ವಿವೇಕ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ವಿವೇಕ ಯುವ ಬಳಗದಿಂದ ಪಂಜಿನ ಮೆರವಣಿಗೆ
ಮೈಸೂರು

ವಿವೇಕ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ವಿವೇಕ ಯುವ ಬಳಗದಿಂದ ಪಂಜಿನ ಮೆರವಣಿಗೆ

October 6, 2021

ಮೈಸೂರು, ಅ.5(ವೈಡಿಎಸ್)- ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿ ವಿವೇಕ ಯುವ ಬಳಗದ ವತಿಯಿಂದ ಮಂಗಳವಾರ ಸಂಜೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಮಂಗಳವಾರ ಸಂಜೆ ಮೈಸೂರಿನ ಕೃಷ್ಣವಿಲಾಸ ರಸ್ತೆಯ ನಿರಂ ಜನ ಮಠದ ಬಳಿ ಜಮಾವಣೆಗೊಂಡ ನೂರಾರು ಮಂದಿ ನಾಗರಿಕರು, ವಿದ್ಯಾರ್ಥಿಗಳು ಕೈಯಲ್ಲಿ ಪಂಜು ಹಿಡಿದು ವಿವೇಕಾ ಸ್ಮಾರಕ ಆಗಲೇ ಬೇಕು, ಸ್ಮಾರಕ ನಮ್ಮದು ಮತ್ತಿತರೆ ಘೋಷಣೆಗಳನ್ನು ಕೂಗುತ್ತ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ, ವಿವೇಕಾ ಸ್ಮಾರಕ ಮೈಸೂ ರಿನ ಕೀರ್ತಿ ಕಳಶಕ್ಕೆ ಅಡ್ಡಗಾಲು ಹಾಕಬೇಡಿ, ರಾಷ್ಟ್ರವನ್ನೆಲ್ಲಾ ಒಂದುಗೂಡಿ ಸಲು ಶ್ರಮಪಟ್ಟವರು ವಿವೇಕಾನಂದರು, ಅವರ ಸ್ಮಾರಕ ಆಗಲೇ ಬೇಕು ಮತ್ತಿತರೆ ಘೋಷಣೆಯುಳ್ಳ ನಾಮ ಫಲಕ ಹಿಡಿದು ಹೊರಟ ಮೆರವಣಿಗೆಯು ನಾರಾಯಣಶಾಸ್ತ್ರಿ ರಸ್ತೆ ಮೂಲಕ ಸದ್ವಿದ್ಯಾ ಕಾಲೇಜು ವೃತ್ತದವರೆಗೆ ಸಾಗಿ ಅಲ್ಲಿಂದ ಅದೇ ರಸ್ತೆಯಲ್ಲಿ ವಾಪಸ್ ಹೊರಟು ಕೃಷ್ಣವಿಲಾಸ ರಸ್ತೆಯಲ್ಲಿ ಸಾಗಿ ಲೋಕಾಯುಕ್ತ ಕಚೇರಿ ಬಳಿಯಿಂದ ವಾಪಸ್ ತೆರಳಿ ನಾರಾಯಣಶಾಸ್ತ್ರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ನಗರಪಾಲಿಕೆ ಸದಸ್ಯ ನಾಗಭೂಷಣ್ ಮಾತನಾಡಿ, ಈ ಜಾಗ ರಾಮಕೃಷ್ಣ ಆಶ್ರಮಕ್ಕೆ ಸೇರಿದೆ ಎಂಬ ಪುರಾವೆಗಳನ್ನು ನ್ಯಾಯಾ ಲಯಕ್ಕೆ ನೀಡಿದ್ದು, ಹೈಕೋರ್ಟ್‍ನ 2 ಪೀಠದಲ್ಲೂ ತೀರ್ಪು ಆಶ್ರಮದ ಪರವಾಗಿಯೇ ಆಗಿದೆ. ಆದರೆ ಕೆಲವೇ ಜನರು ವಿವೇಕ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದಾಖಲೆ ಇದ್ದರೆ ತಂದು ತೋರಿಸಲಿ. ಬಿಟ್ಟುಕೊಡುತ್ತೇವೆ. ಅದು ಬಿಟ್ಟು ಯಾವುದೇ ದಾಖಲಾತಿ ಗಳಿಲ್ಲದೆ ಹೀಗೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 2001ರಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಮಾಡಿದಾಗ ಏನು ಮಾಡುತ್ತಿದ್ದರು. ದಾಖಲಾತಿಗಳಿದ್ದರೆ ತರಬೇಕಿತ್ತು. ನಾವೇ ನಗರಪಾಲಿಕೆಯಿಂದ ಹಸ್ತಾಂತರ ಮಾಡಿಸುತ್ತಿದ್ದೆವು. ಅದು ಬಿಟ್ಟು ದಬ್ಬಾಳಿಕೆ ಮಾಡುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

Translate »