ಅಂತೂ 16 ದಿನದ ನಂತರ ತಮಿಳುನಾಡಲ್ಲಿ ಬೆಂಗಳೂರು ಆಸಿಡ್ ದಾಳಿ ಆರೋಪಿ ನಾಗೇಶ್ ಬಂಧನ
ಮೈಸೂರು

ಅಂತೂ 16 ದಿನದ ನಂತರ ತಮಿಳುನಾಡಲ್ಲಿ ಬೆಂಗಳೂರು ಆಸಿಡ್ ದಾಳಿ ಆರೋಪಿ ನಾಗೇಶ್ ಬಂಧನ

May 14, 2022

ರಮಣ ಆಶ್ರಮದಲ್ಲಿ ಖಾವಿಧಾರಿಯಾಗಿ ಅಡಗಿದ್ದ; ಈತನ ಸೆರೆಗೆ ಪೊಲೀಸರೂ ಖಾವಿ ವೇಷಧಾರಿಗಳಾದರು!

ಬೆಂಗಳೂರು, ಮೇ ೧೩-ಬೆಂಗ ಳೂರಲ್ಲಿ ಯುವತಿ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದ ಆಸಿಡ್ ನಾಗೇಶ್‌ನನ್ನು ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿ ರುವ ರಮಣ ಆಶ್ರಮದಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕಳೆದ ೧೬ ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆಸಿಡ್ ನಾಗೇಶ್, ತಾನು ಗುರುತು ಸಿಗಬಾರದೆಂದು ರಮಣ ಆಶ್ರಮದಲ್ಲಿ ಖಾವಿ ತೊಟ್ಟು ಸ್ವಾಮೀಜಿ ಯಾಗಿದ್ದ ಎಂದು ಪೊಲೀಸರು ತಿಳಿಸಿ ದ್ದಾರೆ. ಈತ ಸ್ವಾಮೀಜಿ ವೇಷÀದಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ತಾವೂ ಖಾವಿ ತೊಟ್ಟು ಭಕ್ತರ ವೇಷದಲ್ಲಿ ಆಶ್ರಮ ಪ್ರವೇಶಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಈತನ ಬಂಧನಕ್ಕಾಗಿ ರಚಿಸ ಲಾಗಿದ್ದ ವಿಶೇಷಪಡೆ ಪೊಲೀಸರಿಗೆ ಆತನ ಕುಟುಂಬದವರು ಕೂಡ ಸಹಕಾರ ನೀಡಿ ದರು ಎಂದು ಹೇಳಲಾಗಿದೆ. ಯುವತಿ ಮೇಲೆ ಆಸಿಡ್ ಎರಚಿದ ವೇಳೆ ನಾಗೇಶ್‌ನ ಬಲಗೈ ಮೇಲೂ ಆಸಿಡ್ ಬಿದ್ದು ಗಾಯವಾಗಿತ್ತು ಎನ್ನಲಾಗಿದ್ದು, ತಮಿಳುನಾಡಿನ ಕೃಷ್ಣಗಿರಿ ಬಳಿ ಕ್ಲಿನಿಕ್‌ವೊಂದರಲ್ಲಿ ಚಿಕಿತ್ಸೆ ಪಡೆದಿದ್ದ. ತನಗಾಗಿದ್ದ ಗಾಯವನ್ನು ಕೆಲ ವಕೀಲ ರಿಗೆ ತೋರಿ ಸಿದ್ದ ಆತ ವಕೀಲರು ಆತನ ಪರ ವಕಾಲತ್ತು ವಹಿಸಲು ಒಪ್ಪದಿದ್ದಾಗ ತಮಿಳುನಾಡಿಗೆ ಪಲಾಯನವಾಗಿದ್ದ ಎಂದು ಹೇಳಲಾಗಿದೆ. ಅಪ್ಪಟ ದೈವಭಕ್ತ ನಾಗಿದ್ದ ನಾಗೇಶ್  ಪ್ರತೀ ಸೋಮವಾರ ಮತ್ತು ಶುಕ್ರವಾರ ತಪ್ಪದೇ ದೇವಸ್ಥಾನಗಳಿಗೆ ಹೋಗುತ್ತಿದ್ದ ಎಂಬ ಮಾಹಿತಿ ಆತನ ಕುಟುಂಬದವರಿAದ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆ ಯಲ್ಲಿ ಪೊಲೀಸರು ತಮಿಳುನಾಡು, ಆಂಧ್ರ, ಕೇರಳ ಹಾಗೂ ಉತ್ತರ ಭಾರತದ ಕೆಲ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡಿದ್ದರು. ಕೊನೆಗೆ ತಿರುವಣ್ಣಾಮಲೈ ಪ್ರದೇಶದಲ್ಲಿ ಈತ ಇರಬಹುದು ಎಂಬ ಸುಳಿವು ದೊರೆತು ಅಲ್ಲಿಗೆ ತೆರಳಿದ್ದ ಪೊಲೀಸರಿಗೆ ರಮಣ ಆಶ್ರಮದಲ್ಲಿ ಹೊಸದಾಗಿ ಸ್ವಾಮೀಜಿಯೊಬ್ಬರು ಬಂದಿದ್ದಾರೆ ಎಂಬ ಮಾಹಿತಿ ದೊರೆತು ಆಶ್ರಮಕ್ಕೆ ಏಕಾಏಕಿ ನುಗ್ಗಲು ಸಾಧ್ಯವಿಲ್ಲ. ಮಫ್ತಿಯಲ್ಲಿದ್ದರೂ ಕೂಡ ಹೆಚ್ಚಿನ ಸಮಯ ಅಲ್ಲಿರುವುದು ಅಸಾಧ್ಯ ಎಂದು ಭಾವಿಸಿದ ಪೊಲೀಸರು ತಾವೂ ಕೂಡ ಸ್ವಾಮೀಜಿಗಳಂತೆ ಖಾವಿ ತೊಟ್ಟು ಆಶ್ರಮ ಪ್ರವೇಶಿಸಿ ಅಲ್ಲಿದ್ದವರ ಬಗ್ಗೆ ನಿಗಾ ವಹಿಸಿದ್ದರು. ಕೊನೆಗೂ ಆಸಿಡ್ ನಾಗೇಶನನ್ನು ಗುರುತಿಸಿದ ಪೊಲೀಸರು ಆತನನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ.

 

Translate »