ಜೆಡಿಎಸ್ ಸ್ವತಂತ್ರ ಸರ್ಕಾರ ಸಂಕಲ್ಪ
ಮೈಸೂರು

ಜೆಡಿಎಸ್ ಸ್ವತಂತ್ರ ಸರ್ಕಾರ ಸಂಕಲ್ಪ

May 14, 2022

ಮೈತ್ರಿ ಇಲ್ಲದೆ ಸ್ವತಂತ್ರ ಅಧಿಕಾರ ನೀಡಿ; ರಾಜ್ಯದ ನೀರಾವರಿ, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡ್ತೇನೆ
ಬೆಂಗಳೂರು, ಮೇ ೧೩- ಮೈತ್ರಿ ಸರ್ಕಾರದ ಸಹವಾಸ ಬೇಡ, ಬದಲಾಗಿ ಸ್ವತಂತ್ರ ಸರ್ಕಾರ ತರಲು ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ.

ಇಲ್ಲಿನ ಹೊರವಲಯ ನೆಲಮಂಗಲದ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ‘ಜನತಾ ಜಲಧಾರೆ’ ಸಮಾರೋಪ ಸಮಾರಂಭ ದಲ್ಲಿ ನೆರೆದಿದ್ದ ಲಕ್ಷಾಂತರ ಜನರನ್ನುದ್ದೇಶಿಸಿ ಮಾತನಾಡಿ, ಮೈತ್ರಿ ಇಲ್ಲದೆ, ಸ್ವತಂತ್ರ ಅಧಿಕಾರ ನೀಡಿದರೆ ರಾಜ್ಯದ ನೀರಾವರಿ ಯೋಜನೆ ಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಕುಮಾರಸ್ವಾಮಿಗೆ ಜಯವಾಗಲಿ, ಜೆಡಿಎಸ್‌ಗೆ ಜಯವಾಗಲಿ, ದೇವೇಗೌಡರಿಗೆ ಜಯವಾಗಲಿ ಎಂಬ ಕಾರ್ಯ ಕರ್ತರ ಘೋಷಣೆಗಳು ಮುಗಿಲು ಮುಟ್ಟಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆ ನಡೆಸುತ್ತೇನೆ. ಹಳ್ಳಿ ಹಳ್ಳಿಗಳಲ್ಲಿ ರಥಯಾತ್ರೆ ನಡೆಸಿ ನಾನೇ ಜನರ ಮುಂದೆ ಬರುತ್ತೇನೆ. ನಮ್ಮ ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ ಈ ಜನತಾ ಜಲಧಾರೆ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ ಎಂದರು.

೯೦ ವರ್ಷ ವಯಸ್ಸಿನಲ್ಲೂ ನಾಡಿನ ಜನರಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ರಾಜಕೀಯದ ಬೆಳವಣ ಗೆಗಳ ಪರಿಣಾಮವಾಗಿ ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದೆ. ಆದರೆ ಯಾವುದೇ ಕಾರ್ಯಕ್ರಮ
ಕೊಡಲು ಸ್ವತಂತ್ರ ಅಧಿಕಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ನೋವು ಅನುಭವಿಸಿದ್ದು ನನಗೆ ಮಾತ್ರ ಗೊತ್ತು ಎಂದ ಅವರು, ಮೈತ್ರಿ ಸಹವಾಸ ಬೇಡ ಎಂದು ಹೇಳಿದರು. ಜೆಡಿಎಸ್‌ನಲ್ಲಿ ಟಿಕೆಟ್‌ಗೂ ಹಣ ಕೊಡಬೇಕು ಎಂದು ಒಬ್ಬರು ಆರೋಪ ಮಾಡಿದರು. ಆದರೆ ಮಳವಳ್ಳಿ ಅನ್ನದಾನಿ ಬಡವರಾದರೂ ಟಿಕೆಟ್ ಕೊಟ್ಟು ಚುನಾವಣಾ ಖರ್ಚನ್ನು ಪಕ್ಷ ಭರಿಸಿದೆ. ದೇವರು ನೋಡ್ತಾನೆ ಎಂಬ ಕನಿಷ್ಠ ತಿಳುವಳಿಕೆ ಬೇಕು ಎಂದು ಟೀಕಾಕಾರರ ಬಾಯಿ ಮುಚ್ಚಿಸಿದರು.

ಕೊರೊನಾದಿಂದ ಜೆಡಿಎಸ್ ನಾಯಕರು ಹೊರ ಬಂದಿಲ್ಲ ಎನ್ನುತ್ತಿದ್ದರು. ಅದಕ್ಕೆ ಕಾರಣ ಕೊರೊನಾದಿಂದ ಆದಂತಹ ಸಾವಿರಾರು ಜನರ ಸಾವು. ನಿಮಗೆ ತೊಂದರೆ ಆಗಬಾರದು ಅಂತ ಕಾರ್ಯಕ್ರಮ ಹಾಕಿಕೊಂಡಿರಲಿಲ್ಲ. ಬಿಜೆಪಿ, ಕಾಂಗ್ರೆಸ್ ನಾಯಕರಷ್ಟು ಅವಸರ ನಮಗೆ ಇರಲಿಲ್ಲ. ಕಳೆದ ತಿಂಗಳಿAದ ಜಲಧಾರೆ ಕಾರ್ಯಕ್ರಮ ಆರಂಭ ಆಯ್ತು. ಅಂದಿನಿAದ ಇಂದಿನವರೆಗೆ ನಮಗೆ ಸಾಥ್ ಕೊಟ್ಟಿದ್ದೀರಾ. ಮೈಸೂರಿನಲ್ಲಿ ಒಂದು ಸ್ಥಾನ ಬರಲ್ಲ ಎಂದು ಇಲ್ಲೇ ಬೆಳೆದು ಹೋದವರೇ ಹೇಳಿದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯರ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಆದರೆ ಇವತ್ತು ನೀವು ಜಲಧಾರೆ ಸಮಾವೇಶದ ಮೂಲಕ ತೋರಿಸಿದ್ದೀರಿ ಎಂದರು. ನನ್ನ ಕೊನೆಯ ಉಸಿರು ಇರುವವರೆಗೂ ನಿಮಗಾಗಿ ಜೀವನ ಇಟ್ಟಿರುತ್ತೇನೆ. ನಾನು ಈ ಮಣ ್ಣಗೆ ಹೋಗುವುದರೊಳಗೆ ನಿಮ್ಮ ಹೃದಯದಲ್ಲಿ ನನಗೆ ಕೊಡುವ ಸ್ಥಾನ ಒಂದೇ ಎಂದು ಹೇಳಿದರು.

ಕುಡಿಯುವ ನೀರಿನ ವಿಚಾರವಾಗಿ ದೇವೇಗೌಡರು ಸಂಸತ್‌ನಲ್ಲಿ ಮಾತನಾಡಿದರೆ ಯಾರು ಮಾತನಾಡಲು ಬರುವುದಿಲ್ಲ ಎಂದ ಎಚ್‌ಡಿಕೆ, ನಾನು ಎರಡು ಬಾರಿ ಸಿಎಂ ಆಗಿದ್ದೇನೆ. ಅದೂ ಅನಿರೀಕ್ಷಿತ ರಾಜಕೀಯದ ಬೆಳವಣ ಗೆಯಲ್ಲಿ ಸಿಎಂ ಆದೆ. ಅನೇಕ ಒತ್ತಡಗಳ ನಡುವೆ ಅಧಿಕಾರ ಮಾಡಿದೆ. ರೈತರ ಸಾಲ ಮನ್ನಾ ಮಾಡುವಾಗಲೂ ಎಷ್ಟು ಕಷ್ಟಪಟ್ಟಿದ್ದೇನೆ ನಮಗೆ ಗೊತ್ತು ಎಂದರು. ಕೊರೊನಾದಿಂದ ಸಾವಿಗೀಡಾದ ಕುಟುಂಬಕ್ಕೆ ಐದು ಲಕ್ಷ ರೂ. ಕೊಡುತ್ತೇವೆ ಎಂದ ಸರ್ಕಾರ ಇನ್ನೂ ಕೊಟ್ಟಿಲ್ಲ. ಶಾಲೆ ಫೀಸ್ ಕಟ್ಟಲು, ಆಸ್ಪತ್ರೆಗಳಿಗೆ ಅಂತ ನಿತ್ಯ ಎಷ್ಟು ಕಷ್ಟ ಪಡ್ತಾ ಇದ್ದೀರಾ ಅಂತ ಗೊತ್ತಿದೆ. ನಿತ್ಯ ಸಾಕಷ್ಟು ಜನರನ್ನು ನೋಡ್ತಾ ಇದ್ದೇನೆ. ಪಂಚರತ್ನ ಯೋಜನೆ ಹುಡುಗಾಟಿಕೆಗೆ ಮಾಡಿದ್ದಲ್ಲ. ನಿಮ್ಮಗಳ ಕಷ್ಟಗಳನ್ನು ನೋಡಿಯೇ ಮಾಡಿರುವುದು ಎಂದು ಕುಮಾರಸ್ವಾಮಿ ಹೇಳಿದರು.

ಜನತಾ ಜಲಧಾರೆ ಆರಂಭದಿAದಲೇ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ

ಮೈಸೂರು, ಮೇ ೧೩(ಆರ್‌ಕೆ)- ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನ ನೆಲಮಂಗಲದಲ್ಲಿ ಆಯೋಜಿಸಿದ್ದ ಜನತಾ ಜಲಧಾರೆ ಸಂಕಲ್ಪ ಸಮಾವೇಶಕ್ಕೂ ಮುನ್ನ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಜಾತ್ಯತೀತ ಜನತಾದಳದಿಂದ ಒಬ್ಬ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬುದು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವಾಗಿದೆ. ಆ ನಿಟ್ಟಿನಲ್ಲಿ ಚರ್ಚಿಸಿ, ನಿರ್ಧರಿಸಿ ಟಿಕೆಟ್ ನೀಡಲಾಗುವುದು ಎಂದರು. ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಜನತಾ ಜಲಧಾರೆ
ಯಾತ್ರೆ ಆರಂಭವಾದ ದಿನದಿಂದ ಈವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇದು ಶುಭಸೂಚಕ. ಜನತಾ ಜಲಧಾರೆ ವಾಹನದ ಮೂಲಕ ರಾಜ್ಯ ನೀರಾವರಿ ಯೋಜನೆಗಳನ್ನು ಅನುಷ್ಠಾನಮಾಡುವ ಜೆಡಿಎಸ್ ಪಕ್ಷದ ಸಂಕಲ್ಪವನ್ನು ನಾಡಿನ ಜನರಿಗೆ ತಿಳಿಸಲಾಗಿದೆ. ಆ ಮೂಲಕ ರೈತರ, ಬಡವರ, ಅಭಿವೃದ್ಧಿಯ ಕನಸು ಕಂಡಿರುವ ಪಕ್ಷದ ಬದ್ಧತೆಯನ್ನು ಜನರು ಅರಿತಿದ್ದಾರೆ. ನಾನೂ ಸಹ ನಾಡಿಗೆ ಒಳಿತಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದರು. ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಬೇಕಷ್ಟೆ. ಜೆಡಿಎಸ್ ರಾಷ್ಟಿçÃಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಜೆಡಿಎಸ್‌ನ ‘ಜನತಾ ಜಲಧಾರೆ’ಗೆ ಹರಿದುಬಂದ ಲಕ್ಷ ಲಕ್ಷ ಜನಸಾಗರ!
ಬೆಂಗಳೂರು, ಮೇ ೧೩- ರಾಜ್ಯದಲ್ಲಿ ನೀರಾವರಿ ಯೋಜನೆ ಗಳನ್ನು ಸಮರ್ಪಕ ವಾಗಿ ಜಾರಿ ಮಾಡುವುದಕ್ಕೆ ಸಂಕಲ್ಪ ಮಾಡುವ ದೃಷ್ಟಿಯಿಂದ ಜೆಡಿಎಸ್ ಏ. ೧೬ರಂದು ಆರಂಭಿಸಿದ್ದ ‘ಜನತಾ ಜಲಧಾರೆ’ ಸರಣ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನೆಲಮಂಗಲದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು.

ಈ ಸಮಾರಂಭದಲ್ಲಿ ಭಾಗವಹಿಸಲು ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರು ನೆಲಮಂಗಲಕ್ಕೆ ಆಗಮಿಸಿದ್ದರಿಂದ ಈ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಹಾಸನ ಜಿಲ್ಲೆ ಒಂದರಿAದಲೇ ೫೪೭ ಸರ್ಕಾರಿ ಸಾರಿಗೆ ಬಸ್ ಮತ್ತು ೬೦೦ ಖಾಸಗಿ ವಾಹನಗಳಲ್ಲಿ ಜನರು ಬಂದಿದ್ದರು. ರಾಜ್ಯದ ಇತರ ಭಾಗಗಳಿಂದಲೂ ಸಾವಿರಾರು ಬಸ್-ಟೆಂಪೋಗಳಲ್ಲಿ ಕಾರ್ಯಕರ್ತರು ಬಂದಿದ್ದರು. ಸುಮಾರು ಐದು ಲಕ್ಷ ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಮಾರೋಪ ಸಮಾರಂಭದಲ್ಲಿ ಮಾಡಲಾಗಿತ್ತು. ಸುಮಾರು ೩ ಸಾವಿರ ಬಾಣಸಿಗರು ಇದರಲ್ಲಿ ತೊಡಗಿ ಕೊಂಡಿದ್ದಾರೆ. ಊಟ ಬಡಿಸಲು ೨ ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪಲಾವ್, ಜಿಲೇಬಿ, ಕೇಸರಿ ಬಾತ್, ಮಜ್ಜಿಗೆಯನ್ನು ಕಾರ್ಯಕರ್ತರಿಗೆ ಉಣಬಡಿಸಲಾಯಿತು.

Translate »