ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಅಂತರ ಕಾಯ್ದುಕೊಳ್ಳಲು ಚೌಕಾಕೃತಿ ರಚನೆ
ಮೈಸೂರು

ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಅಂತರ ಕಾಯ್ದುಕೊಳ್ಳಲು ಚೌಕಾಕೃತಿ ರಚನೆ

May 4, 2020

ಮೈಸೂರು, ಮೇ 3(ಪಿಎಂ)- ಸಾರಿಗೆ ಸೇವೆಗೆ ಅನುಮತಿ ಲಭ್ಯವಾದರೆ ಕೊರೊನಾ ಹಿನ್ನೆಲೆಯಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಅಗತ್ಯ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹೀಗಾಗಿಯೇ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡು ಪ್ರಯಾಣಿಕರು ಸಾಲಾಗಿ ನಿಂತು ಬಸ್‍ನೊಳಕ್ಕೆ ಪ್ರವೇಶಿಸಲು ಅನುಕೂಲ ವಾಗುವಂತೆ ಹಳದಿ ಬಣ್ಣದಲ್ಲಿ 5 ಅಡಿ ಅಂತರಕ್ಕೊಂದು ಚೌಕಾಕಾರ ರಚಿಸಲಾಗಿದೆ.

ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಿಗೆ ಪ್ರಯಾಣಿಸಲು ಇಲ್ಲಿಂದ ಬಸ್ ಸೌಲಭ್ಯ ವಿದ್ದು, ನೆರೆ ರಾಜ್ಯದ ಜನತೆ ಈ ಸೌಲಭ್ಯ ಬಳಸಿಕೊಳ್ಳುತ್ತಿದ್ದರು. ರಾಜ್ಯದ ವಿವಿಧ ನಗರ ಗಳು, ಸಮೀಪದ ಗ್ರಾಮಗಳಿಗೆ ಇಲ್ಲಿಂದ ಸಾರಿಗೆ ಸೌಲಭ್ಯವಿದೆ. ಬೆಂಗಳೂರಿಗೆ ಪ್ರಯಾ ಣಿಸಲು ನಾನ್ ಸ್ಟಾಪ್ (ತಡೆ ರಹಿತ) ಬಸ್, ಸೆಮಿ ಡಿಲಕ್ಸ್ ಹಾಗೂ ಡಿಲಕ್ಸ್ ಬಸ್ ಸೇವೆಯೂ ಇದೆ. ಸದ್ಯ ಲಾಕ್‍ಡೌನ್ ಕಾರಣ ಎಲ್ಲವೂ ಸ್ಥಗಿತಗೊಂಡಿದೆ.

ಲಾಕ್‍ಡೌನ್‍ನಿಂದ ಕೆಎಸ್‍ಆರ್‍ಟಿಸಿಯ ನಾಲ್ಕು ನಿಗಮಗಳೂ ಭಾರೀ ನಷ್ಟ ಅನು ಭವಿಸುವಂತಾಗಿವೆÉ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಭಾಯಿಸಲು ನಾಲ್ಕೂ ನಿಗಮ ಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಚರ್ಚಿಸಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಕೆಎಸ್‍ಆರ್‍ಟಿಸಿ ಮೈಸೂರು ನಗರ ಸಾರಿಗೆಯ ವಿಭಾಗೀಯ ನಿಯಂತ್ರಣಾ ಧಿಕಾರಿ ಎಸ್.ಪಿ.ನಾಗರಾಜು, ಮೈಸೂರು ನಗರ ಬಸ್ ನಿಲ್ದಾಣದಲ್ಲೂ ಚೌಕಾಕಾರ ರಚಿಸಲು ಶೀಘ್ರದಲ್ಲಿ ಕ್ರಮ ವಹಿಸಲಾಗು ವುದು. ಇಲ್ಲಿನ ಬಸ್ ಸಂಚಾರ ವ್ಯವಸ್ಥೆ ಯಿಂದ ದಿನಕ್ಕೆ 32 ಲಕ್ಷ ರೂ. ಆದಾಯ ಬರುತ್ತಿತ್ತು. ಲಾಕ್‍ಡೌನ್‍ನಿಂದ ಆದಾಯ ವಿಲ್ಲದೆ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದರು

Translate »