ರಮಗಳು ಹಾಗೂ ವಿಚಾರ ಸಂಕಿರಣ ಸೇರಿದಂತೆ ಹತ್ತು-ಹಲವು ವೈಶಿಷ್ಟ÷್ಯಗಳಿಂದ ಅಪಾರ ಮೆಚ್ಚುಗೆಯೊಂದಿಗೆ ತೆರೆ ಕಂಡಿತು.

ಕಡೆಯ ದಿನವಾದ ಭಾನುವಾರ ರಾಜ್ಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣ ಕ ಅಭಿವೃದ್ಧಿಗಾಗಿ ಸರ್ಕಾರದ ಜವಾಬ್ದಾರಿ ಹೊತ್ತ ಜನ ಪ್ರತಿನಿಧಿಗಳು ತಮ್ಮ ರಾಜಕೀಯ ಜೀವನವನ್ನು ಆತ್ಮಾವಲೋಕನ ಮಾಡಿ ಕೊಳ್ಳಬೇಕು ಹಾಗೂ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಸತ್ಯ ಸಂದೇಶವನ್ನು ತಿಳಿಸುವ ನಾಟಕಗಳ ಪ್ರದರ್ಶನದ ಮೂಲಕ ಸರ್ವರೂ ಜಾಗೃತರಾಗಬೇಕು ಎಂದು ತಿಳಿಸಿತು. ಬೆಂಗಳೂರಿನ ಕಲಾ ಗಂಗೋತ್ರಿ ತಂಡದಿAದ ‘ಮತ್ತೆ ಮುಖ್ಯಮಂತ್ರಿ’, ಸಂಚಯ ಟ್ರಸ್ಟ್ ತಂಡದ ‘ಕಾಮರೂಪಿಗಳ್’ ಹಾಗೂ ಸಿಎಫ್‌ಡಿ ತಂಡದ ‘ದ ಸ್ಕೆ÷್ವÃರ್ ರೂಟ್ ಆಫ್ ಎ ಸಾನೆಟ್’ ನಾಟಕಗಳು ಪ್ರದರ್ಶನಗೊಂಡವು. ರಾಜಕೀಯ ಆತ್ಮಾವಲೋಕನದ ಕಥೆಯುಳ್ಳ‘ಮತ್ತೆ ಮುಖ್ಯಮಂತ್ರಿ’ ನಾಟಕ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯಿತು. ಪ್ರಧಾನ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಡಾ.ಬಿ.ವಿ.ರಾಜಾರಾಂ ನಿರ್ದೇಶನ ಹಾಗೂ ಕೆ.ವೈ. ನಾರಾಯಣಸ್ವಾಮಿ ರಚನೆ ಯೊಂದಿಗೆ ಬೆಂಗಳೂರಿನ ಕಲಾಗಂಗೋತ್ರಿಯ ಕಲಾ ವಿದರಿಂದ ಕಲಾಮಂದಿರ ವೇದಿಕೆ ಯಲ್ಲಿ ಪ್ರದರ್ಶನ ಗೊಂಡ ‘ಮತ್ತೆ ಮುಖ್ಯಮಂತ್ರಿ’ ನಾಟಕ ಅಪಾರ ಮೆಚ್ಚುಗೆ ಪಡೆಯಿತು. ದೇಶದಲ್ಲಿ ಕಳೆದ ೭೫ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು, ಭ್ರಷ್ಟಾಚಾರ, ಸ್ವಾರ್ಥ, ಹಗೆತನವನ್ನು ಬದಿಗೊತ್ತಿ, ಪ್ರಜೆಗಳಿಗಾಗಿ ಪ್ರಜಾಪ್ರತಿನಿಧಿಗಳು ಎಂಬು ದನ್ನರಿತು ಅಭಿವೃದ್ಧಿ ಪರ ಕೆಲಸ ಮಾಡಬೇಕು ಎಂಬುದನ್ನು ಅರ್ಥವತ್ತಾಗಿ ತಿಳಿಸಲಾಯಿತು.

ಸಂಪತ್ ರಂಗಮAದಿರ(ಕಿರು ರಂಗಮAದಿರ)- ರಾಮಾಯಣದ ಪಂಚವಟಿಯ ಭಾಗದಲ್ಲಿ ಶೂರ್ಪನಖಿಯ ಮಾನಭಂಗದಿAದ ಜಟಾಯು ಮೋಕ್ಷದವರೆಗಿನ ಚಿತ್ರಣ ವನ್ನು ಆಧುನಿಕ ಸಂಭಾಷಣೆಯ ಮೂಲಕ ನಿರ್ಮಿಸಿರುವ ‘ಕಾಮರೂಪಿಗಳ್’ ಕನ್ನಡ ನಾಟಕ ಸಂಪತ್ ರಂಗಮAದಿರದಲ್ಲಿ ಪ್ರದರ್ಶನವಾಯಿತು. ಕಾಮಕ್ಕೊಂದು ಎಲ್ಲೆ ಇದೆ. ಮಿತಿಮೀರಿದರೆ ಏನೆಲ್ಲಾ ಆಪತ್ತುಗಳು ಘಟಿಸಬಹುದು ಎಂಬುದನ್ನು ಗಣೇಶ ಮಂದಾರ್ತಿ ನಿರ್ದೇಶನದಲ್ಲಿ ಬೆಂಗಳೂರಿನ ಸಂಚಯ ಟ್ರಸ್ಟ್ ಕಲಾವಿದರು ತೆರೆದಿಟ್ಟರು.

ಭೂಮಿಗೀತ: ಖ್ಯಾತ ನಿರ್ದೇಶಕ, ನಟ ಪ್ರಕಾಶ್ ಬೆಳವಾಡಿ ನಿರ್ದೇಶನದ ‘ದಸ್ಕೆ÷್ವÃರ್ ರೂಟ್ ಆಫ್ ಎ ಸಾನೆಟ್’ ಇಂಗ್ಲಿಷ್ ನಾಟಕ ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಪ್ರಸಿದ್ದ ಖಗೋಳ ಭೌತಶಾಸ್ತçಜ್ಞರಾದ ಸುಬ್ರಹ್ಮಣ್ಯ ಚಂದ್ರಶೇಖರ್ ಹಾಗೂ ಸರ್ ಆರ್ಥರ್ ಎಡ್ಡಿಂಗ್ಟನ್ ನಡುವಿನ ಜಿಜ್ಞಾಸೆ ಹಾಗೂ ಅವರಿಬ್ಬರ ನಡುವಿನ ಸಂಕೀರ್ಣ ಸಂಬAಧವನ್ನು ನಾಟಕ ಮೂಲಕ ಪ್ರಸ್ತುತಪಡಿಸಲಾಯಿತು.

Translate »