ಬೆಂಗಳೂರು, ಮೇ ೧೩ (ಕೆಎಂಶಿ)- ಆಸಿಡ್ ದಾಳಿಗೆ ಒಳ ಗಾಗಿರುವ ಮಹಿಳೆ ಯರಿಗೆ ನೀಡಲಾಗುತ್ತಿದ್ದ ೩ ಸಾವಿರ ಮಾಸಾ ಶನವನ್ನು ೧೦ ಸಾವಿರ ರೂ.ಗೆ ಹೆಚ್ಚಿಸ ಲಾಗಿದ್ದು, ಸಂತ್ರಸ್ತೆಯರಿಗೆ ನಿವೇಶನ, ಮನೆ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ವಿಧಾನಸೌಧದ ಸಭಾಂಗಣದಲ್ಲಿ ನಡೆದ ಹಲೋ ಕಂದಾಯ ಸಚಿವರೆ (೭೨ ಗಂಟೆ ಗಳಲ್ಲಿ ಮನೆ ಬಾಗಿಲಿಗೆ ಪಿಂಚಣ ) ಸಹಾಯ ವಾಣ ಯನ್ನು ಲೋಕಾರ್ಪಣೆ ಮಾಡಿ ದರು. ಅರ್ಹ ಫಲಾನುಭವಿಗಳಿಗೆ ಪಿಂಚಣ ಸೌಲಭ್ಯ ಮನೆ ಬಾಗಿಲಿಗೆ ತಲುಪಿ ಸುವ ಕಾರ್ಯಕ್ರಮಕ್ಕೂ ಸಿಎಂ ಚಾಲನೆ ನೀಡಿದರು. ವಾರ್ಷಿಕ ಆದಾಯ ೩೨ ಸಾವಿರ ರೂ.ಗಿಂತ ಕಡಿಮೆ ಇರುವ ವೃದ್ಧರು, ಅಂಗವಿಕಲರು, ವಿಧವೆ, ಅವಿವಾಹಿತರು, ವಿಚ್ಛೇಧನ ಪಡೆದ ಮಹಿಳೆಯರು ಈ ಸೌಲಭ್ಯ ಪಡೆಯಲು ಹಲೋ ಕಂದಾಯ ಸಚಿವರೆ ಎನ್ನುವ ದೂರವಾಣ ೧೫೫೨೪೫ಕ್ಕೆ ಕರೆ ಮಾಡಿದರೆ ಅವರ ಮನೆ ಬಾಗಿಲಿಗೆ ೭೨ ಗಂಟೆಯೊಳಗೆ ಸೌಲಭ್ಯ ದೊರೆಯುತ್ತದೆ.