ಮೈಸೂರು, ಮೇ 24(ಆರ್‍ಕೆಬಿ)- ಭಾನುವಾರದ ಲಾಕ್‍ಡೌನ್ ನಡುವೆಯೂ ಪೂರ್ವ ನಿಗದಿತ ಮದುವೆಗಳಿಗೆ ನೀಡ ಲಾಗಿರುವ ಷರತ್ತಿನ ಅವಕಾಶವನ್ನು ಬಳಸಿ ಕೊಂಡು ಮೈಸೂರಿನ ಕೆಲವು ಕಲ್ಯಾಣ ಮಂಟಪಗಳು ಹಾಗೂ ದೇವಾಲಯಗಳಲ್ಲಿ ಹಲವು ಮದುವೆಗಳು ಸರಳವಾಗಿ ನಡೆದವು.
ಮೈಸೂರಿನ ಕುವೆಂಪು ನಗರದ ಚಿಕ್ಕ ಮ್ಮಾನಿಕೇತನ, ಲಷ್ಕರ್ ಮೊಹಲ್ಲಾದ ಗೀತಾ ಮಂದಿರ ಸೇರಿದಂತೆ ಹಲವು ಕಲ್ಯಾಣ ಮಂಟಪಗಳು ಹಾಗೂ ಹಲವು ದೇವಾ ಲಯಗಳಲ್ಲಿ ನಿಗದಿಯಂತೆ ಮದುವೆಗಳು ಸರಳ ರೀತಿಯಲ್ಲಿ ನೆರವೇರಿದವು. ಸ್ಯಾನಿ ಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಕಾರ್ಯದಲ್ಲಿ 50 ಜನರು ಭಾಗವಹಿಸಿದ್ದರು.
ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ ದಲ್ಲಿ ಚಾಮರಾಜನಗರದ ಪುರೋಹಿತ ಎಸ್.ವೆಂಕಟೇಶ್-ಸಾವಿತ್ರಮ್ಮ ದಂಪತಿಯ ಪುತ್ರ ಸಿ.ವಿ.ವಲ್ಲೀಶ್ ಮತ್ತು ಬೆಂಗಳೂರಿನ ಪ್ರಕಾಶ್ ನಗರದ ಶ್ರೀಧರ್-ಅನುಪಮ ದಂಪತಿಯ ಪುತ್ರಿ ಶ್ರೀವಿದ್ಯಾ ವಿವಾಹ ಕೆಲವೇ ನೆಂಟರಿಷ್ಟರ ಸಮ್ಮುಖದಲ್ಲಿ ನೆರವೇರಿತು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ವನ್ನೂ ಕಾಯ್ದುಕೊಂಡಿದ್ದರು. ಛತ್ರದ ಹೊರಗೇ ಸ್ಯಾನಿಟೈಸರ್ ಇಟ್ಟು ಮದುವೆಗೆ ಆಗಮಿಸಿದವರೆಲ್ಲರೂ ತಪ್ಪದೇ ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಲಾಗಿತ್ತು.
`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ವರನ ದೊಡ್ಡಪ್ಪ ಚಾಮರಾಜ ನಗರದ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ಎಸ್.ನಾಗೇಂದ್ರ ಅವರು, 4 ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಯಂತೆಯೇ ವಧು-ವರನ ಕಡೆಯಿಂದ 45 ಮಂದಿ ಪಾಲ್ಗೊಂಡು ವಿವಾಹವನ್ನು ನೆರವೇರಿಸಿದ್ದೇವೆ. ಮದುವೆ ಸರಳವಾ ಗಿಯೇ ನಡೆದಿದೆ. ಇದೇ ರೀತಿ ಎಲ್ಲಾ ಮದುವೆ ಗಳು ಸರಳವಾಗಿ ನಡೆಯುವಂತಾದರೆ ಸಾಲ ಸೋಲ ಮಾಡಿ ಮದುವೆಗಳನ್ನು ಮಾಡುವ ಪೋಷಕರಿಗೆ ಆರ್ಥಿಕ ಹೊರೆಯೂ ತಗ್ಗಿದಂತಾಗುತ್ತದೆ ಎಂದರು. ಲಷ್ಕರ್ ಮೊಹಲ್ಲಾದ ಗೀತಾ ಮಂದಿರದಲ್ಲಿ ವಧು-ವರನ ಕಡೆಯ 50 ಜನರ ಮಧ್ಯೆ ಬೆಂಗಳೂರಿನ ಕಾವ್ಯ ಮತ್ತು ಮೈಸೂರಿನ ತಿಲಕ್‍ನಗರದ ರವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಬಳಸಿ ಎಲ್ಲರೂ ಮಾರ್ಗಸೂಚಿ ಪಾಲಿಸಿದ್ದರು. ಮೈಸೂರಿನ ವೆಂಕಟೇಶ್-ಪುಷ್ಪಾ ದಂಪತಿ ಪುತ್ರ ವಿ.ಕೀರ್ತಿ ಮತ್ತು ಬೆಂಗಳೂರಿನ ರಮೇಶ್-ಶಶಿಕಲಾ ದಂಪತಿ ಪುತ್ರಿ ಬಿ.ಆರ್.ಸ್ಮಿತಾ ಜೋಡಿ ಮತ್ತು ಮೈಸೂರಿನ ಪ್ರದೀಪ್ ಹಾಗೂ ಸಂತೇಬಾಚ ಹಳ್ಳಿಯ ಸುಶ್ಮಿತಾ ಜೋಡಿ ವಿಜಯನಗರದ ಯೋಗಾನರಸಿಂಹ ಸ್ವಾಮಿ ದೇವಸ್ಥಾನದದಲ್ಲಿ ವಿವಾಹವಾದರು. ಕೇವಲ 40 ಮಂದಿಯಷ್ಟೇ ಭಾಗವಹಿಸಿ ವಧು-ವರರಿಗೆ ಆಶೀರ್ವದಿಸಿದರು. ಇಲ್ಲಿಯೂ ಸರ್ಕಾರದ ಮಾರ್ಗಸೂಚಿ ಗಳನ್ನು ಪಾಲಿಸಲಾಗಿತ್ತು. ನಗರದಲ್ಲಿನ ವಿವಿಧ ದೇವಾಲಯಗಳಲ್ಲೂ ಇದೇ ಬಗೆಯಲ್ಲಿ ಹಲವು ಮದುವೆಗಳು ಸರಳ ರೀತಿ ನೆರವೇರಿವೆ. ಕೆಲವರು ಮನೆಯಲ್ಲಿಯೇ ಸರಳ ರೀತಿಯಲ್ಲಿ ವಿವಾಹ ಕಾರ್ಯ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.