ಮೈಸೂರು ಹೆಬ್ಬಾಳು ಕೆರೆ ಒಡಲು ಸೇರುತ್ತಿದೆ ತ್ಯಾಜ್ಯ
ಮೈಸೂರು

ಮೈಸೂರು ಹೆಬ್ಬಾಳು ಕೆರೆ ಒಡಲು ಸೇರುತ್ತಿದೆ ತ್ಯಾಜ್ಯ

May 15, 2022

ಅಧಿಕಾರಿಗಳ ನಿರ್ಲಕ್ಷö್ಯತೆ ಸಾರ್ವಜನಿಕರ ಆಕ್ರೋಶ
ಮೈಸೂರು, ಮೇ ೧೪(ಎಂಕೆ)- ಮೈಸೂರಿನ ಹೆಬ್ಬಾಳ ಕೆರೆಯಲ್ಲಿ ರಸಾಯನಿಕಯುಕ್ತ ನೀರಿನಿಂದ ಮೀನುಗಳ ಮಾರಣಹೋಮವೇ ನಡೆದರೂ ಕೆರೆಗೆ ಸೇರುತ್ತಿರುವ ತ್ಯಾಜ್ಯಕ್ಕೆ ತಡೆಬಿದ್ದಿಲ್ಲ.

ಕಾರ್ಖಾನೆಗಳು ಹಾಗೂ ವಿವಿಧ ಬಡಾ ವಣೆಗಳಿಂದ ಹರಿದು ಬರುವ ಕಲುಷಿತ ನೀರು, ಕೆರೆ ಸೇರುವ ಸ್ಥಳದಲ್ಲಿ ರಾಶಿ ರಾಶಿ ಕಸ ಬಿದ್ದಿದ್ದರೂ ಸಂಬAಧಪಟ್ಟ ಅಧಿ ಕಾರಿಗಳು ತೆರವುಗೊಳಿಸಲು ಮೀನಾವೇಷ ಎಣ ಸುತ್ತಿದ್ದಾರೆ. ಸತ್ತ ಮೀನುಗಳನಷ್ಟೇ ತೆರವು ಗೊಳಿಸಿದ್ದ ಹೂಟಗಳ್ಳಿ ನಗರ ಸಭೆ ಸಿಬ್ಬಂದಿಯ ಕಣ್ಣ ಮುಂದೆಯೇ ರಾಶಿ ಕಸ ಬಿದ್ದಿದ್ದರೂ ಸಂಬAಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಪ್ರತಿಷ್ಠಿತ ಇನ್‌ಫೋಸಿಸ್ ಸಂಸ್ಥೆಯಿAದ ಅಭಿವೃದ್ಧಿಗೊಂಡ ಹೆಬ್ಬಾಳ ಕೆರೆಗೆ ಎರಡು ಕಡೆ ರಸಾಯನಿಯುಕ್ತ ಕಲುಷಿತ ನೀರು ಸೇರುತ್ತಿದೆ. ಹೆಬ್ಬಾಳ, ಲೋಕನಾಯಕ ನಗರ, ವಿಜಯನಗರದ ಇನ್ನಿತರೆ ಸುತ್ತ-ಮುತ್ತಲಿನ ಬಡಾವಣೆಗಳಿಂದ ಹರಿದು ಬರುವ ಕಲುಷಿತ ನೀರಿನ ಜಾಗದಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಭಾರೀ ದುರ್ವಾಸನೆ ಬೀರುತ್ತಿದೆ.

ವಾಯುವಿಹಾರಿಗಳ ನೆಚ್ಚಿನ ತಾಣ ವಾದ ಹೆಬ್ಬಾಳ ಕೆರೆಯ ವಾತಾವರಣ, ಕೆರೆ ಸಂರಕ್ಷಣೆ ಹೊಣೆಹೊತ್ತ ಅಧಿಕಾರಿ-ಸಿಬ್ಬಂದಿಗಳಿAದಲೇ ಹಾಳಾಗುತ್ತಿದೆ. ಹಲವು ಬಾರಿ ತ್ಯಾಜ್ಯ ತೆರವು ಮಾಡು ವಂತೆ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ನೀರನ್ನು ಶುಚಿಗೊಳಿ ಸಲು ಇರುವ ಒಂದಷ್ಟು ಮೀನುಗಳನ್ನು ಸಾಯಿಸುತ್ತಿದ್ದಾರೆ ಎಂದು ಹೆಬ್ಬಾಳು ಕೆರೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ‘ಮೈಸೂರು ಮಿತ್ರ’ನಲ್ಲಿ ದೂರಿದ್ದಾರೆ.

Translate »