ನೀಟ್ ಪಿಜಿ-೨೦೨೨ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ
ಮೈಸೂರು

ನೀಟ್ ಪಿಜಿ-೨೦೨೨ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ

May 14, 2022

ನವದೆಹಲಿ, ಮೇ ೧೩- ವೈದ್ಯರ ಮನವಿಯ ಮೇರೆಗೆ ನೀಟ್-ಪಿಜಿ-೨೦೨೨ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಪರೀಕ್ಷೆ ವಿಳಂಬವಾದರೆ ವೈದ್ಯರ ಅಲಭ್ಯತೆ ಉಂಟಾಗುತ್ತದೆ ಮತ್ತು ರೋಗಿಗಳ ಆರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ನೀಟ್ ಪಿಜಿ-೨೦೨೨ ಪರೀಕ್ಷೆ ಮುಂದೂಡುವAತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರ ಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ, ಪರೀಕ್ಷೆ ಮುಂದೂ ಡುವುದರಿಂದ “ಅವ್ಯವಸ್ಥೆ ಮತ್ತು ಅನಿಶ್ಚಿತತೆ” ಸೃಷ್ಟಿಸುತ್ತದೆ ಮತ್ತು ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ದೊಡ್ಡ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

Translate »