ಸಹಾಯವಾಣಿ ರಚನೆ-ಮೊ: 8296769577, 9741392799
ಮೈಸೂರು, ಏ.2(ಆರ್‍ಕೆಬಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡ ದಂತೆ ತಡೆಗಟ್ಟುವ ಸಂಬಂಧ ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮೈಸೂರು ಜಿಲ್ಲಾ ಘಟಕದ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಟೀಕೆಗೆ ಆಸ್ಪದ ನೀಡದೆ, ಜನರ ಹಿತದೃಷ್ಟಿ ಯಿಂದ ಶ್ರಮಿಸುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕಾಂಗ್ರೆಸ್ ಮೈಸೂರು ಜಿಲ್ಲಾ ಗ್ರಾಮಾಂ ತರ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹುಣಸೂರು ಶಾಸಕ ಮಂಜುನಾಥ್ ಹಾಗೂ ಬಿ.ಜೆ. ವಿಜಯಕುಮಾರ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್‍ಫೋರ್ಸ್ ರಚಿಸುವುದು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಲ್ಲಿಯೂ ಟಾಸ್ಕ್‍ಫೋರ್ಸ್, ಜಿಲ್ಲಾ ಮಟ್ಟ ದಲ್ಲಿ 2 ಸಹಾಯವಾಣಿ (ಮೊ: 82967 69577 ಮತ್ತು 9741392799) ರಚಿ ಸುವ ನಿರ್ಣಯ ಕೈಗೊಳ್ಳಲಾಯಿತು.
ಪಕ್ಷದಿಂದ ಆಯ್ಕೆಯಾಗಿರುವ ಜಿಪಂ ಸದಸ್ಯರು ತಲಾ 10 ಸಾವಿರ ರೂ., ತಾಪಂ ಸದಸ್ಯರು ತಲಾ 5 ಸಾವಿರ ರೂ., ನಗರಸಭೆ, ಪುರಸಭೆ ಸದಸ್ಯರು ತಲಾ 2,500 ರೂ.ಗಳನ್ನು ಕೆಪಿಸಿಸಿ ಪರಿಹಾರ ನಿಧಿಗೆ ನೀಡುವುದಕ್ಕೆ, ದೇಣಿಗೆಯ ಚೆಕ್/ಡಿಡಿಯನ್ನು ಅಧ್ಯಕ್ಷರ ಮೂಲಕ ತಲುಪಿ ಸುವುದಕ್ಕೆ ಸಮ್ಮತಿಸಲಾಯಿತು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಧಾರ ಗಳಲ್ಲಿ ಕೆಲವು ಸಮರ್ಪಕವಾಗಿ ಜಾರಿ ಯಾಗದೆ ವಿಫಲಗೊಂಡಿವೆ. ಅವನ್ನು ಗುರ್ತಿಸಿ, ಜಿಲ್ಲಾಧಿಕಾರಿ ಮತ್ತು ಕಾಂಗ್ರೆಸ್ ಜಿಲ್ಲಾ ಸಮಿತಿ ಮೂಲಕ ಸರ್ಕಾರಗಳ ಗಮನಕ್ಕೆ ತರುವುದು. ಸಹಾಯವಾಣಿಗೆ ಬರುವ ದೂರುಗಳನ್ನು ತಹಸಿಲ್ದಾರ್, ಜಿಪಂ, ತಾಪಂ ಸದಸ್ಯರ ಗಮನಕ್ಕೆ ತಂದು ಪರಿಹಾರ ಒದಗಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಯಿತು.
ಪೋಸ್ಟರ್ ಬಿಡುಗಡೆ: ಇದೇ ಸಂದರ್ಭ ಕೊರೊನಾ ನಿಯಂತ್ರಣ ಮತ್ತು ಲಾಕ್ ಡೌನ್ ನಿರ್ವಹಣೆ ಕುರಿತು ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಮನೆಯಲ್ಲೇ ಇರಿ-ಕ್ಷೇಮವಾಗಿರಿ, ದೇಶದ ಗಂಭೀರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ, ಸರ್ಕಾರದ ಸೂಚನೆಗಳಿಗೆ ಮೊದಲ ಆದ್ಯತೆ, ಅನಗತ್ಯ ರಾಜಕಾರಣಕ್ಕೆ ಅವಕಾಶ ಬೇಡ, ಸರ್ಕಾರಿ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಸಹಕಾರ, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಕ್ಕೆ ಸಕಾರಾತ್ಮಕ ಸ್ಪಂದನೆ, ಸಂಘಟನೆಗಳ ನೆರವು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗ ದಿರಲಿ ಎಂಬ ಘೋಷವಾಕ್ಯಗಳ ಪೋಸ್ಟರ್ ಗಳನ್ನು ಪ್ರಮುಖ ಪ್ರದೇಶಗಳಲ್ಲಿ ವಿತರಿಸಲು ಸಭೆ ನಿರ್ಧರಿಸಿತು. 40ಕ್ಕೂ ಹೆಚ್ಚು ಸದಸ್ಯರಿದ್ದ ಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲಾಗಿತ್ತು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್, ಶಿವಪ್ರಸಾದ್, ಶಿವನಾಗಪ್ಪ, ಹೆಡತಲೆ ಮಂಜುನಾಥ್, ಬಸವರಾಜ ನಾಯಕ್, ಪುಷ್ಪವಲ್ಲಿ ಭಾಗವಹಿಸಿದ್ದರು.