ಪ್ರಧಾನಿ ಮೋದಿ ನೇತೃತ್ವದ ಒಂದು ವರ್ಷದ ಸಾಧನೆ ಸಾರುವ ‘ಕರ್ನಾಟಕ ಜನಸಂವಾದ’ ಸಮಾರೋಪ
ಮೈಸೂರು

ಪ್ರಧಾನಿ ಮೋದಿ ನೇತೃತ್ವದ ಒಂದು ವರ್ಷದ ಸಾಧನೆ ಸಾರುವ ‘ಕರ್ನಾಟಕ ಜನಸಂವಾದ’ ಸಮಾರೋಪ

July 7, 2020

ಮೈಸೂರು, ಜು.6(ಎಂಕೆ)- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2ನೇ ಅವ ಧಿಯ ಮೊದಲ ವರ್ಷ ಪೂರೈಸಿರುವ ಹಿನ್ನೆಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮ ಗಳನ್ನು ಮನೆ ಮನೆಗೆ ತಿಳಿಸಲು ಆನ್‍ಲೈನ್ ಮೂಲಕ ಹಮ್ಮಿಕೊಂಡಿರುವ ‘ಕರ್ನಾಟಕ ಜನಸಂವಾದ’ ಅಭಿ ಯಾನ ಸಮಾರೋಪ ಕಾರ್ಯಕ್ರಮವನ್ನು ಮೈಸೂ ರಿನ ಹಲವೆಡೆ ಸ್ಥಳೀಯ ಬಿಜೆಪಿ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ವೀಕ್ಷಣೆ ಮಾಡಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಬಿ.ಎಲ್.ಸಂತೋಷ್, ‘ಕರ್ನಾಟಕ ಜನ ಸಂವಾದ’ ಅಭಿಯಾನದ ಸಮಾರೋಪ ಭಾಷಣ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್‍ಕಟೀಲ್, ಡಿಸಿಎಂ ಗೋವಿಂದ ಕಾರಜೋಳ ಇತರರು ಭಾಗವಹಿಸಿದ್ದರು.

ಬಿಜೆಪಿ ಕಚೇರಿ: ಮೈಸೂರು ನಗರದ ಪಕ್ಷದ ಕಚೇರಿ ಯಲ್ಲಿ ಕರ್ನಾಟಕ ಜನಸಂವಾದ ಡಿಜಿಟಲ್ ಅಭಿಯಾನದ ಸಮಾರೋಪ ಸಮಾರಂಭವನ್ನು ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಮೈವಿ ರವಿ ಶಂಕರ್, ಮುಖಂಡರಾದ ಸಿ.ಬಸವೇಗೌಡ, ಶಿವ ಕುಮಾರ್ ವಿ.ಸೋಮ ಸುಂದರ್, ಗಿರಿಧರ್, ವಾಣೀಶ್ ಮತ್ತಿತರರು ಹಾಜರಿದ್ದರು.

ಕುರಿಮಂಡಿ: ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್.ಸಿ.ಮೋರ್ಚಾ ವತಿಯಿಂದ ನಗರದ ಕುರಿ ಮಂಡಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ‘ಕರ್ನಾಟಕ ಜನಸಂವಾದ’ ಅಭಿಯಾನದ ಸಮಾರೋಪ ಭಾಷಣ ನೇರ ಪ್ರಸಾರವನ್ನು ಬೃಹತ್ ಎಇಡಿ ಪರದೆ ಮೂಲಕ ವೀಕ್ಷಣೆ ಮಾಡಲಾಯಿತು. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್, ಎನ್.ಆರ್.ಕ್ಷೇತ್ರದ ಅಧ್ಯಕ್ಷ ಭಾನು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ, ಎಸ್.ಸಿ.ಮೋರ್ಚಾ ಅಧ್ಯಕ್ಷ ಪಿ.ಸತೀಶ್, ವಿನೋದ್, ನಾಗರಾಜ್, ಮಣಿ, ಪುಟ್ಟರಾಜು ಮತ್ತಿತರರಿದ್ದರು.

ಶಾರದಾದೇವಿನಗರ: ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ನಗರ ಮಂಡಲದ ವತಿಯಿಂದ ಶಾರದಾದೇವಿನಗರದ ಇಂದಿರಾ ಶಾಲೆ ಆವರಣದಲ್ಲಿ ಟಿ.ವಿ ಪರದೆಯಲ್ಲಿ ‘ಕರ್ನಾಟಕ ಜನಸಂವಾದ’ ಅಭಿ ಯಾನದ ಸಮಾರೋಪ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ಬಿ.ಎಂ.ರಘು, ಪ್ರಧಾನ ಕಾರ್ಯ ದರ್ಶಿಗಳಾದ ಹೆಚ್.ಜಿ.ರಾಜಮಣಿ, ಈರೇಗೌಡ, ಉಪಾ ಧ್ಯಕ್ಷರಾದ ವಿಜಯ ಮಂಜುನಾಥ್, ರಾಕೇಶ್ ಭಟ್, ಗಿರೀಶ್ ದಟ್ಟಗಳ್ಳಿ, ಮಹೇಂದ್ರಗೌಡ, ಪ್ರತಾಪ್ ದಟ್ಟ ಗಳ್ಳಿ, ಕಾರ್ಯಾಲಯ ಕಾರ್ಯದರ್ಶಿ ಶಶಿಕಾಂತ್, ಕಾರ್ಯದರ್ಶಿ ರಮಾಭಾಯಿ, ನಾಗರಾಜ ಜನ್ನು, ಮುಖಂಡರಾದ ರವಿಕುಮಾರ್, ಕಾರ್ತಿಕ್‍ಗೌಡ, ಸ್ಟೀಫನ್ ಸುಜಿತ್, ಶುಭಾಶ್ರೀ, ಗೀತಾ ಮಹೇಶ್, ರಾಚಪ್ಪಾಜಿ, ಅನಿಲ್, ಕೆ.ಜೆ.ಮಧು, ಹೇಮಂತ್, ಪುನಿತ್, ಸಾಗರ್ ಸಿಂಗ್ ರಜಪೂತ್, ಅನುಪ್, ರಾಘವೇಂದ್ರ ಅಭಿಷೇಕ್, ಶಿವಶಂಜರ್ ಜನ್ನು ಮತ್ತಿತರರು ಉಪಸ್ಥಿತರಿದ್ದರು.

ಮನೆಗಳಲ್ಲಿ ವೀಕ್ಷಣೆ: ಶಾಸಕರಾದ ಎಸ್.ಎ.ರಾಮ ದಾಸ್, ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್‍ಸ್ವಾಮಿ ಇನ್ನಿತರೆ ಬಿಜೆಪಿ ಮುಖಂಡರು ಮನೆಯಲ್ಲಿಯೇ ಕುಳಿತು ಟಿವಿ, ಮೊಬೈಲ್ ಮೂಲಕ ಆನ್‍ಲೈನ್ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು.

Translate »