‘ದೇಸಿ ಉತ್ಸವ’ದಲ್ಲಿ ಗಮನ ಸೆಳೆದ ಕುಂಟೆ ಬಿಲ್ಲೆ, ಪಗಡೆ, ಚೌಕಾಬಾರ, ಹುಲಿ-ಕುರಿ ಆಟ
ಮೈಸೂರು

‘ದೇಸಿ ಉತ್ಸವ’ದಲ್ಲಿ ಗಮನ ಸೆಳೆದ ಕುಂಟೆ ಬಿಲ್ಲೆ, ಪಗಡೆ, ಚೌಕಾಬಾರ, ಹುಲಿ-ಕುರಿ ಆಟ

May 16, 2022

ಮೈಸೂರು, ಮೇ ೧೫(ಜಿಎ)-ರಾಷ್ಟೊçÃತ್ಥಾನ ವಿದ್ಯಾ ಕೇಂದ್ರದ ವತಿಯಿಂದ ಎನ್‌ಐಇ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ `ದೇಸಿ ಉತ್ಸವ’ವನ್ನು ಅಂತಾರಾಷ್ಟಿçÃಯ ಯೋಗ ಪಟು ಖುಷಿ ಶನಿವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬರಲಾಗದ ಪರಿಸ್ಥಿತಿಯಿದ್ದಾಗ ಚೌಕಾಬಾರ, ಪಗಡೆ, ಅಳಿಗುಳಿಮನೆ ಮತ್ತು ಅನೇಕ ದೇಸಿ ಆಟಗಳು ಮಕ್ಕ ಳನ್ನು ಆಕರ್ಷಿಸಿದೆ. ಅದೇ ರೀತಿ ಪ್ರತಿಯೊಬ್ಬರಿಗೂ ಈ ಕ್ರೀಡೆ ತಲುಪುವಂತಾಗಬೇಕು. ದೇಸಿ ಕ್ರೀಡೆಗಳಿಗೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಮಾನ್ಯತೆ ದೊರೆಯುತ್ತಿದೆ. ಅದೇ ರೀತಿ ಇನ್ನಷ್ಟು ಕ್ರೀಡೆಗಳು ಮುನ್ನೆಲೆಗೆ ಬರಬೇಕು ಎಂದರು.

ಕೆಲ ಪೋಷಕರ ತಪ್ಪಿನಿಂದ ಮಕ್ಕಳಿಗೆ ದೇಸಿ ಕ್ರೀಡೆ ಬಗ್ಗೆಯೇ ತಿಳಿದಿಲ್ಲ. ಏಕೆಂದರೆ ತಂದೆ, ತಾಯಿಗಳು ತಮ್ಮ ಹಿಂದಿನ ತಲೆ ಮಾರಿನ ಆಟ, ಸಂಸ್ಕöÈತಿ, ನಡವಳಿಕೆಗಳನ್ನು ಮಕ್ಕಳಿಗೆ ಹೇಳಿ ಕೊಟ್ಟಿಲ್ಲ ಎಂದು ರಾಷ್ಟೊçÃತ್ಥಾನ ವಿದ್ಯಾ ಕೇಂದ್ರದ ಕಾರ್ಯ ದರ್ಶಿ ಎ.ಆರ್.ಮಲ್ಲರಾಜ್ ಅರಸು ಬೇಸರ ವ್ಯಕ್ತಪಡಿಸಿದರು.

`ದೇಸಿ ಉತ್ಸವ’ದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಕುಂಟೆ ಬಿಲ್ಲೆ, ಪಗಡೆ, ಚೌಕಾಬಾರ, ಹುಲಿ- ಕುರಿ, ಅಳಿಗುಳಿ ಮನೆ ಮತ್ತಿತರ ಗ್ರಾಮೀಣ ಸೊಗಡಿನ ಆಟಗಳನ್ನು ಆಡಿ ಗಮನಸೆಳೆದರು ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಪ್ರತಿಯೊಂದರಲ್ಲೂ ಭಾಗವಹಿಸಿ ಮಕ್ಕಳು ಎತ್ತಿನ ಗಾಡಿಯಲ್ಲಿನ ಕುಳಿತು ಸ್ವಲ್ಪ ದೂರ ಚಲಿಸಿ ಸಂತಸಪಟ್ಟರು.

 

Translate »