ವಾರದೊಳಗೆ ರೈತರ ಖಾತೆಗಳಿಗೆ 2 ಸಾವಿರ, ಜನ್ ಧನ್ ಖಾತೆಗೆ 500 ರೂ ಜಮಾ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್
ಮಂಡ್ಯ

ವಾರದೊಳಗೆ ರೈತರ ಖಾತೆಗಳಿಗೆ 2 ಸಾವಿರ, ಜನ್ ಧನ್ ಖಾತೆಗೆ 500 ರೂ ಜಮಾ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್

April 3, 2020
  •  ಬಡವರು,ನಿರ್ಗತಿಕರಿಗೆ 10000 ಲೀ .ಹಾಲು ಉಚಿತವಾಗಿ ವಿತರಣೆ
  •  ವಿದ್ಯುತ್ ಬಿಲ್ ಪಾವತಿಯಲ್ಲಿ ವಿನಾಯಿತಿ
  •  ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ
  •  ಚೆಕ್ ಪೋಸ್ಟ್‍ನಲ್ಲಿ ರೈತರ ಬೆಳೆ ವಿಲೆವಾರಿಗೆ ಅಡ್ಡಿಪಡಿಸುವಂತಿಲ್ಲ.

ಮಂಡ್ಯ, ಏ.2(ನಾಗಯ್ಯ)- ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರ ಖಾತೆಗೆ 2 ಸಾವಿರ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲಾಣ ಯೋಜನೆಯಡಿ ಜನ್ ಧನ್ ಖಾತೆಗೆ 500 ರೂ ಗಳನ್ನು ಈ ಮೊದಲ ವಾರದಲ್ಲಿ ಜಮೆ ಮಾಡಲಾ ಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿ ಜನ್ ಧನ್ ಯೋಜನೆ, ಕಿಸನ್ ಯೋಜನೆ ಹಾಗೂ ಪಿಂಚಣಿ ಖಾತೆದಾರರು ಸೇರಿದಂತೆ ಸುಮಾರು 17 ಲಕ್ಷ ಮಂದಿ ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರ ಖಾತೆಗೆ ಜಮೆಯಾಗುತ್ತಿರುವ ಈ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕ್‍ನವರು ಸಾಲವಗೈರೆಗಳಿಗೆ ಕಟಾಪ್ ಮಾಡಿಕೊಳ್ಳ ಬಾರದು ಎಂದು ಸೂಚಿಸಲಾಗಿದೆ,ಈ ಹಣವನ್ನು ರೈತರು ತಮ್ಮ ಸ್ವಂತ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳುವಂತೆಯೂ ಅವರು ತಿಳಿಸಿದರು.

ರೈತರು ಬ್ಯಾಂಕ್‍ನಿಂದ ಹಣ ಪಡೆಯುವ ಸಂದರ್ಭದಲ್ಲಿ ಯವುದೇ ತೊಂದರೆಗಳು ಆಗದ ರೀತಿಯಲ್ಲಿ ಮಾಡಲು ಪೊಲೀಸ ರನ್ನು ನಿಯೋಜನೆ ಮಾಡಲಾಗುವುದು ಎಂದು ಅವರು ಹೇಳಿದರು.

ಬಡವರು, ನಿರ್ಗತಿಕರು, ಅಸಂಘಟಿತ ಕಾರ್ಮಿಕ ವಲಯದ ಸುಮಾರು 18 ಸಾವಿರ ಮಂದಿಗೆ ಮನ್ ಮುಲ್ ವತಿಯಿಂದ ನಿತ್ಯವೂ 10000 ಲೀ .ಹಾಲನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಎರಡು ತಿಂಗಳ ಪಡಿ ತರವನ್ನೂ ಸಹ ಈಗಾಗಲೇ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ,ಈ ತಿಂಗಳ ವಿದ್ಯುತ್ ಪಾವತಿಯಲ್ಲಿಯೂ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ಬಡವರು, ನಿರ್ಗತಿಕರು, ಅಸಂಘಟಿತ ಕಾರ್ಮಿಕವಲಯಕ್ಕೆ ತೊಂದರೆಯಾಗದಂತೆ ಜಿಲೆಯಾದ್ಯಂತ 9 ಪರಿಹಾರ ಕೇಂದ್ರವನ್ನು ತೆರೆಯ ಲಾಗಿದೆ, ಜಿಲ್ಲೆಗೆ 146 ಮಂದಿ ವಲಸೆ ಕಾರ್ಮಿಕರು ಬಂದಿದ್ದು ಅವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸ ಲಾಗಿದೆ ಎಂದು ಅವರು ಹೇಳಿದರು.

ಇಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ,ಲಾಕ್ ಡೌನ್ ಬಳಿಕ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ,ಜಿಲ್ಲಾಡಳಿತದ ಜೊತೆ ನಾಗರೀಕರು ಸಹ ಕೈ ಜೋಡಿಸಬೇಕು, ಹೋಂ ಕ್ವಾರೆಂಟ್‍ನಲ್ಲಿ 128 ಮಂದಿ ಇದ್ದು ಅವರ ಮೇಲೆ ನಿಗಾವಹಿಸಲಾಗಿದೆ ಎಂದು ಅವರು ತಿಳಿಸಿದರು.

ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ; ಜಿಲ್ಲೆಯಲ್ಲಿ ರೈತರಿಗೆ ಯಾವುದೇ ತೊಂದರೆ ಯಾಗ ಬರದು ರೈತರು ಮುಕ್ತವಾಗಿ ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟಮಾಡಲು ಅವಕಾಶ ಕಲ್ಪಿಸಲಾಗಿದೆ. ರೈತರಿಗೆ ತಾವು ಬೆಳೆಯುವ ಬೆಳೆಗಳನ್ನು ಮಾರಾಟ ಮಾಡಲು ಮುಂದೆ ಬರುವಂತೆ ಅವರು ಕರೆ ನೀಡಿದರು.

ರೈತರು ಕಲ್ಲಂಗಡಿ, ಟೋಮೋಟೋ, ತೆಂಗಿನಕಾಯಿ, ಎಳನೀರು ಮಾರಾಟ ಮಾಡಲು ಮತ್ತು ಕೊಳ್ಳಲು ಬರುವ ವಾಹನಗಳಿಗೆ ಸಂಬಂಧಿಸಿದಂತೆ ಎಲ್ಲಾ ಚೆಕ್ ಪೆÇೀಸ್ಟ್‍ನಲ್ಲಿ ರೈತರು ಮುಕ್ತವಾಗಿ ಸರಬರಾಜು ಮಾಡಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ಕಲ್ಲಂಗಡಿ ಹಣ್ಣುಗಳನ್ನು ಕೊಂಡು ನಿರ್ಗತಿಕರಿಗೆ, ಅಮಾಲಿಗಳಿಗೆ ನೀಡಬೇಕು ಹಾಗೂ ನಮ್ಮ ರಾಜ್ಯದ ಹಣ್ಣು ಮತ್ತು ತರಕಾರಿ ಗಳನ್ನು ಕೊಳ್ಳಲು ಅಂತರ ರಾಜ್ಯದ ಹಣ್ಣು ಮತ್ತು ತರಕಾರಿಯ ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಅವಕಾಶ ಮಾಡಿ ಕೊಡಲಾಗುತ್ತದೆ. ಅಂತಹ ಅಂತರ ರಾಜ್ಯದ ವ್ಯಾಪಾರಸ್ಥಾರ ನಡುವೆ ಸಮಾ ಜಿಕ ಅಂತರದ ಕಾಯ್ದುಕೊಳ್ಳೊವುದು ಅಷ್ಟೇ ಮುಖ್ಯವಾಗಿದೆ ಎಂದರು.

ಲಾಕ್ ಡೌನ್ ಬಳಿಕ ಜಿಲ್ಲಾಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಕ್ಕೆ ರೆಡ್ ಕ್ರಾಸ್ ಸಂಸ್ಥೆ ಕೈಜೋಡಿಸಿದೆ ಈಗಾಗಲೆ ಸಂಸ್ತೆಯ ವತಿಯಿಂದ ನಿರ್ಗತಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಬಳಕೆ ಮಾಡಲು ಯೋಗ್ಯವಾದ ವಸ್ತು ಗಳನ್ನೂ ಸಹ ಸಾರ್ವಜನಿಕರು ನೀಡಿದರೆ, ಅವುಗಳನ್ನು ಶೀಘ್ರದಲ್ಲೇ ತೆರೆಯಲಾಗುವ ಪರಿಹಾರ ವಿತರಣಾ ಕೇಂದ್ರದ ಮೂಲಕ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಓ ಯಾಲಕ್ಕಿಗೌಡ, ವಾರ್ತಾಧಿಕಾರಿ ಹರೀಶ್, ರೆಡ್ ಕ್ರಾಸ್ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಇದ್ದರು.

Translate »