ಕಾರ್ಮಿಕರ ಕುಂದುಕೊರತೆ ಆಲಿಸಿದ ಹಿರಿಯ ಕಾರ್ಮಿಕ ನಿರೀಕ್ಷಕ
ಕೊಡಗು

ಕಾರ್ಮಿಕರ ಕುಂದುಕೊರತೆ ಆಲಿಸಿದ ಹಿರಿಯ ಕಾರ್ಮಿಕ ನಿರೀಕ್ಷಕ

May 5, 2021

ಮಡಿಕೇರಿ, ಮೇ 4- ಕೋವಿಡ್-19 ರ ಎರಡನೇ ಅಲೆ ಹಿನ್ನೆಲೆ ನಗರ ಮತ್ತು ಗಾಳಿಬೀಡು ಹತ್ತಿರವಿರುವ ಕಾರ್ಮಿಕರ ಶೆಡ್‍ಗಳಿಗೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ.ಯತ್ನಟ್ಟಿ ಮಂಗಳವಾರ ಭೇಟಿ ನೀಡಿ ಮುನ್ನೆಚ್ಚರಿಕೆ ವಹಿಸುವ ಕುರಿತು ಮಾಹಿತಿ ನೀಡಿದರು.

ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಕೆಲಸ ಮಾಡುವಂತೆ ಹಿರಿಯ ಕಾರ್ಮಿಕ ನಿರೀಕ್ಷಕರು ತಿಳಿಸಿದರು.
ವಲಸೆ ಕಾರ್ಮಿಕರ ಮಾಹಿತಿಯನ್ನು ನಮೂನೆ-ಬಿ ಯಲ್ಲಿ ತಯಾರಿಸಿ ಸಲ್ಲಿಸಲು ಗುತ್ತಿಗೆದಾರರಿಗೆ ತಿಳಿಸಲಾಯಿತು. ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿ ಅವರು ಆಗಿಂದಾಗ್ಗೆ ಹೊರಡಿಸುವ ಕೋವಿಡ್-19 ಕ್ಕೆ ಸಂಬಂಧಿಸಿದ ಆದೇಶ, ಸುತ್ತೋಲೆ ಮತ್ತು ಮಾರ್ಗಸೂಚಿ ಪಾಲಿಸುವಂತೆ ಎಂ.ಎಂ.ಯತ್ನಟ್ಟಿ ಸಲಹೆ ಮಾಡಿದರು.
ಹಾಗೆಯೇ ಕಾರ್ಮಿಕರ ಕುಂದು ಕೊರತೆ ವಿಚಾರಿಸಿದರು. ಹಾಗೂ ಗ್ರಾಮ ಪಂಚಾಯತ್ ಗಾಳಿಬೀಡುಗೆ ಭೇಟಿ ನೀಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೋಟಗಳಲ್ಲಿ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದಲ್ಲಿ ತೊಡಗಿರುವ ವಲಸೆ ಕಾರ್ಮಿರ ಮಾಹಿತಿಯನ್ನು ನಮೂನೆ-ಬಿ ಯಲ್ಲಿ ಪಡೆದು ಒದಗಿಸುವಂತೆ ಕೋರಿದರು. ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸುವ ಹಾಗೂ ತೆರಳುವ ಬಗ್ಗೆ ಮಾಹಿತಿ ನೀಡುವಂತೆ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕರು ಕೋರಿದರು.

Translate »