ಕಾಂಗ್ರೆಸ್ ಖಂಡನಾ ಸಭೆ; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ
ಮೈಸೂರು

ಕಾಂಗ್ರೆಸ್ ಖಂಡನಾ ಸಭೆ; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

July 7, 2020

ಮೈಸೂರು, ಜು.6(ಆರ್‍ಕೆಬಿ)- ಕೋವಿಡ್-19 ಸೋಂಕು ನಿಯಂತ್ರಿಸಲು ಖರೀದಿಸಲಾಗಿರುವ ಉಪಕರಣಗಳು ಮಾರುಕಟ್ಟೆ ಬೆಲೆಗಿಂತ ಅತೀ ದುಬಾರಿ ಮತ್ತು ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇದರ ಬಗ್ಗೆ ತನಿಖೆಗೆ ಸೂಚಿಸು ವಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಜ್ಯಪಾಲರಲ್ಲಿ ಮನವಿ ಮಾಡಿದೆ.

ಈ ಕುರಿತಂತೆ ರೈಲ್ವೆ ನಿಲ್ದಾಣದ ಬಳಿಯ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಖಂಡನಾ ಸಭೆಯಲ್ಲಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದು, ಪ್ರತ್ಯೇಕವಾಗಿ ಸಿಬಿಐ ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರ ರಾಜೀ ನಾಮೆಗೆ ಒತ್ತಾಯಿಸುವುದು, ಕೆಪಿಸಿಸಿ ನಿರ್ದೇಶನದ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳುವುದು, ಅವ್ಯವ ಹಾರ ಕುರಿತು ತನಿಖೆ ನಡೆಸಲು ರಾಜ್ಯ ಪಾಲರನ್ನು ಒತ್ತಾಯಿಸಲು ಜಿಲ್ಲಾಧಿಕಾರಿ ಗಳ ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಖಂಡನಾ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ರಾದ ಮಂಜುಳಾ ಮಾನಸ, ಜಿಲ್ಲಾ ಗ್ರಾಮಾಂತರ ಕಾನೂನು ಘಟಕದ ಅಧ್ಯಕ್ಷ ಸುರೇಶ್ ಪಾಳ್ಯ, ನಗರ ಘಟಕದ ಅಧ್ಯಕ್ಷ ವೈದ್ಯನಾಥ್, ಹಿರಿಯ ವಕೀಲ ಸಿ.ಎಂ. ಜಗದೀಶ್, ಬಸವರಾಜ್, ಸುರೇಶ್, ಆನಂದ್, ತಿಮ್ಮಯ್ಯ ಶಿವಪ್ರಸಾದ್, ಮಂಜನಾಥ್, ಕಾಂತರಾಜ್, ಮಹೇಶ್, ಶಿವರಾಜ್, ಚರಣ್‍ರಾಜ್, ಲಕ್ಷ್ಮಣ್ ಗುರು, ಮನೋನ್ಮಣಿ, ಮೀನಾಕ್ಷಿ, ಕವಿತಾ ಇನ್ನಿತರರು ಭಾಗವಹಿಸಿದ್ದರು.

Translate »