ಮೈಸೂರು

ಪರಾರಿ ಯತ್ನ: ಆಸಿಡ್ ನಾಗನ ಕಾಲಿಗೆ ಗುಂಡು

May 15, 2022

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಪೊಲೀಸರಿಗೆ ೫ ಲಕ್ಷ ರೂ. ಬಹುಮಾನ

ಸಾರ್ವಜನಿಕರಿಂದ ಆಸಿಡ್ ನಾಗನ ಮಾಹಿತಿ

ಬೆಂಗಳೂರು, ಮೇ ೧೪- ಮೂತ್ರವಿಸರ್ಜನೆ ನೆಪ ದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಯಾಗಲು ಯತ್ನಿಸಿದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಕಾಲಿಗೆ ಕಾಮಾಕ್ಷಿ ಪಾಳ್ಯ ಪೊಲೀಸರು ಗುಂಡು ಹಾರಿಸಿದ್ದಾರೆ.

ಬೆಂಗಳೂರಲ್ಲಿ ಯುವತಿ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿ ಯಾಗಿದ್ದ ನಾಗೇಶ್ ನನ್ನು ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ರಮಣ ಆಶ್ರಮದಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಆತನನ್ನು ವಾಹನದಲ್ಲಿ ಕರೆ ತರುವ ವೇಳೆ, ಮೂತ್ರ ವಿಸರ್ಜ ನೆಗೆ ಗಾಡಿ ನಿಲ್ಲಿಸಿ ಎಂದು ಹೇಳಿದ್ದಾನೆ. ನಂತರ ಪೊಲೀ ಸರು ಕೆಂಗೇರಿ ಮೇಲ್ಸೇತುವೆ ಬಳಿ ವಾಹನ ನಿಲ್ಲಿಸಿದಾಗ ನಾಗೇಶ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಹಿಡಿಯಲು ಹೋದ ಕಾನ್ಸ್ಟೇಬಲ್ ಮಹಾದೇವಯ್ಯರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್ ಶರಣಾಗುವಂತೆ ಹೇಳಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ನಾಗೇಶ್ ಅದಕ್ಕೆ ಬಗ್ಗದೆ ಪರಾರಿ ಆಗಲು ಯತ್ನಿಸಿದಾಗ ಆತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ನಾಗೇಶ್ ಹಾಗೂ ಗಾಯ ಗೊಂಡಿರುವ ಕಾನ್ಸ್ಟೇಬಲ್ ಮಹದೇವಯ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರಿಗೆ ೫ ಲಕ್ಷ ಬಹುಮಾನ: ಆರೋಪಿ ನಾಗೇಶ್‌ನನ್ನು ಬಂಧಿಸಿದ ಪೊಲೀ ಸರಿಗೆ ೫ ಲಕ್ಷ ರೂಪಾಯಿ ಬಹುಮಾನ ಧನ ನೀಡುವುದಾಗಿ ಕಮಲ್ ಪಂತ್ ಹೇಳಿದ್ದಾರೆ. ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಕಳೆದ ೧೫ ದಿನಗಳಿಂದ ಸುಮಾರು ನೂರಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅಲ್ಲದೇ ೫೦ ಮಂದಿ ಪೊಲೀಸ್ ಅಧಿಕಾರಿಗಳು ಎಲ್ಲೆಡೆ ಓಡಾಡುವ ಮೂಲಕ ಸತತವಾಗಿ ಕೆಲಸ ಮಾಡುತ್ತಿದ್ದರು. ಅವರ ಪರಿಶ್ರಮಕ್ಕೆ ೫ ಲಕ್ಷ ರೂ.ಗಳನ್ನೂ ಅಭಿನಂದನೆಯ ರೂಪದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. ಆರೋಪಿಯ ಮೇಲೆ ಎಂಟು ದಿನಗಳ ಒಳಗೆ ಚಾರ್ಜ್ಶೀಟ್ ಹಾಕಲಾಗುವುದು. ಆದಷ್ಟು ಬೇಗ ಯುವತಿಗೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದೆಂದು ಹೇಳಿದರು.

ಆಶ್ರಮದಲ್ಲಿ ಅಡಗಿದ್ದ ಕಳ್ಳ ಸ್ವಾಮಿ: ನಾಗೇಶ್ ಆಸಿಡ್ ದಾಳಿ ನಡೆಸಿ ತಕ್ಷಣ ಅವನ ಸ್ನೇಹಿತ ಹಾಗೂ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅವರು ಪೊಲೀಸರಿಗೆ ಶರಣಾಗುವಂತೆ ಹೇಳಿದ್ದಾರೆ. ಆದರೆ ನಾಗೇಶ್ ಯಾರ ಮಾತನ್ನು ಕೇಳದೆ ಅಲ್ಲಿಂದ ನೇರವಾಗಿ ತಿರುವಣ್ಣಾಮಲೈ ಆಶ್ರಮಕ್ಕೆ ಹೋಗಿ ಕಾವಿ ಬಟ್ಟೆ ತೊಟ್ಟು ಸ್ವಾಮೀಜಿ ಎಂದು ಪೂಜೆ ಹಾಗೂ ಧ್ಯಾನದಲ್ಲಿ ಮಗ್ನನಾಗಿದ್ದ ಎಂದು ಕಮಲ್ ಪಂತ್ ಮಾಹಿತಿ ನೀಡಿದರು.

ಸಾರ್ವಜನಿಕರಿಂದ ಮಾಹಿತಿ: ಆರೋಪಿ ಸೆರೆಗೆ ಎಲ್ಲಾ ಕಡೆಗಳಲ್ಲಿ ಅವನ ಚಿತ್ರಗಳನ್ನು ಆಂಟಿಸಲಾಗಿತ್ತು. ಅದರಂತೆಯೇ ತಿರುವಣ್ಣಾಮಲೈ ಆಶ್ರಮದಲ್ಲಿ ಇದ್ದ ಕಾರಣ ಅದನ್ನು ಗಮನಿಸಿದ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಹಾಗೂ ಚಿತ್ರದ ಆಧಾರದಲ್ಲಿ ತಕ್ಷಣ ಸಮೀಪದಲ್ಲಿಯೇ ಇದ್ದ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಅವನನ್ನು ಆರೋಪಿ ನಾಗೇಶ್ ಎಂದು ಖಚಿತಪಡಿಸಿ ಕೊಂಡು ಆತನನ್ನು ಬಂಧಿಸಿದ್ದಾರೆ ಎಂದರು. ಆಸಿಡ್ ದಾಳಿ ನಡೆಸಿ ತಲೆಮರೆಸಿ ಕೊಂಡಿದ್ದ ಆರೋಪಿ ನಾಗೇಶ್ ಬಂಧನ ಬಳಿಕ ಸಂತ್ರಸ್ತ ಯುವತಿಯ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ.

ಈಗಲೂ ಅವಳನ್ನೇ ಮದುವೆ ಆಗ್ತೀನಿ!
ಕೊಟ್ಟರೆ ಈಗಲೂ ಅವಳನ್ನೇ ಮದುವೆ ಆಗುತ್ತೇನೆ ಎಂದು ಆಸಿಡ್ ನಾಗೇಶ್ ಪೊಲೀಸರಿಗೆ ಹೇಳಿದ್ದಾ ನಂತೆ. ಶುಕ್ರವಾರ ಆಸಿಡ್ ನಾಗೇಶ ನನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುವ ಸಂದರ್ಭದಲ್ಲಿ ಯಾಕೋ ಆಸಿಡ್ ಹಾಕಿದೆ ಎಂದು ಪೊಲೀಸರು ಪ್ರಶ್ನಿಸಿದಾಗ ನಾನು ಆಸಿಡ್ ಹಾಕ ಬೇಕು ಅಂತ ಅಂದುಕೊAಡಿರಲಿಲ್ಲ. ಆದರೆ ಅವರ ಮನೆಯವರೇ ಆಸಿಡ್ ಹಾಕುತ್ತಾನಂತೆ ಅಂತ ಊರು ತುಂಬಾ ಹೇಳಿಕೊಂಡು ಬಂದರು. ಯಾವಾಗ ಅವರ ಮನೆಯವರು ಎಲ್ಲಾ ಕಡೆ ಹೇಳಿ ಕೊಂಡು ಬಂದರೋ ಆಗ ಆಸಿಡ್ ಹಾಕಿದೆ. ಈಗಲೂ ಅವಳನ್ನು ಕೊಡು ತ್ತಾರಾ ಕೇಳಿ ನೋಡಿ ಸರ್. ಅವಳನ್ನೇ ಮದುವೆಯಾಗುತ್ತೇನೆ ಎಂದು ಪೊಲೀಸರ ಮುಂದೆಯೇ ಹೇಳಿದ್ದಾನೆ. ಘಟನೆ ಬಳಿಕ ಹೊಸಕೋಟೆ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಆಟೋ ಹತ್ತಿ ಹೋಗಿದ್ದೆ. ಆದರೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿ ಸಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಆಸಿಡ್ ಎರಚುವ ವೇಳೆ ನಾಗೇಶನ ಕೈಗೂ ಗಾಯ ಗಳಾಗಿದ್ದು, ತನ್ನ ಕೈ ನೋಡಿದಾಗಲೆಲ್ಲ ಅವಳು ಅಳುವುದೇ ನೆನಪಾಗುತ್ತದೆ ಎಂದು ವಿಕೃತ ಮನಸ್ಸಿನ ಭಾವನೆಯನ್ನು ಹೊರಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.

Translate »