ನಾಳೆಯಿಂದ ಶಾಲೆಗಳು ಆರಂಭ
ಮೈಸೂರು

ನಾಳೆಯಿಂದ ಶಾಲೆಗಳು ಆರಂಭ

May 15, 2022

ಹಳೇ ಬಸ್ ಪಾಸ್‌ನಲ್ಲೇ ಪ್ರಯಾಣ ಸಲು ಅವಕಾಶ
ಬೆಂಗಳೂರು, ಮೇ ೧೪- ರಾಜ್ಯದಲ್ಲಿ ಶಾಲೆಗಳು ಮೇ ೧೬ರಿಂದ ಪುನರಾರಂಭ ವಾಗಲಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಳೇ ಬಸ್ ಪಾಸ್‌ನಲ್ಲೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಶಾಲೆಗೆ ಮಕ್ಕಳು ಬರಬೇಕೆಂದರೆ ಶಾಲೆಯ ವಾತಾವರಣ ಪರಿಶುದ್ಧವಾಗಿರಬೇಕು. ವಿದ್ಯಾರ್ಥಿಗಳು ಶಾಲೆ ಆವರಣಕ್ಕೆ ಕಾಲಿಡುತ್ತಿ ದ್ದಂತೆ ಉಲ್ಲಾಸಿತರಾಗಬೇಕು ಎಂಬ ಕಾರಣಕ್ಕೆ ಶಾಲೆ ಸ್ವಚ್ಛಗೊಳಿಸಿ ಅಣ ಯಾಗಲು ತಿಳಿಸಲಾಗಿದೆ. ಇನ್ನು ಶಾಲೆಯ ಒಳಾಂಗಣದಲ್ಲಿ ಯಾವುದೇ ರೀತಿಯ ರಿಪೇರಿ ಕೆಲಸಗಳಿದ್ದರೇ ಹಾಗೂ ಬಣ್ಣವನ್ನು ಬಳಿಯಬೇಕಿದ್ದರೆ ಆ ಕಾರ್ಯಗಳನ್ನು ಮೇ ೧೬ರ ಒಳಗೆ ಮುಗಿಸಿಕೊಳ್ಳುವಂತೆ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಈಗಾಗಲೇ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ: ಶನಿವಾರ ಪ್ರಕಟಣೆ ಹೊರಡಿಸಿರುವ ಏSಖಖಿಅ ೨೦೨೨-೨೩ರ ಸಾಲಿನ ಭೌತಿಕ ತರಗತಿಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಮೇ ೧೬ರಂದು ಆರಂಭವಾಗುತ್ತಿದೆ. ಹಾಗಾಗಿ ಪ್ರಸ್ತುತ ಸಾಲಿನ ಪಾಸುಗಳನ್ನು ಪಡೆಯಲು ಸಮಯಾವಕಾಶ ಒದಗಿಸಿಕೊಡುವ ಉದ್ದೇಶವನ್ನು ಇಲಾಖೆ ಹೊಂದಿದೆ. ಆದ್ದ ರಿಂದ ಕಳೆದ ಸಾಲಿನಲ್ಲಿ ಪಡೆದಿರುವ ಪಾಸ್‌ಗಳು ಮಾನ್ಯತಾ ಅವಧಿ ಜೂನ್ ೩೦ ರವರೆಗೆ ಇರುವುದರಿಂದ, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ತಮ್ಮ ಹಳೆಯ ಪಾಸುಗಳನ್ನು ಬಳಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ. ೨೦೨೧-೨೨ರ ಸಾಲಿನಲ್ಲಿ ರಿಯಾಯಿತಿ ಮತ್ತು ಉಚಿತ ಪಾಸ್ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಹಳೆಯ ಪಾಸುಗಳಿಂದ ಕರಾರಸಾ ನಿಗಮದ ನಗರ, ಹೊರ ವಲಯ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಪ್ರಯಾಣ ಸಲು ಅವಕಾಶ ನೀಡಲಾಗಿದೆ. ಹೊಸ ಬಸ್ ಪಾಸ್‌ಗಳ ವಿತರಣಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಆ ನಂತರ ನಿಯಾಮಾನುಸಾರ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Translate »