ದಬ್ಬೇಘಟ್ಟ ಬಳಿ ಬೋನಿಗೆ ಬಿದ್ದ ಚಿರತೆ
ಮಂಡ್ಯ

ದಬ್ಬೇಘಟ್ಟ ಬಳಿ ಬೋನಿಗೆ ಬಿದ್ದ ಚಿರತೆ

August 19, 2021

ಕಿಕ್ಕೇರಿ, ಆ.18- ಹೋಬಳಿಯ ದಬ್ಬೇಘಟ್ಟ ಬಳಿ ಚಿರತೆಯೊಂದು ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿಗೆ ಬಿದ್ದಿದ್ದು, ಇದುವರೆ ವಿಗೂ ಒಟ್ಟು 2 ಚಿರತೆಗಳು ಸೆರೆಯಾಗಿದೆ. ಹೋಬಳಿಯ ದಬ್ಬೇಘಟ್ಟ ಗ್ರಾಮದ ಪಾಪೇಗೌಡರ ಜಮೀನು ಬಳಿ ಬೋನು ಇರಿಸಲಾ ಗಿತ್ತು. ಆಹಾರ ಅರಸಿ ಬಂದಿದ್ದ ಚಿರತೆ ಬೋನಿನಲ್ಲಿದ್ದ ಮೇಕೆ ಕಂಡು ಮಂಗಳ ವಾರ ಮುಂಜಾನೆ ಬೋನಿಗೆ ಸೆರೆಯಾಗಿದೆ. ಇದೇ ಸ್ಥಳದಲ್ಲಿ ನರೇಂದ್ರ ಪ್ರಸಾದ್ ಅವರ ಫಾರಂಹೌಸ್‍ನಲ್ಲಿ ಚಿರತೆ ಸೆರೆಹಿಡಿಯಲು ಇಡಲಾಗಿದ್ದ ಬೋನಿಗೆ ನಾಲ್ಕೈದು ದಿನಗಳ ಹಿಂದೆ(ಆ.13ರ ಶುಕ್ರವಾರ) ಚಿರತೆಯೊಂದು ಸೆರೆಯಾಗಿತ್ತು.
ಈಗ ಮತ್ತೊಂದು ಚಿರತೆ ಇದೇ ಸ್ಥಳದಲ್ಲಿ ಸೆರೆ ಸಿಕ್ಕಿದ್ದು, ನಾಗರಿಕರಲ್ಲಿ ಚಿರತೆಯ ಭಯ ಮತ್ತಷ್ಟು ಕಾಡುವಂತಾಗಿದೆ. ಬೋನಿನಲ್ಲಿ ಚಿರತೆ ಬಂಧಿಯಾಗಿರುವ ವಿಷಯ ತಿಳಿದು ಸುತ್ತಮುತ್ತಲ ಗ್ರಾಮಸ್ಥರು ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ರಮೇಶ್, ಅರಣ್ಯ ರಕ್ಷಕ ಶಿವಕುಮಾರ್ ಆಗಮಿಸಿ ಬೋನಿನಲ್ಲಿದ್ದ ಚಿರತೆಯನ್ನು ತಾಲೂಕು ಅರಣ್ಯ ಇಲಾಖೆ ಕಛೇರಿಗೆ ರವಾನಿಸಿದರು. ವಲಯ ಅರಣ್ಯ ಇಲಾಖೆ ಅಧಿಕಾರಿ ಗಂಗಾಧರ್ ಮಾತನಾಡಿ, ಚಿರತೆ ಸುಮಾರು 6ವರ್ಷದ ಗಂಡು ಚಿರತೆಯಾಗಿದೆ. ಮೇಲಾಧಿಕಾರಿಗಳ ಆದೇಶದಂತೆ ಸೂಕ್ತ ವನ್ಯ ಜೀವಿಗಳ ಸಂರಕ್ಷಿತ ಪ್ರದೇಶವಾದ ಕೊಳ್ಳೇಗಾಲದ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಬಿಡಲಾಗುವುದು ಎಂದರು.

Translate »