ಕೊರೊನಾದಿಂದ ಸತ್ತ ಮಗುವಿನ ದೇಹ ಪಡೆಯಲು ಪೋಷಕರ ಪರದಾಟ
ಮೈಸೂರು

ಕೊರೊನಾದಿಂದ ಸತ್ತ ಮಗುವಿನ ದೇಹ ಪಡೆಯಲು ಪೋಷಕರ ಪರದಾಟ

January 23, 2022

ಮೈಸೂರು, ಜ.22- ಕೊರೊನಾದಿಂದ ತಮ್ಮ ಎರಡು ವರ್ಷದ ಮಗುವನ್ನು ಕಳೆದುಕೊಂಡ ಪೆÇೀಷಕರು ಮಗುವಿನ ದೇಹವನ್ನು ಪಡೆಯಲು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೂ ಹೆಣಗಾಡಿದ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮಗು ಮೈಸೂರಿನ ಅಜ್ಜಿ ಮನೆಗೆ ಬಂದಿತ್ತು. ಉಸಿರಾಟದ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮಗು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಳಿಕ ಪೋಷಕರು ಮಗುವಿನ ದೇಹವನ್ನು ನಮಗೆ ಕೊಡಿ, ನಮ್ಮ ಊರಿನಲ್ಲಿ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಹೇಳಿದ್ದಕ್ಕೆ, ಆಸ್ಪತ್ರೆ ವೈದ್ಯರು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಪ್ರಮಾಣಪತ್ರ ತರÀಬೇಕು ಎಂದು ಹೇಳಿದ್ದಾರೆ.

ಅಲೆದಾಟ : ವೈದ್ಯರ ಸೂಚನೆಯಂತೆ ಪೋಷಕರು ಮೊದಲು ಮೈಸೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪ್ರಸಾದ್ ಅವರಿಗೆ ಕರೆ ಮಾಡಿ ಕೇಳಿದರೆ, ಅವರು ನಮ್ಮ ವ್ಯಾಪ್ತಿಗೆ ಇದು ಬರುವುದಿಲ್ಲ. ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ವಿಚಾರಿಸಿ ಎಂದಿದ್ದಾರೆ.

ತದನಂತರ ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರೆ. ಮಗು ಮೃತಪಟ್ಟ ಆಸ್ಪತ್ರೆ ವ್ಯಾಪ್ತಿಯ ಪೊಲೀಸ್ ಠಾಣೆ ಹೋಗುವಂತೆ ಕಳು ಹಿಸಿದ್ದಾರೆ. ಅಲ್ಲಿಂದ ದೇವರಾಜ ಪೊಲೀಸ್ ಠಾಣೆಗೆ ಬಂದದೆ ಅಲ್ಲಿ ಬಂದÀ ಉತ್ತರವೇ ಬೇರೆಯಾಗಿತ್ತು. ಮೊದಲು ನಿಮ್ಮ ಮಗು ಮೈಸೂರಿನಲ್ಲಿ ವಾಸವಿದೆ ಎಂಬುದಕ್ಕೆ ಮಗು ವಾಸವಿದ್ದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಧೃಡೀಕರಿಸಿಕೊಂಡು ಬನ್ನಿ. ನಂತರ ಏನು ಮಾಡಬೇಕು ಎಂದು ನೋಡೊಣ ಎಂದಿದ್ದಾರೆ.
ಕಂಗೆಟ್ಟ ಪೋಷಕರು ನಗರ ಪೊಲೀಸ್ ಆಯುಕ್ತ ರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅವರು ಈ ರೀತಿ ಕೇಸ್ ಜಿಲ್ಲಾ ಆರೋಗ್ಯಾಧಿಕರಿಗೆ ಒಳಪಡುತ್ತದೆ ಎಂದು ತಿಳಿಸಿದ್ದು, ಕೆ.ಆರ್. ಆಸ್ಪತ್ರೆಯ ಆವರಣದಲ್ಲಿ ರುವ ಪೊಲೀಸರಿಗೆ ಈ ವಿಚಾರವಾಗಿ ಮಾಹಿತಿ ನೀಡಿ ದ್ದಾರೆ. ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆ ಆಧೀಕ್ಷಕರ ಬಳಿ ತೆರಳಿ ವಿಚಾರ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಕುಟುಂಬಸ್ಥರ ಬಳಿ ಬಂದು ಇಲ್ಲಿನ ಯಾವುದೇ ಅಧಿಕಾರಿಯ ಅನುಮತಿ ಬೇಕಿಲ್ಲ. ಮಗುವಿನ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂದು ಸ್ಥಳ ನಿಗದಿಪಡಿಸಲಾಗುತ್ತದೆಯೋ ಆ ಊರಿನ ಗ್ರಾಮ ಪಂಚಾಯತ್ ಸದಸ್ಯ ಅಥವಾ ತಹಶೀಲ್ದಾರ್ ಅವರ ಅನುಮತಿ ಪತ್ರ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗೆ ಮಾಹಿತಿಯೇ ಇಲ್ಲ: ಮಗುವಿನ ತಂದೆ ತಮ್ಮ ಸ್ವಗ್ರಾಮ ಚಿಕ್ಕಮಗಳೂರಿನ ಅಧಿಕಾರಿಗಳನ್ನು ಸಂಪರ್ಕಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ಗ್ರಾಮ ಸ್ಥರು ಸಹ ಅಲ್ಲಿನ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ ಈ ವಿಚಾರವಾಗಿ ತಿಳಿಸಿದ್ದಾರೆ.

ಅಲ್ಲಿನ ಪಿಡಿಓ ನಮಗೆ ಸರ್ಕಾರದಿಂದ ಈ ರೀತಿ ಯಾವುದೇ ಮಾರ್ಗಸೂಚಿ ಬಂದಿಲ್ಲ. ಮತ್ತು ಇದರ ಬಗ್ಗೆ ಮಾಹಿತಿಯೂ ಇಲ್ಲ ಎಂದು ತಿಳಿಸಿದ್ದಾರೆ. ಪೋಷ ಕರು ಕೆಲವರ ಸಹಾಯದಿಂದ ಮೈಸೂರಿನ ತಹಶೀ ಲ್ದಾರ್ ರಕ್ಷಿತ್ ಅವರಿಗೆ ಕರೆ ಮಾಡಿ ಚಿಕ್ಕಮಗಳೂರಿನ ತಹಶೀಲ್ದಾರ್ ಅವರ ದೂರವಾಣಿ ಸಂಖ್ಯೆ ಪಡೆದಿದ್ದಾರೆ.

ನಂತರ ಚಿಕ್ಕಮಗಳೂರಿನ ತಹಶೀಲ್ದಾರ್ ಡಾ. ಕಾಂತರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕರ ಬಳಿ ಮಾತನಾಡಿದರು.
ಈ ವೇಳೆ ಮಗುವಿನ ಬಗ್ಗೆ ಮತ್ತು ಎಲ್ಲಿ ಅಂತ್ಯ ಕ್ರಿಯೆ ಮಾಡುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯ ಒಂದು ಪತ್ರವನ್ನು ವಾಟ್ಸಪ್ ಮುಖಾಂ ತರ ಪಡೆದ ಚಿಕ್ಕಮಗಳೂರಿನ ತಹಶೀಲ್ದಾರ್ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ತರೀಕೆರೆ ತಹಶೀ ಲ್ದಾರ್ ವ್ಯಾಪ್ತಿಗೆ ಬರುತ್ತದೆ ಎಂದರು.

ಅಷ್ಟೊತ್ತಿಗೆ ಸಮಯ 1:00 ಆಗಿತ್ತು : ತರೀಕೆರೆ ತಹಶೀಲ್ದಾರ್ ಹೆಚ್.ಬಿ. ಗೋವಿಂದಪ್ಪ ಅವರನ್ನು ಸಂಪರ್ಕಿಸಿದ್ದಾಗ ಅದು ಏನು ಎಂಬುದು ಗೊತ್ತಿಲ್ಲ. ನಮ್ಮ ತಾಲೂಕು ವೈದ್ಯಾಧಿಕಾರಿ ನಂಬರ್ ನೀಡುತ್ತೇನೆ ಅವರ ಬಳಿ ವಿಚಾರಿಸಿ ಎಂದು ಅವರ ನಂಬರ್ ನೀಡಿದ್ದರು. ನಂತರ ಅವರನ್ನು ಸಂಪರ್ಕಿಸಿದಾಗ ಅವರು ಸಹ ಮಗು ವಿನ ಬಗ್ಗೆ ಮತ್ತು ಎಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ಒಳಗೊಂಡ ಒಂದು ಪತ್ರವನ್ನು ವಾಟ್ಸಪ್ ಮುಖಾಂತರ ಕಳುಹಿಸಿ ನಂತರ ಅದನ್ನು ನೋಡಿ ಇಲ್ಲಿಂದ ಒಂದು ಪತ್ರವನ್ನು ನೀಡುತ್ತೇವೆ ಎಂದರು. ಅಷ್ಟೊತ್ತಿಗೆ ಸಮಯ 1:00 ಆಗಿತ್ತು.

ಸರಿ ಸುಮಾರು 2:45ರ ಸಮಯಕ್ಕೆ ಚಿಕ್ಕ ಮಗಳೂರು ತಾಲೂಕು ವೈದ್ಯಾಧಿಕಾರಿಗಳಿಂದ ಅಧಿಕೃತ ಸಹಿವುಳ್ಳ ಒಂದು ಪತ್ರ ಮೈಸೂರಿನ ಚೆಲುವಾಂಬ ಆಸ್ಪತ್ರೆ ವೈದ್ಯರಿಗೆ ವಾಟ್ಸಪ್ ಮುಖಾಂತರ ತಲುಪಿತು. ಪತ್ರ ತಲುಪಿದ ನಂತರ ಮಗುವಿನ ದೇಹವನ್ನು ಕೊರೊನಾ ಮಾರ್ಗ ಸೂಚಿಯಂತೆ ಕುಟುಂಬಸ್ಥರಿಗೆ ಹಸ್ತಾಂತರಿಸ ಲಾಯಿತು. ಒಂದು ಮಗುವಿನ ಮೃತದೇಹವನ್ನು ಪಡೆಯಲು ಪರದಾಡಬೇಕಾ ಎಂದು ಆಸ್ಪತ್ರೆಯಲ್ಲಿ ಇತರ ರೋಗಿಗಳ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಅಧಿಕಾರಿಗಳ ಅರಿವಿನ ಕೊರತೆ ಬಗ್ಗೆ ಹಿಡಿಶಾಪ ಹಾಕಿದರು.

Translate »