ಮಡಿಕೇರಿಯಲ್ಲಿ ಅಕ್ರಮ ಕಟ್ಟಡ ತೆರವು
ಕೊಡಗು

ಮಡಿಕೇರಿಯಲ್ಲಿ ಅಕ್ರಮ ಕಟ್ಟಡ ತೆರವು

August 26, 2021

ಮಡಿಕೇರಿ, ಆ.25- ನಗರದ ಹೃದಯ ಭಾಗದಲ್ಲಿ ನಗರಸಭೆಯ ಅನುಮತಿ ಪಡೆಯದೇ ಹೆಚ್ಚುವರಿ ಯಾಗಿ ಕಟ್ಟಿದ್ದ ಕಟ್ಟಡವನ್ನು ನಗರಸಭೆ ಅಧಿಕಾರಿಗಳು ತೆರವು ಮಾಡಿದರು.

ನಗರದಲ್ಲಿ ಈ ಹಿಂದೆ ಫಿಲಂ ಟಾಕೀಸ್ ಆಗಿದ್ದ ಖಾಸಗಿ ಕಟ್ಟಡವನ್ನು ಶಾಪಿಂಗ್ ಮಾಲ್ ಮಾದರಿಯಾಗಿ ರೂಪಿ ಸಲು ಗುತ್ತಿಗೆದಾರ ಖಾಸಿಂ ಎಂಬುವರು ಮುಂದಾಗಿದ್ದು, ಹೆಚ್ಚುವರಿ ಕಟ್ಟಡ ಕಾಮಗಾರಿಯನ್ನು ನಡೆಸಿದ್ದರು. ಈ ಬಗ್ಗೆ ನಗರಸಭೆ 3 ಬಾರಿ ನೊಟೀಸ್ ಜಾರಿ ಮಾಡಿ, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದರೂ ಕೂಡ ಗುತ್ತಿಗೆದಾರರು ಕಾಮಗಾರಿ ಮುಂದುವರೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ನಗರಸಭೆ ಪೌರಾಯುಕ್ತ ಮತ್ತು ಇಂಜಿನಿಯರ್‍ಗಳು ಸ್ಥಳಕ್ಕಾಗಮಿಸಿ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಪಿಲ್ಲರ್‍ಗಳು ಮತ್ತು ಹೆಚ್ಚುವರಿ ಮಳಿಗೆಯೊಂದನ್ನು ತೆರವು ಮಾಡಿದರು. ಈ ಸಂದರ್ಭ ಗುತ್ತಿಗೆದಾರ ಖಾಸಿಂ ಮತ್ತು ನಗರಸಭೆ ಪೌರಾಯು ಕ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಹೆಚ್ಚುವರಿ ಕಟ್ಟಡ: ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ದಾರರಿಗೆ ಹೆಚ್ಚುವರಿ ಕಟ್ಟಡ ನಿರ್ಮಿಸದಂತೆ ಸೂಚಿಸಲಾ ಗಿತ್ತು. ಮಾತ್ರವಲ್ಲದೇ, ಈ ವಿಚಾರವಾಗಿ ಅವರು ನ್ಯಾಯಾಲಯದ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ನಗರಸಭೆ ಕೂಡ ಕಾನೂನು ರೀತಿಯ ಕ್ರಮ ಕೈಗೊಂಡಿದೆ. ಈಗ ತೆರವು ಮಾಡು ತ್ತಿರುವ ಕಟ್ಟಡಕ್ಕೆ ನೀಡಲಾಗಿದ್ದ ಟ್ರೇಡ್ ಲೈಸನ್ಸ್ ಅನ್ನು ಸಹ ರದ್ದು ಮಾಡಲಾಗಿದೆ. ಅದರಂತೆ ಕಾನೂನು ರೀತಿಯ ಕ್ರಮವನ್ನು ಜರುಗಿಸಲಾಗುತ್ತಿದೆ ಎಂದು ಪೌರಾಯುಕ್ತ ರಾಮ್‍ದಾಸ್ ತಿಳಿಸಿದರು.

ಉದ್ದೇಶಪೂರ್ವಕ ತೆರವು: ಮಡಿಕೇರಿ ನಗರದಲ್ಲಿ ಕೆಲವು ಜನಪ್ರತಿನಿಧಿಗಳು, ಪ್ರಭಾವಿಗಳು ಕೂಡ ನಿಯಮ ಉಲ್ಲಂಘಿಸಿ ಅಂಗಡಿ, ಮನೆಗಳನ್ನು ನಿರ್ಮಿಸಿಕೊಂಡಿ ದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳದ ನಗರಸಭೆ ಕೇವಲ ನಮ್ಮ ಕಾಮಗಾರಿಯನ್ನು ಮಾತ್ರ ಅಕ್ರಮ ಎಂದು ಪರಿಗಣಿಸಿದೆ ಎಂದು ಗುತ್ತಿಗೆದಾರ ಖಾಸಿಂ ಆರೋಪಿಸಿ ದರು. ಕಳೆದ ಜನವರಿಯಲ್ಲಿ ಕಟ್ಟಡ ಕಾಮಗಾರಿಗಾಗಿ ನಗರ ಸಭೆಗೆ ಅರ್ಜಿ ನೀಡಲಾಗಿತ್ತು. ಆದರೆ ಒಂದು ವರ್ಷ ಕಳೆದರೂ ಕೂಡ ಅನುಮತಿ ನೀಡುವ ಅಥವಾ ತಿರಸ್ಕರಿಸುವ ಬಗ್ಗೆ ನಗರಸಭೆ ಯಾವುದೇ ಸೂಚನೆ ನೀಡಿರಲಿಲ್ಲ. ಹೀಗಾದಲ್ಲಿ ಅರ್ಜಿ ಸಲ್ಲಿಸಿದವರಿಗೆ ಕಟ್ಟಡ ನಿರ್ಮಿಸಲು ಪುರಸಭೆ ಕಾಯಿದೆ 1964 ಕಲಂ 187ರಲ್ಲಿ ಅವಕಾಶ ಇದೆ. ಅದರಂತೆ ಕಟ್ಡಡ ಕಾಮಗಾರಿ ನಡೆಸಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಈ ಸಂದರ್ಭ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಬಾಕ್ಸ್…

Translate »