ಜು.15ರವರೆಗೆ ಕ್ರಾಫರ್ಡ್ ಭವನದಲ್ಲಿ ಶೇ.50ರಷ್ಟು ಸಿಬ್ಬಂದಿ ಕೆಲಸ
ಮೈಸೂರು

ಜು.15ರವರೆಗೆ ಕ್ರಾಫರ್ಡ್ ಭವನದಲ್ಲಿ ಶೇ.50ರಷ್ಟು ಸಿಬ್ಬಂದಿ ಕೆಲಸ

July 7, 2020

ಮೈಸೂರು, ಜು. 6(ಆರ್‍ಕೆ)- ಸಿಬ್ಬಂದಿ ಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ಕ್ರಾಫರ್ಡ್ ಭವನದಲ್ಲಿ ಜುಲೈ 15 ರವರೆಗೆ ಶೇ.50ರಷ್ಟು ಸಿಬ್ಬಂದಿ ಮಾತ್ರ ಹಾಜ ರಾಗುವಂತೆ ಆದೇಶ ಹೊರಡಿಸಲಾಗಿದೆ.

ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್, ಶನಿವಾರ ಕ್ರಾಫರ್ಡ್ ಹಾಲ್‍ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢ ಪಟ್ಟಿರುವುದರಿಂದ ಇಡೀ ಕ್ರಾಫರ್ಡ್ ಭವನವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿಸಿದ್ದೇವೆ ಎಂದರು.

ಭಾನುವಾರವೂ ಡಿಸ್‍ಇನ್ ಫೆಕ್ಟಂಟ್ ಸಿಂಪಡಿಸಿ ಸ್ವಚ್ಛ ಗೊಳಿಸಲಾಗಿತ್ತು. ದಿನದಿಂದ ದಿನಕ್ಕೆ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚಾಗುತ್ತಿರುವು ದರಿಂದ ಮುಂಜಾಗ್ರತಾ ಕ್ರಮವಾಗಿ ಕ್ರಾಫರ್ಡ್ ಭವ ನದ ಕುಲಪತಿ, ರಿಜಿಸ್ಟ್ರಾರ್ ಕಚೇರಿ, ಪರೀಕ್ಷಾಂಗ, ಲೆಕ್ಕ ಶಾಖೆ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಜುಲೈ 15ರವರೆಗೆ ಶೇ. 50ರಷ್ಟು ಸಿಬ್ಬಂದಿಗಳನ್ನಿರಿಸಿಕೊಂಡು ಕೆಲಸ ಮಾಡುವಂತೆ ಆದೇಶ ನೀಡಿರುವುದಾಗಿ ಅವರು ತಿಳಿಸಿದರು.

ಉಳಿದವರು ಮನೆ ಯಿಂದಲೇ ಕೆಲಸ ಮಾಡಿ ಎಂದು ಹೇಳಲಾಗಿದೆ. ಆನ್‍ಲೈನ್ ಮೂಲಕ ಕಡತ ಗಳ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಜುಲೈ 15ರ ನಂತರ ಮತ್ತೆ ಆದೇಶ ಹೊರಡಿಸುತ್ತೇವೆ ಎಂದ ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್, ನಾವು ಅಧಿಕಾರಿ ವರ್ಗದವರು ವಿಜ್ಞಾನ ಭವನದಿಂದ ಇ-ಆಡಳಿತ ಸೇವಾ ನೆಟ್‍ವರ್ಕ್ ಮೂಲಕ ಕೆಲಸ ಮಾಡು ತ್ತಿದ್ದೇವೆ ಎಂದು ತಿಳಿಸಿದರು.

ಸರ್ಕಾರದೊಂದಿಗೆ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಸಭೆಗಳಿಗೆ ಹಾಜರಾಗಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳು ನೀಡುವ ಮಾರ್ಗದರ್ಶನ ದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಪ್ರೊ. ಹೇಮಂತ್‍ಕುಮಾರ್ ಹೇಳಿದರು.

Translate »