ಮೈಸೂರು,ಅ.4(ಪಿಎಂ)-ಪ್ರಸ್ತುತ ಶೈಕ್ಷ ಣಿಕ ವರ್ಷದ ಬಸ್ ಪಾಸ್ ಅನ್ನು ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಸ್ತುತ ಶೈಕ್ಷಣಿಕ ವರ್ಷದ ಬಸ್ ಪಾಸ್ ಅನ್ನು ಉಚಿತವಾಗಿ ನೀಡಬೇಕು. ಅಲ್ಲಿಯವರೆಗೆ ಹಿಂದಿನ ವರ್ಷದ ಪಾಸ್ ಅಥವಾ ಶಾಲಾ-ಕಾಲೇ ಜಿನ ಗುರುತಿನ ಚೀಟಿಯೊಂದಿಗೆ ವಿದ್ಯಾರ್ಥಿ ಗಳಿಗೆ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಹಿಂದಿನ ವರ್ಷದ ಬಸ್ ಪಾಸ್ ಅವಧಿ ಮುಗಿದಿದೆ. ಈಗ ವಿದ್ಯಾರ್ಥಿಗಳು ತಮ್ಮ ಹಳ್ಳಿ-ಊರುಗಳಿಂದ ಶಾಲಾ-ಕಾಲೇಜಿಗೆ ಬರಬೇಕಾದರೆ ಬಸ್ ಟಿಕೆಟ್‍ನ ದರ ಪಾವ ತಿಸಿ ಓಡಾಡಬೇಕಾದ ಪರಿಸ್ಥಿತಿ ಇದೆ. ಬಹ ಳಷ್ಟು ದೂರದಿಂದ ಬರುವ ವಿದ್ಯಾರ್ಥಿ ಗಳಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಉಚಿತ ಬಸ್ ಪಾಸ್ ನೀಡ ಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷದ ವಾರ್ಷಿಕ ಬಸ್‍ಪಾಸ್ ಸಂಪೂರ್ಣವಾಗಿ ಉಪಯೋಗವಾಗಿಲ್ಲ. ಲಾಕ್‍ಡೌನ್ ಪರಿಣಾಮ ಶಾಲಾ-ಕಾಲೇ ಜಿಗೆ ರಜೆ ಇತ್ತು. ಈ ಕಾರಣ ಬಸ್‍ಪಾಸ್ ಅರ್ಧ ವರ್ಷಕ್ಕೂ ಬಳಕೆಯಾಗಿಲ್ಲ. ಈಗ ಮತ್ತೊಮ್ಮೆ ಬಸ್‍ಪಾಸ್‍ನ ಸಂಪೂರ್ಣ ವೆಚ್ಚ ಭರಿಸಿ ಪಡೆಯುವುದು ಅತ್ಯಂತ ಹೊರೆಯಾಗಲಿದೆ. ಹಿಂದಿನ ವರ್ಷದ ಪಾಸ್ ಅನ್ನೇ ಈ ಶೈಕ್ಷಣಿಕ ವರ್ಷಪೂರ್ತಿ ಬಳಕೆ ಮಾಡಲು ಇಲಾಖೆಯಿಂದ ಅನು ಮತಿ ನೀಡಲೂ ಅವಕಾಶವಿದೆ. ಈ ನಿಟ್ಟಿ ನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರ ಹಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಸುಭಾಷ್, ಉಪಾಧ್ಯಕ್ಷೆ ಆಸಿಯಾ, ವಿದ್ಯಾರ್ಥಿಗಳಾದ ಚಂದನ್, ನವೀನ್, ಅಭಿಷೇಕ್, ಮಂಜು, ತನ್ವೀರ್, ವಿನಯ್, ಪವನ್, ಯಶವಂತ್, ಗಣೇಶ್, ತೇಜಸ್ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.