ಕೊಳ್ಳೇಗಾಲ ನಗರಸಭೆಯ ಹಿಂದಿನ ಪೌರಾಯುಕ್ತ ನಾಗಶೆಟ್ಟಿ ಅಮಾನತು
ಮೈಸೂರು

ಕೊಳ್ಳೇಗಾಲ ನಗರಸಭೆಯ ಹಿಂದಿನ ಪೌರಾಯುಕ್ತ ನಾಗಶೆಟ್ಟಿ ಅಮಾನತು

November 9, 2020

ಕೊಳ್ಳೇಗಾಲ, ನ.8(ನಾಗೇಂದ್ರ)-ವರ್ಗಾವಣೆಯಾದ ನಂತರ ಡಿಜಿಟಲ್ ಕೀ ಬಳಸಿಕೊಂಡು ಅಕ್ರಮ ವಾಗಿ ಏಕ ನಿವೇಶನವನ್ನು ಬಹುನಿವೇಶನಗಳ ನ್ನಾಗಿ ವಿಂಗಡಿಸಿ ಇ-ಸ್ವತ್ತುಗಳನ್ನು ನೀಡಿದ ಆರೋಪದ ಮೇರೆಗೆ ಕೊಳ್ಳೇಗಾಲ ನಗರ ಸಭೆಯ ಹಿಂದಿನ ಪೌರಾಯುಕ್ತ ನಾಗಶೆಟ್ಟಿ ಅವರನ್ನು ಅಮಾನತುಪಡಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ.

ಕೊಳ್ಳೇಗಾಲ ನಗರ ಸಭೆಯ ವಾರ್ಡ್ ನಂ.18 ರಲ್ಲಿರುವ ಸರ್ವೆ ನಂ.739/1 ಮತ್ತು 740ಕ್ಕೆ ಸೇರಿದ 2.63 ಸೆಂಟ್ ಭೂಮಿಯನ್ನು 1980ರ ಮಾರ್ಚ್ 20ರಂದು ಅಂದಿನ ತಹಸೀಲ್ದಾರರು ಚಿತ್ರಮಂದಿರ ಮತ್ತು ಡೈರಿ ಫಾರಂ ಉದ್ದೇಶಕ್ಕೆ ಅನ್ಯಕ್ರಾಂತ ಮಂಜೂರು ಮಾಡಿದ್ದರು. ಈ ಭೂಮಿಯು ಕೈಗಾರಿಕಾ ವಲಯದಿಂದ ಭೂ ಉಪ ಯೋಗಕ್ಕೆ ಸಕ್ರಮ ಪ್ರಾಧಿಕಾರದಿಂದ ಭೂ ಬದಲಾವಣೆ ಯಾಗಿಲ್ಲ. ಆದರೆ ನಾಗಶೆಟ್ಟಿಯವರು ಪ್ರತ್ಯೇಕ ಕಡತ ತೆರೆದು ತಾವು ಕೊಳ್ಳೇಗಾಲದಿಂದ ವರ್ಗಾವಣೆಯಾದ ಬಳಿಕ ಒಂದೇ ನಿವೇಶನವನ್ನು 8 ನಿವೇಶನಗಳನ್ನಾಗಿ ವಿಂಗಡಿಸಿ ಜುಲೈ 6ರಂದು ಮಧ್ಯಾಹ್ನ 2 ಗಂಟೆ 01 ನಿಮಿಷಕ್ಕೆ ಡಿಜಿಟಲ್ ಕೀ ಬಳಸಿ ಅಕ್ರಮವಾಗಿ ಇ-ಸ್ವತ್ತು ಗಳನ್ನು ನೀಡಿದ್ದಾರೆ. ಈ ಪ್ರದೇಶವು ಮುಂದೆ ಅನಧಿಕೃತ ಬಡಾವಣೆಯಾಗಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಇದಕ್ಕೆ ನಗರಸಭೆಯಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಹೊರೆಯಾಗುವ ಸಾಧ್ಯತೆ ಇದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ವರದಿ ಸಲ್ಲಿಸಿದ್ದರು. ಅಲ್ಲದೇ ಸಂಖ್ಯೆ ಎಂವೈ-2482/2017 ಪ್ರಕರಣ ಲೋಕಾಯುಕ್ತ ನ್ಯಾಯಾಲಯ ದಲ್ಲಿ ಬಾಕಿ ಇದ್ದರೂ ಸಹ ಸರ್ಕಾರದ ಸುತ್ತೋಲೆ ಹಾಗೂ ಮಾರ್ಗಸೂಚಿಗಳಂತೆ ಕ್ರಮ ವಹಿಸದೆ 17 ನಿವೇಶನಗಳಿಗೆ ಇ-ಸ್ವತ್ತುಗಳನ್ನು ನೀಡಿ ಕರ್ತವ್ಯಲೋಪವೆಸಗಿದ್ದಾರೆ ಎಂದು ಜಿಲ್ಲಾ ಧಿಕಾರಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದರು.

ನಗರಸಭೆ ಆಯುಕ್ತರಾಗಿದ್ದ ನಾಗಶೆಟ್ಟಿ ಜುಲೈ 6ರಂದು ಬೆಳಿಗ್ಗೆ ಪೌರಾಯುಕ್ತರ ಕರ್ತವ್ಯದಿಂದ ಬಿಡುಗಡೆಯಾಗಿ ಪ್ರಭಾರ ಪೌರಾಯುಕ್ತರಾಗಿ ಜಿಲ್ಲಾಧಿಕಾರಿಯ ಕಚೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರು ಚಾರ್ಜ್ ಪಡೆದ ನಂತರವೂ ನಾಗಶೆಟ್ಟಿ ಅವರು ಡಿಜಿಟಲ್ ಕೀ ಬಳಸಿಕೊಂಡು ವಾರ್ಡ್ ನಂ.18ಕ್ಕೆ ಸೇರಿದ ಏಕ ನಿವೇ ಶನವನ್ನು ಭೂಪರಿವರ್ತನೆಯಾಗದೆ, ನಗರ ಯೋಜನಾ ಪ್ರಾಧಿಕಾರದಿಂದ ನಕ್ಷೆ ಅನುಮೋದನೆಯನ್ನೂ ಪಡೆ ಯದೆ ಎಂಟು ನಿವೇಶನಗಳನ್ನಾಗಿ ವಿಂಗಡಿಸಿ ಇ-ಸ್ವತ್ತು ನೀಡಿರುವುದು ಹಾಗೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರೂ ಸಹ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ನಿಯಮಗಳನ್ನು ಪಾಲಿಸದೆ 17 ನಿವೇಶನಗಳಿಗೆ ಇ-ಸ್ವತ್ತು ನೀಡಿ ಅಧಿಕಾರ ದುರುಪ ಯೋಗಪಡಿಸಿಕೊಂಡು ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕಾರಣದಿಂದ ವಿಚಾರಣೆಯನ್ನು ಕಾಯ್ದಿ ರಿಸಿ ಅವರನ್ನು ಅಮಾನತುಪಡಿಸಲಾಗಿದೆ ಎಂದು ಬಿ.ಬಿ.ಕಾವೇರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

 

Translate »