ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ಸ್ಟಾರ್ಟ್ ಜಿಟಿಡಿ, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಸೇರಿ ಪ್ರಮುಖರಿಗೆ ಬಿಜೆಪಿ ಗಾಳ
ಮೈಸೂರು

ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ಸ್ಟಾರ್ಟ್ ಜಿಟಿಡಿ, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಸೇರಿ ಪ್ರಮುಖರಿಗೆ ಬಿಜೆಪಿ ಗಾಳ

May 15, 2022

ಬೆಂಗಳೂರು, ಮೇ ೧೪(ಕೆಎಂಶಿ)- ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಕಾಂಗ್ರೆಸ್ ಮುಖಂಡರೂ ಆದ ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಪ್ರಮುಖ ರಾಜಕೀಯ ಮುಖಂ ಡರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ, ಮತ್ತೆ ವಿಧಾನಸಭೆ ಚುನಾ ವಣೆಗೂ ಮುನ್ನ ಆಪರೇಷನ್ ಕಮಲ ಆರಂಭಿಸಿದೆ. ಕೇಂದ್ರದ ನಾಯಕರೊಬ್ಬರ ಮಾರ್ಗ ದರ್ಶನದಂತೆ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಭದ್ರ ನೆಲೆ ಕಲ್ಪಿಸಲು ಹಾಗೂ ಪ್ರತಿಪಕ ್ಷಗಳಾದ ಕಾಂಗ್ರೆಸ್, ಜೆಡಿಎಸ್ ದುರ್ಬಲಗೊಳಿ ಸುವ ಉದ್ದೇಶದಿಂದ ಆಪರೇಷನ್ ಪ್ರಾರಂಭಿಸಲಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಅಖಾಡಕ್ಕಿಳಿದಿರುವ ಬಿಜೆಪಿ ನಾಯ ಕರು ಆಪರೇಷನ್ ಮೂಲಕ ಪಕ್ಷ ಬಲವರ್ಧನೆಗೆ ಅಡಿ ಇಟ್ಟಿದ್ದಾರೆ. ಮಂಡ್ಯ, ಮೈಸೂರು ಭಾಗದ ಪ್ರಬಲ ನಾಯಕ ರಿಗೆ ಬಿಜೆಪಿ ಗಾಳ ಹಾಕಿದೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಜತೆ ಗುರುತಿಸಿಕೊಂಡಿರುವ ಮುಖಂಡರನ್ನೇ ಗುರಿಯಾಗಿಸಿಕೊಂಡು ಆಪರೇಷನ್ ಕಮಲ ಮಾಡ ಲಾಗುತ್ತಿದೆ. ಮುಖ್ಯಮಂತ್ರಿ ಗಾದಿಯ ಮೇಲೆ ಕಣ ್ಣಟ್ಟು ತಮ್ಮ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು
ಸಿದ್ದರಾಮಯ್ಯ ಮತ್ತು ಡಿಕೆಶಿ ನಡೆಸುತ್ತಿರುವ ಪೈಪೋಟಿಯಿಂದ ಬೇಸತ್ತಿರುವ ಕಾಂಗ್ರೆಸ್ ಮುಖಂಡರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ನಾಗಮಂಗಲ ಕ್ಷೇತ್ರ ಪ್ರತಿನಿಧಿಸುವ ಮಾಜಿ ಸಚಿವ ಚಲುವರಾಯಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರಲ್ಲದೆ, ಶ್ರೀರಂಗಪಟ್ಟಣದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಇತರರ ಬಿಜೆಪಿ ಸೆಳೆಯಲು ಮುಂದಾಗಿದೆ.

ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಡಾ.ಕೆ.ಸುಧಾಕರ್ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಈ ಆಪರೇಷನ್ ಕಮಲದ ರೂವಾರಿಗಳಾಗಿದ್ದಾರೆ.

ಈಗಾಗಲೇ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಗೆ ವೇದಿಕೆ ಅಣ ಗೊಳಿಲಾಗುತ್ತಿದೆ. ಕಾಂಗ್ರೆಸ್, ಜೆಡಿಎಸ್ ತೊರೆದು ಬರುವವರಿಗೆ ಅವರವರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ಖಾತ್ರಿ ನೀಡಲಾಗಿದೆ. ಅಲ್ಲದೆ, ಚುನಾವಣಾ ಖರ್ಚು-ವೆಚ್ಚಕ್ಕೆ ಪಕ್ಷದಿಂದ ಸಹಾಯ ಮಾಡುವ ಭರವಸೆ ಬಿಜೆಪಿ ಪಕ್ಷಾಂತರಿಗಳಿಗೆ ನೀಡಿದೆ. ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ ಹರೀಶ್‌ಗೌಡರಿಗೂ ಟಿಕೆಟ್ ನೀಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಹುಣಸೂರು ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಪುತ್ರ ಹರೀಶ್‌ಗೌಡ ಅವರನ್ನು ಸ್ಪರ್ಧೆಗಿಳಿಸುತ್ತಿದ್ದಾರೆ. ಈಗಾಗಲೇ ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಮಾಲೂರು ಮಂಜುನಾಥ್‌ಗೌಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸಂಸದೆ ಸುಮಲತಾ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ. ಇನ್ನೂ ಹಲವು ಪ್ರಮುಖ ನಾಯಕರ ಜತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಸೇರ್ಪಡೆಯ ಸ್ಪಷ್ಟ ಚಿತ್ರಣ ಗೋಚರಿಸಲಿದೆ.

ಐದಾರು ಮಂದಿ ಘಟಾನುಘಟಿಗಳು ಶೀಘ್ರ ಬಿಜೆಪಿಗೆ

ಮೈಸೂರು, ಮೇ ೧೪ (ಆರ್‌ಕೆ)- ಹಳೇ ಮೈಸೂರು ಭಾಗದ ಐದಾರು ಮಂದಿ ಘಟಾ ನುಘಟಿ ನಾಯಕರು ಬಿಜೆಪಿಗೆ ಬರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಶುಕ್ರವಾರದಿಂದ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಪರ ಪ್ರಚಾರ ನಡೆಸುತ್ತಿರುವ ಸಚಿವರು, ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಈ ಭಾಗದ ಐದಾರು ಮಂದಿ ನಾಯಕರು ಯಾವುದೇ ಷರತ್ತಿಲ್ಲದೇ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿ ಸೇರುವ ಬಗ್ಗೆ ಪಕ್ಷದ ಅಧ್ಯಕ್ಷರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಬೇರೆ ಪಕ್ಷದ ನಾಯಕರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಯಾಗುತ್ತಿದೆ. ಶೀಘ್ರ ಈ ಪ್ರಕ್ರಿಯೆಯ ಫಲಿತಾಂಶ ನಿಮಗೇ ತಿಳಿಯುತ್ತದೆ ಎಂದರು. ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಎಐಸಿಸಿ ದುರ್ಬಲವಾಗುತ್ತಿದ್ದತೆಯೇ ಕಾಂಗ್ರೆಸ್ ನಲ್ಲಿ ಎಲ್ಲರೂ ನಾಯಕರಾಗಲು ಹವಣ ಸುತ್ತಿದ್ದಾರೆ. ಒಂದೆಡೆ ಸಿದ್ದರಾಮಯ್ಯ ಬಣ ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಗುಂಪು ತದ್ವಿರುದ್ಧ ದಿಕ್ಕಿನಲ್ಲಿ ಸಾಗಿರುವಾಗ ಪಕ್ಷ ಇಬ್ಭಾಗ ವಾಗುವುದು ಖಚಿತ. ಇಂತಹ ಪರಿಸ್ಥಿತಿಯಲ್ಲಿ ನಾಯಕರಿಗೆ ಉಳಿಗಾಲವಿಲ್ಲ ಎಂಬುದು ಸಾಬೀತಾಗಿರುವುದರಿಂದ ಅವರು ನಮ್ಮ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ ಎಂದರು.

ಕ್ಷೇತ್ರದ ಮತದಾರರ ತೀರ್ಮಾನದಂತೆ ನನ್ನ ನಿರ್ಧಾರ

ಮೈಸೂರು: ನನ್ನ ಕ್ಷೇತ್ರದ ಮತದಾರರನ್ನು ಕೇಳಿ ಯಾವ ಪಕ್ಷ ಸೇರಬೇಕೆಂಬುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಈಗಲೂ ನಾನು ಜೆಡಿಎಸ್ ಶಾಸಕ. ನಾನು ಇನ್ನೂ ಒಂದು ವರ್ಷ ಶಾಸಕನಾಗಿರುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಆಗಿಂದಾಗ್ಗೆ ಮುಖ್ಯಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳನ್ನು ಭೇಟಿ ಮಾಡುತ್ತಿರಬೇಕಾಗುತ್ತದೆ. ಅದೇ ರೀತಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿಯಾಗಿದ್ದು ನಿಜ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ತಿಳಿಸಿದರು. ಹಳೇ ಮೈಸೂರು ಭಾಗದ ಐದಾರು ಮಂದಿ ಘಟಾನುಘಟಿ ನಾಯಕರು ಬಿಜೆಪಿ
ಸೇರುತ್ತಿದ್ದಾರೆ ಎಂಬ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿ.ಟಿ. ದೇವೇಗೌಡರು, ಪಕ್ಷ ಸೇರುವ ಬಗ್ಗೆ ಅವರು ಮಾತನಾಡುತ್ತಿರಬಹುದು. ಆದರೆ ನನ್ನ ಇಷ್ಟು ವರ್ಷಗಳ ರಾಜಕೀಯ ಜೀವನದ ಅನುಭವದಲ್ಲಿ ಎಲ್ಲಾ ಪಕ್ಷಗಳ ವರ್ತನೆ, ನಡವಳಿಕೆಗಳನ್ನು ನೋಡಿದ್ದೇನೆ ಎಂದರು. ನನ್ನಂತಹ ಹಿರಿಯ ರಾಜಕಾರಣ ಗೆ ಯಾವ ಪಕ್ಷದಲ್ಲಿ ಗೌರವ, ಪ್ರೀತಿ ಸಿಗುತ್ತದೋ ಅಲ್ಲಿರುವುದು ನನಗೂ ಗೌರವ. ನಾನೇನು ಮುಖ್ಯಮಂತ್ರಿ ಸ್ಥಾನ ಕೇಳುವವನಲ್ಲ, ಕೇಳಿಯೂ ಇಲ್ಲ. ಅನುಭವಕ್ಕೆ ತಕ್ಕ ಗೌರವವನ್ನು ಬಯಸು ತ್ತೇನಷ್ಟೇ. ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಕ್ಷೇತ್ರದ ಜನರ ಮುಂದೆ ನಿಂತು ಕೇಳುತ್ತೇನೆ. ಅವರು ಯಾವ ಪಕ್ಷ ಹೇಳುತ್ತಾರೋ ಅಲ್ಲಿಗೆ ಸೇರುತ್ತೇನೆಯೇ ಹೊರತು, ಈಗಲೇ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಜಿಟಿಡಿ ನುಡಿದರು.

ಜಿ.ಡಿ.ಹರೀಶ್‌ಗೌಡರಿಗಾಗಿ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ

ಮೈಸೂರು: ಜಿ.ಟಿ.ದೇವೇಗೌಡರು ಬಿಜೆಪಿಗೆ ಬಂದರೆ ಸ್ವಾಗತ. ಅವರ ಪುತ್ರನಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಲೂ ಸಿದ್ಧನಿದ್ದೇನೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದ್ದಾರೆ.

ಮೈಸೂರು ಭಾಗದ ಘಟಾನುಘಟಿ ನಾಯಕರು ಬಿಜೆಪಿ ಸೇರುತ್ತಾರೆಂಬ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಜಿ.ಟಿ. ದೇವೇಗೌಡರು ಬಂದರೆ ಸ್ವಾಗತ, ಅವರ ಪುತ್ರ ಜಿ.ಡಿ.ಹರೀಶ್‌ಗೌಡರಿಗೆ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸಿದರೆ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ ಎಂದರು.

ಜಿ.ಟಿ.ದೇವೇಗೌಡರು ಬಿಜೆಪಿಗೆ ಬಂದು ೮ ಸ್ಥಾನ ಗೆಲ್ಲಿಸುತ್ತಾರೆ ಎನ್ನುವುದಾದರೆ ನಾನು ಕ್ಷೇತ್ರ ತ್ಯಾಗ ಮಾಡಲು ಸಿದ್ಧ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಪಕ್ಷಕ್ಕೆ ನಿಷ್ಠಾವಂತನಾಗಿ ಈ ಭಾಗದಲ್ಲಿ ೮ ಸ್ಥಾನದಲ್ಲಿ ಬಿಜೆಪಿ ಗೆಲ್ಲಿಸುವುದಾದರೆ ನಾನು ಯಾವುದೇ ತ್ಯಾಗವನ್ನಾ ದರೂ ಮಾಡುತ್ತೇನೆ ಎಂದ ಅವರು, ನಿಜಕ್ಕೂ ಬೇರೆ ಪಕ್ಷದ ನಾಯಕರು ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆಗೆ, ಆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಕೇಳಿ ಎಂದರು.

 

Translate »