ಯುವ ಬ್ರಿಗೇಡ್‍ನಿಂದ ಎಲ್ಲೆಂದರಲ್ಲಿ ಬಿದ್ದಿದ್ದ ದೇವರ ಫೋಟೋ ಸಂಗ್ರಹ
ಮೈಸೂರು

ಯುವ ಬ್ರಿಗೇಡ್‍ನಿಂದ ಎಲ್ಲೆಂದರಲ್ಲಿ ಬಿದ್ದಿದ್ದ ದೇವರ ಫೋಟೋ ಸಂಗ್ರಹ

April 5, 2021

ಮೈಸೂರು,ಏ.4(ಎಂಟಿವೈ)-ರಸ್ತೆಬದಿ ಎಲ್ಲೆಂದರಲ್ಲಿ ಬಿಸಾಡಿದ್ದ ದೇವರ ಛಾಯಾಚಿತ್ರಗಳನ್ನು ಭಾನುವಾರ ಯುವ ಬ್ರಿಗೇಡ್ ಕಾರ್ಯಕರ್ತರು ಸಂಗ್ರಹಿಸುವ ಅಭಿಯಾನ ನಡೆಸಿ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ಜನ ಜಾಗೃತಿ ಮೂಡಿಸಿದರು.

ಯುವ ಬ್ರಿಗೇಡ್ ರಾಜ್ಯದಾದ್ಯಂತ ರಸ್ತೆ ಬದಿಯಲ್ಲಿ ಬಿದ್ದಿರುವ ಹಿಂದೂ ದೇವರ ಛಾಯಾಚಿತ್ರ ಸಂಗ್ರಹಿಸುವ ಅಭಿಯಾನವನ್ನು ಭಾನುವಾರ ನಡೆಸಿದ್ದು, ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧೆಡೆ ಬಿದ್ದಿದ್ದ 3 ಸಾವಿರಕ್ಕೂ ಹೆಚ್ಚು ದೇವರ ಫೋಟೊ ಸಂಗ್ರಹಿಸಿ ಗೌರವಯುತವಾಗಿ ವಿಲೇವಾರಿ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಯುಂಟು ಮಾಡುವವರಿಗೆ ತಿಳುವಳಿಕೆ ನೀಡಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಈಜುಕೊಳದ ಮುಂಭಾ ಗದ ಆವರಣವನ್ನು ಕೇಂದ್ರೀಕರಿಸಿಕೊಂಡು ಯುವ ಬ್ರಿಗೇಡ್ ಕಾರ್ಯಕರ್ತರು ಬೆಳಗ್ಗೆ 7 ರಿಂದ ಸಂಜೆವರೆಗೆ ಅಭಿಯಾನ ನಡೆಸಿ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿ, ಅರಳಿ ಕಟ್ಟೆ, ಕಾಂಪೌಂಡ್ ಸೇರಿದಂತೆ ವಿವಿಧೆಡೆ ಬಿದ್ದಿರುವ ಸುಮಾರು 1500ಕ್ಕೂ ದೇವರ ಫೋಟೋಗಳನ್ನು ಸಂಗ್ರಹಿಸಿದರು. ಅಲ್ಲದೆ ಜಿಲ್ಲೆಯ ಟಿ.ನರಸೀಪುರ, ನಂಜನಗೂಡು, ಹುಣಸೂರು, ನಗರ್ಲೆ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಚಿಕ್ಕಬರ್ಗಿ ಸೇರಿದಂತೆ ವಿವಿಧೆಡೆಯೂ ಯುವ ಬ್ರಿಗೇಡ್ ಕಾರ್ಯಕರ್ತರು ಅಭಿಯಾನ ನಡೆಸಿ ತಾಲೂಕುಗಳಲ್ಲೂ 1500ಕ್ಕೂ ಹೆಚ್ಚು ದೇವರ ಫೋಟೋ ಸಂಗ್ರಹಿಸಿದರು. ದಿನವಿಡೀ ನಡೆದ ಅಭಿಯಾನದಲ್ಲಿ 150ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು ಪಾಲ್ಗೊಂಡು 3 ಸಾವಿರಕ್ಕೂ ಹೆಚ್ಚು ಫೋಟೋ ಸಂಗ್ರಹಿಸಿ ಗಮನ ಸೆಳೆದರು.

ಮೈಸೂರು ವಿವಿಧ ರಸ್ತೆ ಬದಿ, ಅರಳಿಕಟ್ಟೆ, ದೇವಾಲಯಗಳ ಕಾಂಪೌಂಡ್, ಶಾಲೆಗಳ ಕಾಂಪೌಂಡ್, ನದಿ ದಡದಲ್ಲಿ ದೇವರ ಫೋಟೋಗಳು ಹೆಚ್ಚಾಗಿರುವುದನ್ನು ಕಂಡು ಯುವ ಬ್ರಿಗೇಡ್ ಕಾರ್ಯಕರ್ತರು ಒಂದೆಡೆ ಸಂಗ್ರಹಿಸಿದರು. ಕಲೆ ಹಾಕಿದ ಫೋಟೋಗಳಲ್ಲಿದ್ದ ಫ್ರೇಮ್ ಹಾಗೂ ಗಾಜನ್ನು ಬೇರ್ಪಡಿಸಿ ದರು. ದೇವರ ಚಿತ್ರವುಳ್ಳ ಹಾಳೆಯನ್ನು ಒಂದೆಡೆ ಹೂತು ಹಾಕಿ ಅದರ ಮೇಲೆ ಅರಳಿಗಿಡ ನೆಡಲಾಯಿತು. ಮೈಸೂರು ನಗರ ಸೇರಿದಂತೆ ವಿವಿಧೆಡೆ ನಡೆದ ಅಭಿಯಾನದಲ್ಲಿ 30ಕ್ಕೂ ಹೆಚ್ಚು ಕಡೆಗಳಲ್ಲಿ ದೇವರ ಚಿತ್ರವುಳ್ಳ ಹಾಳೆಯನ್ನಿಟ್ಟು, ಅವುಗಳ ಮೇಲೆ ಅರಳಿಗಿಡ ನೆಡುವ ಮೂಲಕ ಕಣಕಣದಲ್ಲೂ ಶಿವನಾಮ ಸ್ಮರಣೆಯಾಗಲೀ ಎಂದು ಘೋಷಣೆ ಕೂಗಿದರು.

ಯುವ ಬ್ರಿಗೇಡ್ ಸದಸ್ಯ ಚಂದ್ರಶೇಖರ್ ಮಾತನಾಡಿ, ಮನೆಯಲ್ಲಿ ಪೂಜಿಸಿದ್ದ ದೇವರ ಫೋಟೋಗಳನ್ನು ಕೆಲ ಕಾರಣದಿಂದ ಮನೆ ಯಿಂದ ಹೊರಗೆ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವು- ನೋವು, ಮಡಿ-ಮೈಲಿಗೆ ವಿಚಾರದಿಂದ ಹಾಗೂ ಒಡೆದು ಹೋದ ದೇವರ ಫೋಟೋಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು ಎಂದು ಅರಳಿ ಕಟ್ಟೆ, ಮರದ ಬುಡ ಸೇರಿದಂತೆ ಎಲ್ಲೆಂದರಲ್ಲಿ ಇಟ್ಟು ಹೋಗುತ್ತಿದ್ದಾರೆ. ಇದರಿಂದ ನಾನು ನಮ್ಮ ಆಚಾರ-ವಿಚಾರ, ಧಾರ್ಮಿಕ ನಂಬಿಕೆಗಳಿಗೆ ಅಗೌರವವನ್ನುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸಲು ಇಂದು ಅಭಿಯಾನ ನಡೆಸಿ, ಮೊದಲ ದಿನವೇ 3 ಸಾವಿರ ದೇವರ ಫೋಟೊಗಳನ್ನು ಸಂಗ್ರಹಿಸಿ ಗೌರವಯುತವಾಗಿ ವಿಲೇವಾರಿ ಮಾಡಿದ್ದೇವೆ. ಸಾರ್ವ ಜನಿಕರು ಇನ್ನಾದರೂ ದೇವರ ಫೋಟೊಗಳನ್ನು ಮನೆಯಿಂದ ಹೊರ ತಂದು ಬಿಸಾಡಬಾರದು. ಮನೆಯಿಂದ ಯಾವುದಾದರೂ ಫೋಟೊ ಹೊರಗೆ ಹಾಕುವ ಪರಿಸ್ಥಿತಿ ಎದುರಾದ ಆ ಫೋಟೋಗಳಿಂದ ಗಾಜು ಮತ್ತು ಫ್ರೇಮ್ ತೆಗೆದು ಚಿತ್ರವುಳ್ಳ ಹಾಳೆಯನ್ನು ನೀರಲ್ಲಿ ನೆನೆಸಿ ತುಳಸಿಕಟ್ಟೆಯಲ್ಲಿಟ್ಟು ಮಣ್ಣು ಮುಚ್ಚಬೇಕು. ಇದರಿಂದ ದೇವರ ಚಿತ್ರಕ್ಕೆ ನಾವೇ ಅಪಮಾನ ಮಾಡುವುದನ್ನು ತಡೆಗಟ್ಟಿದಂತಾಗುತ್ತದೆ ಎಂದರು.

ಇಂದು ಸಂಗ್ರಹವಾದ ದೇವರ ಫೋಟೋಗಳಲ್ಲಿ ಗಾಜು ಮತ್ತು ಫೋಟೋ ಫ್ರೇಮ್ ಅನ್ನು ಪುನರ್ ಬಳಕೆ ಮಾಡಲು ಪಾಲಿಕೆ ವಶಕ್ಕೆ ನೀಡಿದ್ದೇವೆ. ಈ ಕಾರ್ಯಾಚರಣೆ ಇನ್ನಷ್ಟು ದಿನ ನಡೆಸಲಾಗುತ್ತದೆ. ಹಲವೆಡೆ ದೇವರ ಫೋಟೊ ಬಿದ್ದಿರುವ ಬಗ್ಗೆ ದೂರು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರವೂ ಅಭಿಯಾನ ನಡೆಸಿ, ನಮ್ಮ ಸಂಸ್ಕøತಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಅಭಿಯಾನದಲ್ಲಿ ಮೈಸೂರಲ್ಲಿ ಯುವ ಬ್ರಿಗೇಡ್‍ನ ಅರುಣ್‍ಕುಮಾರ್, ರುದ್ರೇಶ್, ಮಹೇಂದ್ರ, ಮಂಜು, ಟಿ.ನರಸೀಪುರದಲ್ಲಿ ಗೋಪಾಲ್, ಚೇತನ್, ಹುಣಸೂರಲ್ಲಿ ರಮೇಶ್, ಕೋಟೆ ಯಲ್ಲಿ ಪ್ರಸಾದ್, ನಗರ್ಲೆಯಲ್ಲಿ ಶಿವು, ಶಂಕರ್, ನಂಜನಗೂಡಲ್ಲಿ ಅರ್ಜುನ ನೇತೃತ್ವದಲ್ಲಿ ಹಲವು ಮಂದಿ ದೇವರ ಫೋಟೊ ಸಂಗ್ರಹಿಸುವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Translate »