ಜಯಂತಿ ಸರಳ ಆಚರಿಸಿ ಬಡ  ಕಲಾವಿದರಿಗೆ ನೆರವಾಗಲು ಮನವಿ
ಮೈಸೂರು

ಜಯಂತಿ ಸರಳ ಆಚರಿಸಿ ಬಡ  ಕಲಾವಿದರಿಗೆ ನೆರವಾಗಲು ಮನವಿ

May 4, 2020

ಮೈಸೂರು,ಮೇ 3-ಕೊರೊನಾದಿಂದ ದೇಶವೇ ತತ್ತರಿಸಿದ್ದು, ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಜಯಂತಿಗಳನ್ನು ಸರಳವಾಗಿ ಆಚರಿಸಿ, ಅದೇ ಹಣದಿಂದ ಕಲಾವಿದರಿಗೆ ಮತ್ತು ಥಿಯೇ ಟರ್ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಡನೌಕರರಿಗೆ ತಲಾ 10 ಸಾವಿರ ರೂ. ನೀಡುವಂತೆ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಒತ್ತಾ ಯಿಸಿದ್ದಾರೆ. 1 ವರ್ಷದಲ್ಲಿ 20 ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಕನಿಷ್ಠ 3.50 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ಸರಳವಾಗಿ ಆಚರಿಸಿ ಹಣ ಉಳಿಸಿದರೆ 150ರಿಂದ 200 ಬಡ ಕಲಾವಿದರಿಗೆ ಹಂಚಬಹುದು. ಜಿಲ್ಲಾಧಿಕಾರಿ ಸೂಕ್ತ ತೀರ್ಮಾನ ತೆಗೆದು ಕೊಂಡು ಹಸಿವಿನಿಂದ ಬಳಲುವ ಕಲಾವಿದರ ನೋವಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.

 

 

Translate »