ಶ್ರೀ ಮಾದೇಶ್ವರಾಯ ನಮಃ ನಾಳೆಯಿಂದ ಲೋಕ ಕಲ್ಯಾಣ, ವಿಶ್ವಶಾಂತಿಗಾಗಿ ೧೮ ಕೋಟಿ ಜಪಯಜ್ಞ
ಮೈಸೂರು

ಶ್ರೀ ಮಾದೇಶ್ವರಾಯ ನಮಃ ನಾಳೆಯಿಂದ ಲೋಕ ಕಲ್ಯಾಣ, ವಿಶ್ವಶಾಂತಿಗಾಗಿ ೧೮ ಕೋಟಿ ಜಪಯಜ್ಞ

May 15, 2022

ದಿನಕ್ಕೊಂದು ಕೋಟಿಯಂತೆ ೧೮ ಪುಣ್ಯಕ್ಷೇತ್ರಗಳಲ್ಲಿ ಜಪ
ಮೈಸೂರು, ಮೇ ೧೪(ಎಂಟಿವೈ)-ಲೋಕ ಕಲ್ಯಾಣಾರ್ಥ ಹಾಗೂ ವಿಶ್ವಶಾಂತಿ ಗಾಗಿ ಮೇ ೧೬ರಿಂದ ದಿನಕ್ಕೊಂದು ಕೋಟಿಯಂತೆ ೧೮ ದಿನ ೧೮ ಕೋಟಿ `ಶ್ರೀ ಮಾದೇಶ್ವರಾಯ ನಮಃ’ ಸರಣ ಜಪ ಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಮಲೆ ಮಹದೇಶ್ವರ ಜಯಂತಿ ಮಹೋ ತ್ಸವ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆ ಮಹದೇಶ್ವರ ಜಯಂತಿ ಮಹೋತ್ಸವ ಸಮಿತಿ, ಕುಂಬಾರಕೊಪ್ಪಲು ಅಭ್ಯುದಯ ಸಂಘ, ಮೈಸೂರು ಜಿಲ್ಲಾ ವೀರಶೈವ ಮಹಾಸಭಾ, ಶ್ರೀ ಗುರುರಾಘವೇಂದ್ರ ಆರಾಧನಾ ಸಮಿತಿ ಸಂಯುಕ್ತಾ ಶ್ರಯದಲ್ಲಿ ಮೇ ೧೬ ರಂದು ಕುಂಬಾರಕೊಪ್ಪಲಿನ ಮಹದೇಶ್ವರ ದೇವಾಲಯದ ಆವರಣದಲ್ಲಿ ಈ ಜಪಯಜ್ಞ ಕಾರ್ಯಕ್ರಮ ನಡೆಯಲಿದೆ ಎಂದರು.
ಅAದು ಸಂಜೆ ೬ ರಿಂದ ರಾತ್ರಿ ೯ ಗಂಟೆವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಜಪಯಜ್ಞ ಸಮಾ ರಂಭದಲ್ಲಿ ಭಾಗವಹಿಸುವವರು ಸಾಂಪ್ರಾದಾಯಿಕ ಉಡುಗೆ ಧರಿಸಿ ೧ ಮಣ ್ಣನ ದೀಪ, ಬತ್ತಿ, ಎಣ್ಣೆ, ಅರಿಶಿನ- ಕುಂಕುಮ ಹಾಗೂ ಬಿಡಿ ಹೂವಿನೊಂದಿಗೆ ಬರಬೇಕು ಎಂದರು.

ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ. ಮಹದೇಶ್ವರಸ್ವಾಮಿ ಪಾದಸ್ಪರ್ಶ ಮಾಡಿದ ೧೮ ಪುಣ್ಯ ಸ್ಥಳಗಳಲ್ಲಿ ಒಂದೊAದು ದಿನ ಒಂದೊAದು ಕೋಟಿ ಜಪ ಮಾಡಿ, ಅಂತಿಮವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ೧೮ನೇ ಕೋಟಿ ಜಪ ಮಾಡುವ ಮೂಲಕ ಈ ಧಾರ್ಮಿಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಗುತ್ತದೆ ಎಂದು ಮಾದೇಗೌಡರು ತಿಳಿಸಿದರು. ೮೦೦ ವರ್ಷಗಳ ಹಿಂದೆ ಮಹದೇಶ್ವರರು ಉತ್ತರದಿಂದ ಕತ್ತಲ ರಾಜ್ಯವನ್ನು ಉದ್ಧಾರ ಮಾಡಲೆಂದು ಬಂದರು. ಹೀಗೆ ಮೈಸೂರು ಪ್ರಾಂತ್ಯಕ್ಕೆ ಬಂದು ನೆಲೆಸುವ ಮುನ್ನ ಹಲವು ಸ್ಥಳಗಳಿಗೆ ತೆರಳಿ ಅಲ್ಲಿ ಆವರಿಸಿದ್ದ ಕತ್ತಲನ್ನು ನಿವಾರಿಸಿ ಬೆಳಕು ಚೆಲ್ಲಿದರು. ಇದರಿಂದ ಮಹದೇಶ್ವರರ ಸಂಕಲ್ಪದAತೆ ಕತ್ತಲಾವರಿಸಿದ್ದ ಹಲವು ಸ್ಥಳಗಳಲ್ಲಿ ಸುಧಾರಣೆ ಕಂಡಿದೆ. ಈ ಹಿನ್ನೆಲೆಯಲ್ಲಿ `ಶ್ರೀ ಮಾದೇಶ್ವರಾಯ ನಮಃ’ ಸರಣ ಜಪಯಜ್ಞ ಹಮ್ಮಿಕೊಳ್ಳಲಾಗಿದೆ ಎಂದರು.

ಮಹದೇಶ್ವರ ಬೆಟ್ಟವು ಪ್ರವಾಸೋದ್ಯಮ ಹಾಗೂ ಉತ್ತಮ ಧಾರ್ಮಿಕ ಸ್ಥಳವಾಗಿದ್ದು, ೭೭ ಬೆಟ್ಟಗಳನ್ನು ಸಫಾರಿಗೆ ಅಭಿ ವೃದ್ಧಿಪಡಿಸಬೇಕು. ಕಾಡಿನಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಆಸ್ಪತ್ರೆ, ಮನೆ ಹಾಗೂ ಶಾಲಾ-ಕಾಲೇಜುಗಳು ಇನ್ನು ಸಿಗುತ್ತಿಲ್ಲ. ಮುಖ್ಯ ಮಂತ್ರಿಗಳು ಹಾಗೂ ಮುಜರಾಯಿ ಸಚಿವರು ಮಹದೇಶ್ವರ ಬೆಟ್ಟ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಶ್ರೀ ಮಲೆ ಮಹದೇಶ್ವರ ಜಯಂತಿ ಮಹೋತ್ಸವ ಸಮಿತಿ ಉಪಾಧ್ಯಕ್ಷ ಪ್ರಭುಸ್ವಾಮಿ, ಮುರುಳಿ ದೇಶಪಾಂಡೆ, ಭೈರಪ್ಪ ಹಾಗೂ ಮಹದೇವಸ್ವಾಮಿ ಇದ್ದರು.

ಮಹದೇಶ್ವರ ಬೆಟ್ಟದಲ್ಲಿ ಜಪ ಸಂಪನ್ನ; ಭಕ್ತರಿಗೆ ಅವಕಾಶ

ತಿರುಪತಿ ವೆಂಕಟರಮಣ ಸ್ವಾಮಿಗಿಂತಲೂ ಮಹದೇಶ್ವರ ಸ್ವಾಮಿಗೆ ಹೆಚ್ಚಿನ ಭಕ್ತರಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ಕೋಟ್ಯಾಂತರ ರೂ ಆದಾಯವಿದ್ದರೂ, ಬೆಟ್ಟಕ್ಕೆ ಹೋಗುವ ಭಕ್ತರು ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಸಂಬAಧ ಪಟ್ಟ ಇಲಾಖೆಯವರು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. -ಡಿ.ಮಾದೇಗೌಡ

 

Translate »