ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್, ರಾಮಮೂರ್ತಿ, ಸುರಾನಾ, ಪರಿಷತ್‌ಗೆ ವಿಜಯೇಂದ್ರ, ಸವದಿ, ರಾಜೇಂದ್ರ, ಸಿದ್ದರಾಜು, ತೇಜಸ್ವಿನಿ ಸೇರಿ ೨೦ ಹೆಸರು ಶಿಫಾರಸು
ಮೈಸೂರು

ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್, ರಾಮಮೂರ್ತಿ, ಸುರಾನಾ, ಪರಿಷತ್‌ಗೆ ವಿಜಯೇಂದ್ರ, ಸವದಿ, ರಾಜೇಂದ್ರ, ಸಿದ್ದರಾಜು, ತೇಜಸ್ವಿನಿ ಸೇರಿ ೨೦ ಹೆಸರು ಶಿಫಾರಸು

May 15, 2022

ಪರಿಷತ್‌ನ ನಾಲ್ಕು, ರಾಜ್ಯಸಭೆ ೨ ಸ್ಥಾನ ಬಿಜೆಪಿಗೆ ದಕ್ಕಲಿದೆ
ಬೆಂಗಳೂರು, ಮೇ ೧೪(ಕೆಎಂಶಿ)- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯ ಮಂತ್ರಿ ಲಕ್ಷ÷್ಮಣ್ ಸವದಿ, ನಿರ್ಮಲ್‌ಕುಮಾರ್ ಸುರಾನಾ, ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ೨೦ ಮಂದಿಯ ಪಟ್ಟಿಯನ್ನು ರಾಜ್ಯ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಗೆ ಶಿಫಾರಸು ಮಾಡಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ, ನಿರ್ಮಲ್‌ಕುಮಾರ್ ಸುರಾನಾ ಅವರ ಹೆಸರನ್ನು ರಾಜ್ಯಸಭೆಯ ಅಭ್ಯರ್ಥಿ ಆಯ್ಕೆಗೂ ಶಿಫಾರಸು ಮಾಡಲಾಗಿದೆ.

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಆಡಳಿತಾರೂಢ ಬಿಜೆಪಿಗೆ ನಾಲ್ಕು ಸ್ಥಾನ ದೊರೆಯಲಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ದ್ವೆöÊವಾರ್ಷಿಕ ಚುನಾ ವಣೆ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿಗೆ ಸಂಖ್ಯಾಬಲದ ಮೇಲೆ ಎರಡು ಸ್ಥಾನಗಳು ದೊರೆಯಲಿವೆ. ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆದು, ಸಭೆಯಲ್ಲಿ ಪಕ್ಷ ಮತ್ತು ಸಂಘಟನೆಗೆ ದುಡಿದ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಪರಿಷತ್ತಿನ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ೨೦ ಹೆಸರುಗಳನ್ನು, ರಾಜ್ಯಸಭೆಯ ಎರಡು ಸ್ಥಾನಗಳಿಗೆ ಮೂರು ಹೆಸರುಗಳನ್ನು ಶಿಫಾರಸು ಮಾಡಿದೆ. ವಿಜಯೇಂದ್ರ, ಲಕ್ಷ÷್ಮಣ್ ಸವದಿ ಅಲ್ಲದೆ, ಪರಿಷತ್ತಿಗೆ ಶಿಫಾರಸುಗೊಂಡವರಲ್ಲಿ ಭಾರತೀ ಮುಕ್ತಮ್, ಗೀತಾವಿವೇಕಾನಂದ ರೆಡ್ಡಿ, ಎಂ.ರಾಜೇAದ್ರ, ಸಿದ್ದರಾಜು ಪ್ರಮುಖರಾಗಿದ್ದಾರೆ. ನಾಲ್ಕು ಸ್ಥಾನಗಳಲ್ಲಿ ಒಂದನ್ನು ಕಲೆ, ಸಾಹಿತ್ಯ, ಮತ್ತೊಂದನ್ನು ಪತ್ರಕರ್ತರಿಗೆ ನೀಡಲು ಬಿಜೆಪಿ ಮುಂದಾಗಿದೆ. ಹಾಲಿ ರಾಜ್ಯಸಭೆ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಮತ್ತೆ ಅಭ್ಯರ್ಥಿಯಾಗುವುದು ಖಚಿತ. ಮತ್ತೊಂದು ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ ಹಾಗೂ ನಿರ್ಮಲ್‌ಕುಮಾರ್ ಸುರಾನ ಹೆಸರು ಶಿಫಾರಸುಗೊಂಡಿದೆ. ಈ ಹಿಂದೆ ರಾಜ್ಯ ಕೋರ್ ಕಮಿಟಿ ಮಾಡಿದ ಶಿಫಾರಸು ಗಳನ್ನು ಸಂಸದೀಯ ಮಂಡಳಿ ತಿರಸ್ಕರಿಸಿ, ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ಬಾರಿಯು ಸಂಸದೀಯ ಮಂಡಳಿಯ ತೀರ್ಮಾನವೇ ಅಂತಿಮ. ಇಲ್ಲಿ ಹೆಸರು ಶಿಫಾರಸುಗೊಂಡರೂ ಅವರು ಅಭ್ಯರ್ಥಿಯಾಗುವುದು ಸುಲಭವಲ್ಲ.

Translate »