ಕರಾಮುವಿಯಲ್ಲಿ ಕುವೆಂಪು ನೆನಪು
ಮೈಸೂರು

ಕರಾಮುವಿಯಲ್ಲಿ ಕುವೆಂಪು ನೆನಪು

December 30, 2020

ಮೈಸೂರು: ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಅಲ್ಪ ಮಾನವನಾಗಿ ಮಕ್ಕಳಲ್ಲಿ ಕೊಳೆ ತುಂಬಿ ಅವರನ್ನು ಅಲ್ಪ ಮಾನವರ ನ್ನಾಗಿ ಮಾಡುತ್ತಿದ್ದೇವೆ. ಅಲ್ಪ ಶಿಕ್ಷಣದ ಮೂಲಕ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸಬೇಕು ಎಂದು ಕುವೆಂಪು ಹೇಳಿ ದ್ದಾರೆ ಎಂದು ಮೈಸೂರಿನ ವಿಜಯನಗ ರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಪಿ. ಬೆಟ್ಟೇಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದಲ್ಲಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ `ಕುವೆಂಪು ಸಾಹಿತ್ಯದಲ್ಲಿ ಅನಿಕೇತನ ಪ್ರಜ್ಞೆ’ ವಿಷಯ ಕುರಿತು ಮಾತ ನಾಡಿದರು. `ಅನಿಕೇತನ’ ಎಂದರೇನು, ಅನಿ ಕೇತನವನ್ನು ಪಡೆಯುವುದು ಹೇಗೆ? ಎಂದು ಯಾರು ಬೇಕಾದರೂ ಸುಲಭವಾಗಿ ಅರಿತು ಸಾಗುವಂತಹ ರೀತಿಯಲ್ಲಿ ಅನಿಕೇತನ ಪದ್ಯದ ಮೂಲಕ ಅವರು ಸಂದೇಶ ನೀಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಸಾಲಿನಲ್ಲಿ ನಿಲ್ಲ ಬಹುದಾದ ಶಕ್ತಿ ಕುವೆಂಪು ಅವರದು ಎಂದರು.

ಕರಾಮುವಿ ಕುಲಪತಿ ಪ್ರೊ.ಎಸ್.ವಿದ್ಯಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎನ್.ಆರ್. ಚಂದ್ರೇಗೌಡ, ಸಹಾಯಕ ಪ್ರಾಧ್ಯಾಪಕ ಡಾಎನ್. ಆನಂದಗೌಡ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಗಾಯಕ ಅಮ್ಮ ರಾಮಚಂದ್ರ ತಂಡದಿಂದ ಕುವೆಂಪು ಗೀತಗಾಯನ ನಡೆಯಿತು.

Translate »