ನಾಳೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ರಾಷ್ಟ್ರೀಯ ಶಿಕ್ಷಣ ನೀತಿ ಅನಾವರಣ
ಮೈಸೂರು

ನಾಳೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನಾವರಣ

August 19, 2021

ಮೈಸೂರು, ಆ.18(ಆರ್‍ಕೆ)-ಮಾನವ ಸಂಪನ್ಮೂಲ ಸಚಿವಾಲಯವು ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಕಾರ್ಯಕ್ರಮಕ್ಕೆ ಆಗಸ್ಟ್ 20ರಂದು ಮೈಸೂರಿನ ವಿಶ್ವವಿದ್ಯಾನಿಲಯವು ಚಾಲನೆ ನೀಡಲಿದೆ.

ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಮಧ್ಯಾಹ್ನ 3.30 ಗಂಟೆಗೆ ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ರಾಷ್ಟ್ರೀಯ ಶಿಕ್ಷಣ ನೀತಿ (ಓಇP)ಯನ್ನು ಅನಾವರಣಗೊಳಿಸುವರು.

ಅದಕ್ಕೂ ಮುಂಚೆ ಬೆಳಗ್ಗೆ 11 ಗಂಟೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಅವರು, `ರಾಷ್ಟ್ರೀಯ ಶಿಕ್ಷಣ ನೀತಿ’ ಒಂದು ದಿನದ ಕಾರ್ಯಾ ಗಾರವನ್ನು ಉದ್ಘಾಟಿಸಲಿದ್ದಾರೆ. ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ವಿಶಿಷ್ಟ ಸಾಮಥ್ರ್ಯ ಗುರ್ತಿಸಿ ಉತ್ತೇಜಿ ಸುವುದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಜೊತೆಗೆ ಬಹು ಶಿಸ್ತ್ರೀಯ (ಒuಟಣi ಜiಛಿiಠಿಟiಟಿಚಿಡಿಥಿ) ಶಿಕ್ಷಣದ ಕಡೆ ಗಮನ ಹರಿಸುವುದು, ಪದವಿ ತರಗತಿ ಗಳಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸು ವುದು ಹೊಸ ನೀತಿಯ ಉದ್ದೇಶವಾಗಿದೆ.

ಸೃಜನಶೀಲತೆ, ಸೂಕ್ಷ್ಮ ಆಲೋಚನೆ, ಸಂವಹನ ಕೌಶಲ್ಯ ಗಳ ಮೇಲೆ ಪ್ರಭುತ್ವ ಹೊಂದಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವುದು, ಬೋಧನೆ ಹಾಗೂ ಕಲಿಕಾ ವಿಧಾನ ದಲ್ಲಿ ತಂತ್ರಜ್ಞಾನ ಬಳಕೆ, ಉದ್ಯೋಗ ಸಿಗುವ ಕೋರ್ಸು ಗಳ ಅನುಷ್ಠಾನ, 4 ವರ್ಷದ ಪದವಿ ಪೂರೈಸುವ ವಿದ್ಯಾರ್ಥಿ ಗಳಿಗೆ ಆನರ್ಸ್ ಜೊತೆಗೆ ಬ್ಯಾಚುಲರ್ ಡಿಗ್ರಿ ಪಡೆಯಲು ಅನುವು ಮಾಡಿಕೊಡಲಾಗುವುದು. ಭಾಷೆ ಮತ್ತು ಕೌಶಲಾ ಭಿವೃದ್ಧಿ ಕೋರ್ಸ್‍ಗಳಿಂದ ಸಂವಹನ ಸಾಮಥ್ರ್ಯವೃದ್ಧಿಯಾಗಿ ಸ್ವಯಂ ಉದ್ಯೋಗಕ್ಕೆ ಸಹಕಾರಿಯಾಗುವುದಲ್ಲದೆ, ವಿಜ್ಞಾನಿ, ಸಂಶೋಧಕ, ಅಧ್ಯಾಪಕ, ಉದ್ಯಮಿ, ನಿರ್ವಹಣೆ, ವಿದ್ಯುತ್ ಉಪಕರಣ ದುರಸ್ತಿ, ಪ್ರಯೋಗಾಲಯ ತಂತ್ರಜ್ಞ ಸೇರಿ ದಂತೆ ಹಲವು ಉದ್ಯೋಗಸ್ಥನಾಗಲು ಎನ್‍ಇಪಿ ಸಹಕಾರಿಯಾಗಲಿದೆ. ಗ್ರಾಫಿಂಗ್ ತಂತ್ರಾಂಶ, ಮೆಟೀರಿ ಯಲ್ ಟೆಸ್ಟಿಂಗ್, ಕಂಪ್ಯೂಟರ್ ಪ್ರೋಗ್ರಾಮಿಂಗ್, ವೈಜ್ಞಾನಿಕ ತತ್ವಜ್ಞಾನದಂತಹ ತಾಂತ್ರಿಕ ಕೌಶಲ್ಯಗಳು, ಕನ್ನಡ ವಿಜ್ಞಾನ, ಇಂಗ್ಲಿಷ್ ವಿಜ್ಞಾನ, ವ್ಯಕ್ತಿತ್ವ ವಿಕಸನ, ಉದ್ಯಮಶೀಲತೆ, ಕಿರು ಸಂಶೋಧನಾ ವರದಿ ಸಿದ್ಧ ಪಡಿಸುವುದು, ವ್ಯಕ್ತಿತ್ವ ವಿಕಸನದಂತಹ ಸಂವಹನ ಕೌಶಲಗಳು ಈ ನೀತಿಯಿಂದ ವೃದ್ಧಿಯಾಗಲಿದೆ.

ಪ್ರಸಕ್ತ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಕಾರ್ಯ ಸೂಚಿಯಂತೆ ಮೈಸೂರು ವಿಶ್ವವಿದ್ಯಾನಿಲಯವು ಬೋಧನಾ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸರ್ವ ರೀತಿಯಲ್ಲಿ ಸಜ್ಜಾಗಿದೆ. ತಜ್ಞರ ಸಮಿತಿ ನೀಡಿ ರುವ ವರದಿ ಆಧಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಿಕುಲಂ ಫ್ರೇಂವರ್ಕ್ ಸಿದ್ಧಪಡಿಸಲಾಗಿದ್ದು, ಅನುಷ್ಠಾನದ ಮಾರ್ಗಸೂಚಿ ಮತ್ತು ಮಾದರಿ ಪ್ರೋಗ್ರಾಮ್ ವಿನ್ಯಾಸ ಪ್ರಕಟಿಸಲಾಗಿದೆ. ಅದರಂತೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿಷಯವಾರು ಮಾದರಿ ಪಠ್ಯಕ್ರಮಗಳನ್ನು ಸಿದ್ಧಪಡಿಸಲು ಸರ್ಕಾರವು ಆಗಸ್ಟ್ 13ರಂದು ವಿಷಯ ತಜ್ಞರ ಸಮಿತಿಗಳನ್ನು ರಚಿಸಿ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »