ಬುದ್ದಿ ಹೇಳಿದ ವೈದ್ಯರನ್ನು ನಿಂದಿಸಿದ ಯುವಕರ ಗುಂಪು
ಮಂಡ್ಯ

ಬುದ್ದಿ ಹೇಳಿದ ವೈದ್ಯರನ್ನು ನಿಂದಿಸಿದ ಯುವಕರ ಗುಂಪು

April 3, 2020
  • ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಹೆಚ್‍ಓ ಎಚ್ಚರಿಕೆ
  • ಕೊನೆಗೂ ವೈದ್ಯರ ಕ್ಷಮೆ ಯಾಚಿಸಿದ ಯುವಕರು

ನಾಗಮಂಗಲ, ಏ.2- ಗುಂಪುಗುಂಪಾಗಿ ಆಟವಾಡಬಾರದು ಎಂದು ತಿಳಿದ ಡಾಕ್ಟರನ್ನು ಯುವಕರ ಗುಂಪು ನಿಂದಿಸಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ವಳಗೆರೆ ಪುರ ದಲ್ಲಿ ನಡೆದಿದೆ.

ನಾಗಮಂಗಲ ತಾಲೂಕಿನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿರುವ ಡಾಕ್ಟರ್ ಮಮತಾ ಅವರು ತಂಡ ಬೆಳ್ಳೂರು ಹೋಬಳಿ ವಳಗೆರೆ ಪುರಕ್ಕೆ ಭೇಟಿ ನೀಡಿದಾಗ ಯುವಕರ ಗುಂಪೆÇಂದು ಆಟವಾಡುತ್ತಿರುವುದನ್ನು ಕಂಡು, ದೇಶದಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದು, ಹೀಗೆ ಗುಂಪುಗುಂಪಾಗಿ ಸೇರಬಾರದು ಎಂದು ತಿಳಿ ಹೇಳಲು ಹೋದಾಗ. ಯುವಕರ ಗುಂಪೆÇಂದು ಡಾ.ಮಮತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ತಕ್ಷಣ ಡಾ.ಮಮತಾ ಅÀವರು ತಾಲೂಕು ಆರೋಗ್ಯಾಧಿಕಾರಿ ಮತ್ತು ಪೆÇಲೀಸ್ ಇಲಾಖೆಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಘಟನೆ ನಡೆದ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ್, ಡಿವೈಎಸ್ಪಿ ವಿಶ್ವನಾಥ್, ಸಿಪಿಐ ಕೆ.ರಾಜೇಂದ್ರ, ಪಿಎಸ್‍ಐ, ದಯಾನಂದ್ ಭೇಟಿ ನೀಡಿ. ಡಾ.ಮಮತಾರನ್ನು ನಿಂದಿಸಿದ ಯುವಕರ ಗುಂಪನ್ನು ಕರೆಸಿ ಕಾನೂನು ರೀತಿಯ ಕ್ರಮಕ್ಕೆ ಮುಂದಾದಾಗ ಊರಿನ ಮುಖಂಡರು ಹಾಗೂ ಗ್ರಾಮಸ್ಥರು ನಮ್ಮಿಂದ ಆಗಿರುವ ತಪ್ಪನ್ನು ಕ್ಷಮಿಸಿ ಇನ್ನು ಮುಂದೆ ಈ ತರಹದ ಘಟನೆಗಳು ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಲ್ಲದೆ, ಡಾ.ಮಮತಾ ಅವರ ಬಳಿ ಯುವಕರ ಗುಂಪು ಕ್ಷಮೆಯಾಚಿಸಿದೆ.

ನಂತರ ಆರೋಗ್ಯಾಧಿಕಾರಿ ಡಾ.ಧನಂಜಯ ರವರು ಊರಿನ ಮುಖಂಡರು ಹಾಗೂ ಗ್ರಾಮಸ್ಥರಿಗೆ ಕೊರೊನಾ ವೈರಸ್ ಎಲ್ಲಾ ಕಡೆ ಹರಡುತ್ತಿದ್ದು ಜನರು ಗುಂಪು ಗುಂಪಾಗಿ ಓಡಾಡುವುದು ನಿಲ್ಲಿಸಬೇಕು. ಒಬ್ಬರಿಂದ ಒಬ್ಬರಿಗೆ ಅಂತರವನ್ನು ಕಾಯ್ದಿರಿಸಿ ಕೊಳ್ಳಬೇ ಕೆಂದು ತಿಳಿಹೇಳಿ ಇನ್ನೊಮ್ಮೆ ಹೀಗೆ ನಡೆದುಕೊಂಡರೆ ನಿಮ್ಮಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.

Translate »