ಫೇಸ್ ಬುಕ್‍ನಲ್ಲಿ ಯುವತಿಗೆ  ನಿಂದಿಸಿದ ಯುವಕ ಬಂಧನ
ಮೈಸೂರು

ಫೇಸ್ ಬುಕ್‍ನಲ್ಲಿ ಯುವತಿಗೆ  ನಿಂದಿಸಿದ ಯುವಕ ಬಂಧನ

September 27, 2018

ಮೈಸೂರು: ಫೇಸ್‍ಬುಕ್‍ನಲ್ಲಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಮೈಸೂರಿನ ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಣಸೂರಿನ ಕಲ್ಕುಣಿಕೆಯ ರವಿ ಕೆ.ಗೌಡ ಬಂಧಿತ ಆರೋಪಿ. ಮೈಸೂರಿನ ಹೊಸ ಬಂಡಿಕೇರಿ ಯುವತಿ ಕೆ.ಆರ್.ಠಾಣೆಗೆ ದೂರು ನೀಡಿ ರವಿ ಕೆ.ಗೌಡ ತನಗೆ ಫೇಸ್ ಬುಕ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಮೆಂಟ್ ಮಾಡಿ ಮಾನಸಿಕ ನೋವುಂಟು ಮಾಡಿದ್ದಾನೆಂದು ಆರೋಪ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್. ಠಾಣೆ ಪೊಲೀಸರು ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.

Translate »