ಮೂರು ವರ್ಷದ ಹಿಂದೆ ನಿಗೂಢ ರೀತಿ ನಾಪತ್ತೆಯಾಗಿದ್ದ ಮೈಸೂರು ನಾಟಿ ವೈದ್ಯ ಶಬ್ಬಾ ಷರೀಫ್ ಕೇರಳದಲ್ಲಿ ಭೀಕರ ಹತ್ಯೆ
ಮೈಸೂರು

ಮೂರು ವರ್ಷದ ಹಿಂದೆ ನಿಗೂಢ ರೀತಿ ನಾಪತ್ತೆಯಾಗಿದ್ದ ಮೈಸೂರು ನಾಟಿ ವೈದ್ಯ ಶಬ್ಬಾ ಷರೀಫ್ ಕೇರಳದಲ್ಲಿ ಭೀಕರ ಹತ್ಯೆ

May 14, 2022

ಮೈಸೂರು, ಮೇ ೧೩(ಎಸ್‌ಬಿಡಿ)- ಮೂರು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಮೈಸೂರಿನ ನಾಟಿ ವೈದ್ಯನನ್ನು ಕೇರಳದಲ್ಲಿ ಅಮಾನುಷವಾಗಿ ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಜನತಾನಗರ ಸಮೀಪದ ವಸಂತನಗರ ದಲ್ಲಿದ್ದ ನಾಟಿವೈದ್ಯ ಶಬ್ಬಾ ಷರೀಫ್, ಮೂಲವ್ಯಾಧಿ ಕಾಯಿಲೆಗೆ ನಾಟಿ ಔಷಧ ನೀಡುವ ಮೂಲಕ ಜನಪ್ರಿಯರಾಗಿದ್ದರು. ೨೦೧೯ರ ಆಗಸ್ಟ್ನಲ್ಲಿ ನಿಗೂಢವಾಗಿ ಕಣ್ಮರೆಯಾದ ಹಿನ್ನೆಲೆ ಯಲ್ಲಿ ಅವರ ಕುಟುಂಬದವರು ಸರಸ್ವತಿಪುರಂ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೊಬೈಲ್ ನೆಟ್‌ವರ್ಕ್ನ ಬೆನ್ನತ್ತಿದ್ದ ಪೊಲೀಸರು ಕೇರಳದವರೆಗೂ ಹೋಗಿ ಹುಡುಕಾಟ ನಡೆಸಿದ್ದರಾದರೂ ಪ್ರಯೋಜನವಾಗಿರ ಲಿಲ್ಲ. ಆದರೆ ಶಬ್ಬಾ ಷರೀಫ್ ಹತ್ಯೆಯಾಗಿರುವುದನ್ನು ಕೇರಳದ ಮಲಪುö್ಪರಂ ಜಿಲ್ಲೆಯ ಪೊಲೀಸರು ಈಗ ಪತ್ತೆ ಹಚ್ಚಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಾಟಿ ವೈದ್ಯದಲ್ಲಿ ಜನಪ್ರಿಯತೆ ಗಳಿಸಿದ್ದ ಶಬ್ಬಾ ಷರೀಫ್ ಅವರ ಬಳಿ ಕೇರಳದಿಂದ ಹೆಚ್ಚಿನ ಮಂದಿ ಬಂದು ಔಷಧ ಪಡೆದು ಗುಣಮುಖರಾಗುತ್ತಿದ್ದರು. ಇದರಿಂದ ಕೇರಳದಲ್ಲೂ ಶಬ್ಬಾ ಷರೀಫ್ ಪ್ರಸಿದ್ಧಿ ಪಡೆದಿದ್ದರು. ಮೂಲವ್ಯಾದಿ ಯನ್ನು ಪರಿಣಾಮಕಾರಿಯಾಗಿ ಪರಿಹರಿಸುವಂತಹ ಔಷಧದ ರಹಸ್ಯ ತಿಳಿದು ಕೊಂಡು ದುಬೈ ಇನ್ನಿತರ ದೇಶಗಳಲ್ಲಿ ಔಷಧ ಮಾರಾಟ ಮಾಡಿ, ಹಣ ಸಂಪಾದಿಸುವ ದುರುದ್ದೇಶದಿಂದ ಶಬ್ಬಾ ಷರೀಫ್
ಅವರನ್ನು ಅಪಹರಿಸಿ, ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಲಾಗಿದೆ. ಆದರೆ ತಮ್ಮ ಪ್ರಯತ್ನ ಫಲಿಸದಿದ್ದಾಗ ೨೦೨೦ರ ಅಕ್ಟೋಬರ್‌ನಲ್ಲಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ರೋಚಕ-ಭಯಾನಕ: ಕೇರಳದ ಭಾರೀ ಉದ್ಯಮಿ ಶಬೀನ್ ಆಶ್ರಫ್ ಮನೆಯಲ್ಲಿ ಕಳೆದ ಏಪ್ರಿಲ್ ೨೪ರಂದು ೭ ಲಕ್ಷ ರೂ. ದರೋಡೆ ನಡೆದಿತ್ತು. ಈ ಸಂಬAಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಶ್ರಫ್ ಸ್ನೇಹಿತ ತಂಗಳಕಟ್ಟು ಎಂಬಾತನನ್ನು ಬಂಧಿಸಿದ್ದರು. ಇದರಿಂದ ಕೋಪಗೊಂಡ ಈತನ ಮೂವರು ಸ್ನೇಹಿತರು ಕೇರಳ ಸಚಿವಾಲಯದ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದರು. ತಮ್ಮ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಅವರನ್ನು ಪೊಲೀಸರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು.

ಹೈಡ್ರಾಮಾ ಸಂದರ್ಭದಲ್ಲಿ ತಳ್ಳಾಟ-ನೂಕಾಟವಾಗಿ ನೆಲದಲ್ಲಿ ಬಿದಿದ್ದ ಪೆನ್‌ಡ್ರೆöÊವ್ ಪೊಲೀಸರ ಕೈಗೆ ಸಿಕ್ಕಿತ್ತು. ಆತ್ಮಹತ್ಯೆಗೆ ಯತ್ನಿಸಿದ್ದವರನ್ನು ವಿಚಾರಣೆಗೆ ಒಳಪಡಿಸಿ, ಪೆನ್‌ಡ್ರೆöÊವ್ ನಲ್ಲಿದ್ದ ವಿಡಿಯೋಗಳ ಬಗ್ಗೆ ಕೇಳಿದಾಗ ನಾಟಿ ವೈದ್ಯ ಶಬ್ಬಾ ಷರೀಫ್ ಹತ್ಯೆ ಪ್ರಕರಣ ಬಯಲಾಗಿದೆ. ಶಬೀನ್ ಆಶ್ರಫ್ ಮೈಸೂರಿನಿಂದ ನಾಟಿವೈದ್ಯ ಷರೀಫ್ ಅವರನ್ನು ಅಪಹರಣ ಮಾಡಿ, ಒಂದು ವರ್ಷಗಳ ಕಾಲ ತನ್ನ ಮನೆಯಲ್ಲೇ ಗೃಹ ಬಂಧನದಲ್ಲಿಟ್ಟಿದ್ದ. ಅವರಿಗೆ ನಿತ್ಯ ಚಿತ್ರಹಿಂಸೆ ನೀಡಿ, ಕೊಲೆ ಮಾಡಿ ನಂತರ ಸಿಕ್ಕಿಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ಮೃತದೇಹವನ್ನು ತುಂಡು ತುಂಡು ಮಾಡಿ, ಅವುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ಚಳಿಯಾರ್ ನದಿಯಲ್ಲಿ ಎಸೆಯಲಾಗಿದೆ. ಆದರೆ ಆಶ್ರಫ್ ನಮಗೆ ನೀಡಬೇಕಿದ್ದ ಹಣ ನೀಡದೆ ಮೋಸ ಮಾಡಿದ್ದರಿಂದ ಆತನ ಮನೆಯಲ್ಲಿ ದರೋಡೆ ಮಾಡಿದೆವು. ನಾಟಿ ವೈದ್ಯ ಶಬ್ಬಾ ಷರೀಫ್‌ಗೆ ಚಿತ್ರಹಿಂಸೆ ನೀಡಿದ ವಿಡಿಯೋಗಳು ಪೆನ್‌ಡ್ರೆöÊವ್‌ನಲ್ಲಿವೆ ಎಂದು ತಿಳಿಸಿದ್ದರು.

ಶಬ್ಬಾ ಷರೀಫ್ ಅವರ ಪತ್ನಿ ಹಾಗೂ ಮಕ್ಕಳು, ಪೆನ್‌ಡ್ರೆöÊವ್‌ನಲ್ಲಿರುವ ವಿಡಿಯೋ ನೋಡಿ ಅದರಲ್ಲಿರುವುದು ಷರೀಫ್ ಅವರೇ ಎನ್ನುವುದನ್ನು ಗುರುತಿಸಿದ್ದಾರೆ. ಈ ಸಂಬAಧ ಅಲ್ಲಿನ ಪೊಲೀಸರು ಕಳೆದ ಮಂಗಳವಾರ ಹತ್ಯೆ ಪ್ರಕರಣ ದಾಖಲಿಸಿಕೊಂಡು, ಪ್ರಮುಖ ಆರೋಪಿ ಶಬೀನ್ ಆಶ್ರಫ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ಮೈಸೂರಿನ ಪೊಲೀಸರೂ ಸಹಕಾರ ನೀಡಿದ್ದಾರೆ.

Translate »