ಊರಿಗೆ ಕಳುಹಿಸಿಕೊಡಿ; ಪೊಲೀಸ್ ಆಯುಕ್ತರ ಕಚೇರಿ ಬಳಿ ವಲಸೆ ಕಾರ್ಮಿಕರ ಅಳಲು
ಮೈಸೂರು

ಊರಿಗೆ ಕಳುಹಿಸಿಕೊಡಿ; ಪೊಲೀಸ್ ಆಯುಕ್ತರ ಕಚೇರಿ ಬಳಿ ವಲಸೆ ಕಾರ್ಮಿಕರ ಅಳಲು

May 4, 2020

ಮೈಸೂರು,ಮೇ 3(ಎಂಟಿವೈ)- ಲಾಕ್ ಡೌನ್‍ನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ರುವ ಅನ್ಯ ರಾಜ್ಯದ ನೂರಾರು ವಲಸೆ ಕಾರ್ಮಿಕರು `ನಮ್ಮನ್ನು ಊರಿಗೆ ಕಳುಹಿಸಿ ಕೊಡಿ’ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಭಾನುವಾರ ಪ್ರದರ್ಶನ ನಡೆಸಿದರು.

ಎರಡನೇ ಹಂತದ ಲಾಕ್‍ಡೌನ್ ಅವಧಿ ಪೂರ್ಣಗೊಂಡ ಬಳಿಕ ಊರಿಗೆ ವಾಪ ಸಾಗಬಹುದೆಂದು ಭಾವಿಸಿದ್ದ ಮೈಸೂರಿನ ವಿವಿಧೆಡೆ ನೆಲೆಸಿರುವ ಕಟ್ಟಡ ಕಾರ್ಮಿ ಕರು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉತ್ತರ ಪ್ರದೇಶ, ಒಡಿಸ್ಸಾ, ಬಿಹಾರ, ಮಧ್ಯಪ್ರದೇಶ ಮೊದಲಾದÀ ರಾಜ್ಯಗಳ ನೂರಾರು ವಲಸೆ ಕಾರ್ಮಿಕರು ಇಂದು ಬೆಳಿಗ್ಗೆ ನಜರ್‍ಬಾದ್‍ನಲ್ಲಿರುವ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದಾವಿಸಿ ಅಳಲು ತೋಡಿ ಕೊಂಡರು. ಲಾಕ್‍ಡೌನ್ 3ನೇ ಅವಧಿ ಮುಗಿವವರೆಗೆ ವಾಹನ ವ್ಯವಸ್ಥೆ ಇಲ್ಲ. ಈಗಿರುವಲ್ಲೇ ಇರಿ ಎಂದು ಪೊಲೀಸರು ಸಲಹೆ ನೀಡಿದರು. ಕಾರ್ಮಿಕರು ಮಾತ್ರ ಪಟ್ಟು ಹಿಡಿದಿದ್ದರು.

ವೆಬ್‍ಸೈಟ್‍ಗೆ ಮಾಹಿತಿ: ಈ ವೇಳೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಾಲ್ಕು ಕೌಂಟರ್ ನಿರ್ಮಿಸಿ, ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ವಲಸೆ ಕಾರ್ಮಿ ಕರ ಮಾಹಿತಿ ಸಂಗ್ರಹಿಸಲಾಯಿತು. ಬೇರೆ ರಾಜ್ಯಕ್ಕೆ ಹೋಗಬಯಸುವ ವಲಸೆ ಕಾರ್ಮಿಕರ ಮಾಹಿತಿ ವೆಬ್‍ಸೈಟ್‍ನಲ್ಲಿ ನಮೂದಿಸಿ ಸಂಬಂಧಪಟ್ಟ ರಾಜ್ಯಗಳ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುತ್ತದೆ. ಆ ರಾಜ್ಯಗಳ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ ಬಳಿಕವಷ್ಟೇ ವಲಸೆ ಕಾರ್ಮಿ ಕರನ್ನು ಕಳುಹಿಸಲಾಗುತ್ತದೆ.

ಯಾವ ಯಾವ ಮಾಹಿತಿ: ಕಾರ್ಮಿಕರ ವಿಳಾಸ, ಯಾವ ರಾಜ್ಯ, ಯಾವ ಜಿಲ್ಲೆ, ಆಧಾರ್, ಓಟರ್ ಐಡಿ ಸಂಖ್ಯೆ ಸೇರಿದಂತೆ ಕೆಲ ಮಾಹಿತಿ ಕಲೆ ಹಾಕಲಾಗುತ್ತದೆ. ಸ್ವಂತ ವಾಹನವಿದ್ದರೆ ಊರಿಗೆ ತೆರಳಲು ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ವಾಹನ ಇಲ್ಲದ ನೌಕರರಿಗೆ ವಾಹನ ಸೌಲಭ್ಯ ಮಾಡಿದ ನಂತರ ಅವರ ಮೊಬೈಲ್‍ಗೆ ಸಂದೇಶ ಕಳು ಹಿಸುವ ಮೂಲಕ ಮಾಹಿತಿ ನೀಡಲಾಗುತ್ತದೆ.

ಪಾಸ್‍ಗೆ ಮುಗಿಬಿದ್ದ ಜನ: ಬೇರೆ ಜಿಲ್ಲೆ ಗಳಿಂದ ಮೈಸೂರಿಗೆ ಬಂದು ಸಿಲುಕಿಬಿದ್ದಿ ರುವವರು, ಬೇರೆ ಜಿಲ್ಲೆಗೆ ತುರ್ತು ಕೆಲಸದ ನಿಮಿತ್ತ ಹೋಗಲು ಬಯಸುವ 2 ಸಾವಿರ ಮಂದಿ ಆನ್‍ಲೈನ್‍ನಲ್ಲಿ ಪಾಸ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿದಿನ ಪಾಸ್ ಪಡೆಯಲು ಪೊಲೀಸ್ ಆಯುಕ್ತರ ಕಚೇರಿಗೆ ಬಂದು ದುಂಬಾಲು ಬೀಳುತ್ತಿದ್ದಾರೆ.

Translate »