ಬೈಕ್ ಸವಾರರಿಂದ ಮಣ್ಣು ಉಳಿಸಿ ಅಭಿಯಾನ
ಮೈಸೂರು

ಬೈಕ್ ಸವಾರರಿಂದ ಮಣ್ಣು ಉಳಿಸಿ ಅಭಿಯಾನ

May 16, 2022

ಮೈಸೂರು, ಮೇ ೧೫(ಆರ್‌ಕೆಬಿ)- ಮಣ್ಣು ಉಳಿಸಿ ಅಭಿಯಾನವನ್ನು ಬೆಂಬಲಿಸಿ ವಿವಿಧ ಬೈಕಿಂಗ್ ಕ್ಲಬ್‌ಗಳ ೧೦೦ಕ್ಕೂ ಹೆಚ್ಚು ಬೈಕ್ ಸವಾರರು ಭಾನುವಾರ ಮೈಸೂರಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಬೆಂಗಳೂರು ಮತ್ತು ತುಮಕೂರಿನಿಂದ ಮಧ್ಯಾಹ್ನ ಆಗಮಿಸಿದ ಬೈಕ್ ಸವಾರರನ್ನು ಮೈಸೂರಿನ ಬೆಂಗಳೂರು ಗೇಟ್ ಬಳಿ (ಕೊಲಂಬಿಯಾ ಏಷಿಯಾ ವೃತ್ತ)ದ ಬಳಿ ಸ್ವಾಗತಿಸಲಾಯಿತು.

ಅಲ್ಲಿಂದ ಸಾಗಿದ ಬೈಕ್ ಸವಾರರು ಜೆಎಸ್‌ಎಸ್ ಮೆಡಿಕಲ್ ಕಾಲೇಜು, ಬನ್ನಿಮಂಟಪ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಮೈಸೂರು ಅರಮನೆ ರಸ್ತೆ, ಗನ್ ಹೌಸ್, ಚಾಮರಾಜ ಜೋಡಿ ರಸ್ತೆ, ಕೃಷ್ಣರಾಜ ಬುಲೆವಾರ್ಡ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಬಳಿ, ಆದಿಪಂಪ ರಸ್ತೆ, ಕಾಳಿದಾಸ ರಸ್ತೆ, ಪಂಚವಟಿ ವೃತ್ತ, ಸಾಹಿತ್ಯ ಭವನ ರಸ್ತೆ ಮೂಲಕ ಮುಡಾ ಕ್ರೀಡಾಂಗಣ ತಲುಪಿತು.

ಅಲ್ಲಿ ಬೈಕ್ ಸಮಾವೇಶಗೊಂಡ ಬೈಕ್ ಸವಾರರನ್ನು ಇಷಾ ಮಣ ್ಣನ ಸ್ವಯಂ ಸೇವಕರು ಬರಮಾಡಿಕೊಂಡರು. ನಂತರ ನಡೆದ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗೌರ್ನರ್ ರವೀಂದ್ರ ಭಟ್, ನೃತ್ಯ ಕಲಾವಿದ (ಆಪ್ತಮಿತ್ರ ಖ್ಯಾತಿ) ಶ್ರೀಧರ್ ಜೈನ್ ದಂಪತಿ ಪಾಲ್ಗೊಂಡಿದ್ದರು.

ಈ ವೇಳೆ ಶ್ರೀಧರ್ ಜೈನ್, ಪ್ರಸ್ತುತ ಮಣ ್ಣನ ಫಲವತ್ತತೆ ಬಗ್ಗೆ ಮಾತನಾಡಿ, ಹಿಂದೆ ಮಣ್ಣು ಬಹಳ ಫಲವತ್ತಾಗಿತ್ತು. ಆದರೆ ಇಂದು ರಸಗೊಬ್ಬರ ಬಳಕೆಯಿಂದ ಮಣ ್ಣನ ಫಲವತ್ತತೆ ನಾಶವಾಗಿದೆ. ಹಾಗಾಗಿ ಸಾವಯವ ಗೊಬ್ಬರ ಬಳಕೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಈ ಬಗ್ಗೆ ಹೆಚ್ಚು ಜನಜಾಗೃತಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮಣ್ಣು ಉಳಿಸಿ ಅಭಿಯಾನ ಕೈಗೊಂಡಿರುವ ಬೈಕ್ ಸವಾರರ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಇಷಾ ಮಣ್ಣು ಉಳಿಸಿ ಅಭಿಯಾನದ ಬೈಕ್ ಸವಾರರ ಪರವಾಗಿ ಮನು, ಕಮಲ್, ಬೈರ‍್ಸ್ ಅಸೋಸಿಯೇಷನ್ ಆಫ್ ಬೈರ‍್ಸ್ ಕಮಿಟಿ (ಎಬಿಸಿ) ಅಧ್ಯಕ್ಷ ರಂಜಿತ್ ಇನ್ನಿತರರು ಉಪಸ್ಥಿತರಿದ್ದರು.

 

Translate »