ಕಾರಿನ ಮೇಲೆ ಬಿದ್ದ ಮರದ ಕೊಂಬೆ
ಮೈಸೂರು

ಕಾರಿನ ಮೇಲೆ ಬಿದ್ದ ಮರದ ಕೊಂಬೆ

November 9, 2020

ಕಾರಿಗೆ ಹಾನಿ; ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರು
ಮೈಸೂರು, ನ.8(ಆರ್‍ಕೆಬಿ)- ಮರದ ದೊಡ್ಡ ಕೊಂಬೆಯೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು, ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿ ನಡೆದಿದೆ.

ಮೈಸೂರಿನ ವಿಜಯ ನಗರದ ತಿಲಕ್‍ರಾಜ್ ತನ್ನ ಸ್ನೇಹಿತನನ್ನು ಬೋಗಾದಿಗೆ ಬಿಟ್ಟು ಬರಲು ತಮ್ಮ ಸ್ವಿಫ್ಟ್ ಕಾರಿನಲ್ಲಿ ವಾಲ್ಮೀಕಿ ರಸ್ತೆ ಯಲ್ಲಿ ಆದಿಪಂಪ ರಸ್ತೆ ಕೂಡುವ ಜಂಕ್ಷನ್‍ನಲ್ಲಿ ತೆರಳುತ್ತಿದ್ದಾಗ ಬೃಹತ್ ಮರದ ಕೊಂಬೆ ಯೊಂದು ಮುರಿದು ಕಾರಿನ ಬಾನೆಟ್ ಬಿತ್ತು. ಕಾರು ಮುಂದೆ ಹೋಗಿ ನಿಲ್ಲುವಷ್ಟ ರಲ್ಲಿ ಕಾರಿನ ಹಿಂದೆ ಬೃಹತ್ ಗಾತ್ರದ ಕೊಂಬೆಯೂ ಮುರಿದು ಬಿತ್ತು. ಕೆಲವೇ ಕ್ಷಣದಲ್ಲಿ ಕಾರು ಮುಂದೆ ಚಲಿಸಿದ್ದರಿಂದ ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ತಿಲಕ್‍ರಾಜ್ ಮತ್ತು ರೂಪೇಶ್ ಪ್ರಾಣಾಪಾಯದಿಂದ ಪಾರಾದರು.

ಕಾರಿನ ಬಾನೆಟ್ ಮತ್ತು ಮುಂಬದಿ ಗ್ಲಾಸ್ ಸಂಪೂರ್ಣ ಜಖಂ ಆಗಿದ್ದು, ಸುಮಾರು ಮೂರು ಲಕ್ಷ ರೂ.ಗಳಷ್ಟು ಹಾನಿ ಸಂಭವಿಸಿದೆ ಎಂದು ಕಾರಿನ ಮಾಲೀಕ ತಿಳಿಸಿದ್ದಾರೆ. ಕಾರಿನ ಮೇಲೆ ಮರದ ಕೊಂಬೆ ಬಿದ್ದಿದ್ದರೆ ಇಬ್ಬರಿಗೂ ಪ್ರಾಣಾಪಾಯವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಕ್ಷಣ ಜಮಾಯಿಸಿದ ಜನರು, ರಸ್ತೆಯಿಂದ ಬೃಹತ್ ಕೊಂಬೆಯನ್ನು ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು. ಘಟನೆ ಕುರಿತು ಕಾರಿನ ಮಾಲೀಕರು ವಿ.ವಿ.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

 

Translate »