ನಿತ್ಯೋತ್ಸವ ಕವಿ ನಿಧನಕ್ಕೆ ಶಾರದಾದೇವಿ ಉದ್ಯಾನದಲ್ಲಿ ಸಂತಾಪ
ಮೈಸೂರು

ನಿತ್ಯೋತ್ಸವ ಕವಿ ನಿಧನಕ್ಕೆ ಶಾರದಾದೇವಿ ಉದ್ಯಾನದಲ್ಲಿ ಸಂತಾಪ

May 4, 2020

ಮೈಸೂರು, ಮೇ 3(ಆರ್‍ಕೆಬಿ)- ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ ಮದ್ ಅವರ ನಿಧನಕ್ಕೆ ಬಿಜೆಪಿ ಚಾಮುಂ ಡೇಶ್ವರಿ ನಗರ ಮಂಡಲ ಹಾಗೂ ಶಾರದಾದೇವಿ ನಗರ ಹಿತರಕ್ಷಣಾ ವೇದಿಕೆ ಯಿಂದ ಶಾರದಾದೇವಿ ವೃತ್ತದಲ್ಲಿರುವ ಶಾರದಾದೇವಿ ಉದ್ಯಾನವನದಲ್ಲಿ ನಿಸಾರ್ ಅಹಮದ್ ಅವರ ಭಾವಚಿತ್ರ ಹಿಡಿದು ಸಂತಾಪ ಸೂಚಿಸಲಾಯಿತು.

ನಿತ್ಯೋತ್ಸವ ಮೂಲಕ ಕನ್ನಡಿಗರ ಮನಸೆಳೆದ ಕೆ.ಎಸ್.ನಿಸಾರ್ ಅಹಮದ್ ಕೋಮು, ಜಾತಿ, ಗಡಿಗಳಾಚೆ ನಿಂತ ಅತ್ಯಂತ ಶ್ರೇಷ್ಠ ಕವಿ. ಕನ್ನಡ ಸಾರಸ್ವತ ಲೋಕದ ದಿಗ್ಗಜ. ಕನ್ನಡ ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷರಾಗಿ, ಮೈಸೂರು ದಸರಾ ಉದ್ಘಾಟಕರಾಗಿ ಅವರ ನುಡಿ, ನಡೆ ಎಲ್ಲ ರನ್ನು ಆಕರ್ಷಿಸಿತ್ತು. ಮಹಾನ್ ಕವಿ ಯನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಈಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಅತೀವ ಶೋಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಚಾಮುಂ ಡೇಶ್ವರಿ ಕ್ಷೇತ್ರ ಅಧ್ಯಕ್ಷ ಬಿ.ಎಂ.ರಘು, ಪ್ರಧಾನ ಕಾರ್ಯದರ್ಶಿ ಎಚ್.ಜಿ.ರಾಜಮಣಿ, ಮುಖಂಡರಾದ ರೇವಣ್ಣ, ಲಕ್ಷ್ಮಿದೇವಿ, ಗಿರೀಶ್ ದಟ್ಟಗಳ್ಳಿ, ವಿಜಯ ಮಂಜುನಾಥ್, ಬಿ.ಸಿ.ಶಶಿಕಾಂತ್, ನಾಗರಾಜ್ ಜನ್ನು, ಅಧ್ಯಕ್ಷೆ ಶುಭಶ್ರೀ, ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಚಪ್ಪಾಜಿ, ಅಭಿಷೇಕ್‍ಗೌಡ, ರಮಾ ಬಾಯಿ, ಪೂರ್ಣಿಮಾ ಇನ್ನಿತರರಿದ್ದರು.

Translate »