ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶರ ತಂಡ
ಕೊಡಗು

ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶರ ತಂಡ

April 20, 2020

ಸಿದ್ದಾಪುರ, ಏ.19- ಕೊರೊನಾ ವೈರಸ್ ತಡೆ ಜಾಗೃತಿಗೆ ವಿಧಿಸಿರುವ ಲಾಕ್‍ಡೌನ್ ಸಮಸ್ಯೆಯಿಂದ ಸಿಲುಕಿ ಕೊಂಡಿರುವ ಕಾರ್ಮಿಕರನ್ನು ಭೇಟಿ ಮಾಡಿದ ನ್ಯಾಯಾಧೀಶರ ತಂಡ ಅವರ ಸಮಸ್ಯೆಗಳನ್ನು ಆಲಿಸಿದರು.

ಸೋಮವಾರಪೇಟೆ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯ ಅಭ್ಯತ್ ಮಂಗಲ ಗ್ರಾಮದ ಕಾಫಿ ತೋಟದಲ್ಲಿರುವ ಹೊರ ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳನ್ನು ಸೋಮವಾರ ಪೇಟೆ ನ್ಯಾಯಾಧೀಶರ ತಂಡ ಆಲಿಸಿತು. ಸೋಮವಾರಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್ ದಿಂಡಿಲ ಕೊಪ್ಪ, ಪ್ರಧಾನ ನ್ಯಾಯಾಧೀಶರಾದ ಪ್ರತಿಭಾ ಹಾಗೂ ಕುಶಾಲನಗರ ಹಿರಿಯ ಸಿವಿಲ್ ನ್ಯಾಯಾ ಧೀಶ ಸಂದೀಪ್ ಎಸ್.ರೆಡ್ಡಿ ಹಾಗೂ ತಹಶೀ ಲ್ದಾರ್ ಗೋವಿಂದರಾಜ ಭೇಟಿ ಮಾಡಿದರು.

ತಿಂಗಳ ಹಿಂದೆ ಗ್ರಾಮದ ಗ್ರೀನ್‍ಫೀಲ್ಡ್ ತೋಟಕ್ಕೆ ಕೊಳ್ಳೇಗಾಲ ತಾಲೂಕಿನಿಂದ 40 ಕ್ಕೂ ಹೆಚ್ಚು ಕಾರ್ಮಿಕರು ಕೂಲಿ ಕೆಲಸಕ್ಕೆಂದು ಆಗಮಿಸಿದ್ದರು. ಕೆಲಸ ಮುಗಿದಿದ್ದರೂ ಊರಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಲಾಕ್ಡೌನ್ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದರು.

ಪುಟ್ಟ ಮಕ್ಕಳನ್ನು ಊರಲ್ಲೇ ಬಿಟ್ಟು ಕೂಲಿಗಾಗಿ ಬಂದಿರುವುದರಿಂದ ಊರಿಗೆ ತೆರಳಲು ಅವಕಾಶ ಕಲ್ಪಿಸುವಂತೆ ನ್ಯಾಯಾ ಧೀಶರ ಬಳಿ ಮಹಿಳಾ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು. ಕೊರೊನಾ ಮಹಾಮಾರಿ ಒಬ್ಬರಿಂದ ಒಬ್ಬರಿಗೆ ಹರಡು ತ್ತಿರುವುದರಿಂದ ಮೇ 3 ರವರೆಗೆ ತೋಟದ ಮನೆಗಳಲ್ಲೇ ಇರಬೇಕಾಗಿದೆ. ಎಲ್ಲರಿಗೂ ಆಹಾರದ ವ್ಯವಸ್ಥೆ ಮಾಡ ಲಾಗುವುದು. ಕೊಳ್ಳೇಗಾಲದಲ್ಲಿರುವ ಕಾರ್ಮಿಕರ ಮಕ್ಕಳು ಸೇರಿದಂತೆ ಮನೆಯ ವರಿಗೆ ಸಮಸ್ಯೆಗಳಿದ್ದರೆ ಆ ಭಾಗದ ಅಧಿಕಾರಿ ಗಳ ಮೂಲಕ ಬಗೆಹರಿಸಲಾಗು ವುದು. ಲಾಕ್ ಡೌನ್ ನಂತರ ಊರಿಗೆ ತೆರಳಲು ವ್ಯವಸ್ಥೆ ಮಾಡುವ ಬಗ್ಗೆ ಕಾರ್ಮಿಕರಿಗೆ ನ್ಯಾಯಾ ಧೀಶರ ತಂಡ ಧೈರ್ಯ ತುಂಬಿದರು.

ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸು ವುದಾಗಿ ತಹಶೀಲ್ದಾರ್ ಗೋವಿಂದರಾಜು ಭರವಸೆ ನೀಡಿದರು. ಸೋಮವಾರಪೇಟೆ ತಾಲೂಕು ಹಿರಿಯ ಕಾರ್ಮಿಕ ನಿರ್ದೇಶಕಿ ಲೀನಾ, ಗ್ರಾಮ ಲೆಕ್ಕಿಗ ಸಂತೋಷ್, ಪಿಡಿಓ ಅನಿಲ್ ಕುಮಾರ್ ಸೇರಿದಂತೆ ಅಧಿಕಾರಿಗಳ ಹಾಜರಿದ್ದರು.

Translate »