ಕೋಟೆಬೆಟ್ಟ ಸ್ವಚ್ಛಗೊಳಿಸಿದ ಯುವ ತಂಡ
ಕೊಡಗು

ಕೋಟೆಬೆಟ್ಟ ಸ್ವಚ್ಛಗೊಳಿಸಿದ ಯುವ ತಂಡ

August 26, 2021

ಸೋಮವಾರಪೇಟೆ, ಆ.25- ಪ್ರವಾಸಿ ಗರ ಮೋಜು ಮಸ್ತಿಯಿಂದ ಅಶುಚಿತ್ವದ ವಾತಾವರಣ ಸೃಷ್ಟಿಯಾಗಿದ್ದ ಗರ್ವಾಲೆ ಸಮೀಪದ ಪ್ರವಾಸಿತಾಣ ಕೋಟೆಬೆಟ್ಟ ದಲ್ಲಿ ಸೋಮವಾರಪೇಟೆÀ ಯಂಗ್ ಇಂಡಿ ಯನ್ ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರು ಹಾಗೂ ಸ್ಥಳೀಯ ಪ್ರವಾಸಿ ಯುವ ಕರು ಸ್ವಚ್ಛತಾ ಶ್ರಮದಾನ ನಡೆಸಿದರು.

ಅಪರೂಪದ ಪುಷ್ಪರಾಶಿ ಅರಳುತ್ತಿರುವುದ ರಿಂದ ಇದರ ಸೌಂದರ್ಯವನ್ನು ಸವಿಯಲು ಇತ್ತೀಚಿನ ದಿನಗಳಲ್ಲಿ ಕೋಟೆಬೆಟ್ಟಕ್ಕೆ ಸಾವಿ ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬರುವ ಪ್ರವಾಸಿಗರು ಮದ್ಯ, ಮಾಂಸ ಸೇವನೆಯೊಂದಿಗೆ ಮೋಜು, ಮಸ್ತಿಯಲ್ಲಿ ತೊಡಗಿ ಬಾಟಲ್ ಮತ್ತು ತ್ಯಾಜ್ಯಗಳನ್ನು ಬೆಟ್ಟದಲ್ಲೇ ಬಿಸಾಕಿ ಶುಚಿತ್ವಕ್ಕೆ ಭಂಗ ತರುತ್ತಿ ದ್ದಾರೆ. ಈ ಬಗ್ಗೆ “ಮೈಸೂರು ಮಿತ್ರ” ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು.
ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರು ಹಾಗೂ ಸ್ಥಳೀಯ ಪ್ರವಾಸಿ ಯುವಕರು ಇಂದು ಕೋಟೆಬೆಟ್ಟ ದಲ್ಲಿದ್ದ ರಾಶಿ ರಾಶಿ ತ್ಯಾಜ್ಯವನ್ನು ತೆರವು ಗೊಳಿಸಿ ಸ್ವಚ್ಛಗೊಳಿಸಿದರು.

ಪ್ರವಾಸಿಗರ ಆಗಮನಕ್ಕೆ ನಮ್ಮ ವಿರೋಧ ವಿಲ್ಲ, ಆದರೆ ಪ್ರಕೃತಿಯ ಸುಂದರ ಪರಿಸರ ವನ್ನು ಹಾಳು ಮಾಡದೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಪ್ರಮುಖರು ಮನವಿ ಮಾಡಿದರು.

ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಪ್ರಮುಖರಾದ ಸಜನ್, ಮೋಹಿತ್, ಆದರ್ಶ, ಜಯಕೀರ್ತಿ, ವಿಕಾಸ್, ಚಿರಂಜೀವಿ, ಗಗನ್ ಸೇರಿದಂತೆ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು.

Translate »