ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್‍ನಿಂದ ಪ್ರತಿಭಟನೆ
ಚಾಮರಾಜನಗರ

ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್‍ನಿಂದ ಪ್ರತಿಭಟನೆ

August 26, 2021

ಚಾಮರಾಜನಗರ, ಆ.25- ನಾವು ಭಾರತೀಯರು- ಕೋಮುವಾದದ ದಲ್ಲಾಳಿ ಗಳನ್ನು ಸಹಿಸುವುದಿಲ್ಲ ಎಂಬ ಘೋಷಣೆ ಯೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರ್ರುವನಾರಾಯಣ್ ಪರ ಹಾಗೂ ಬಿಜೆಪಿ ವಿರುದ್ಧ ನಗರದಲ್ಲಿ ಬುಧವಾರ ಯುವ ಕಾಂಗ್ರೆಸ್ ಸಮಿತಿ ಹಾಗೂ ಮುಂಚೂಣಿ ಘಟಕಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಪ್ರವಾಸಿ ಮಂದಿರದ ಆವರಣ ದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾ ರರು ಅಲ್ಲಿಂದ ಮೆರವಣಿಗೆ ಹೊರಟು  ಸತ್ತಿ ರಸ್ತೆ, ಡೀವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ, ಸರ್ಕಾರ ವಿರುದ್ಧ ಘೋಷಣೆ ಕೂಗಿ ದರು. ಸಿ.ಟಿ.ರವಿ, ಯತ್ನಾಳ್ ಭಾವಚಿತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿ ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದ ಸಂದರ್ಭದಲ್ಲಿ ಇಂದಿರಾಗಾಂಧಿ ಹೆಸರಿನ ಕ್ಯಾಂಟಿನ್ ತೆರೆಯ ಲಾಗಿತ್ತು. ಒಳ್ಳೆಯ ಕೆಲಸವನ್ನು ಮಾಡಿ ರಾಷ್ಟ್ರದ ಆರ್ಥಿಕ ಶಕ್ತಿ ವೃದ್ಧಿಸಿದರು. ಜನಪರ ಯೋಜನೆ ಗಳ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಬದಲಾವಣೆ ಮಾಡಿ ಬಿಜೆಪಿಯವರು ತಮಗೆ ಬೇಕಾದವರ ಹೆಸರನ್ನು ಇಟ್ಟುಕೊಳ್ಳಲು ಹೊರಟಿದ್ದಾರೆ. ಇದರ ವಿರುದ್ಧ ಧ್ರುವನಾರಾ ಯಣ್ ಅವರು ಹೇಳಿಕೆ ನೀಡಿದ್ದಾರೆ. ತಾಲಿ ಬಾನ್‍ಗಳು ಧರ್ಮಾಧಾರಿತ ಉಗ್ರವಾದ ಮನೋಭಾವ ಮಾಡಿದ್ದಾರೆ. ಅದೇ ರೀತಿ ಯಲ್ಲಿ ಬಿಜೆಪಿಯವರು ಉಗ್ರವಾದ ಮನೋ ಭಾವ ಹೊಂದಿದ್ದಾರೆ ಎಂದು ಆರ್‍ಎಸ್‍ಎಸ್ ಅನ್ನು ಟೀಕೆ ಮಾಡಿದ್ದಾರೆ, ವಿನಾಃ ಬೇರೆ ಯಾವ ದೃಷ್ಟಿಯಿಂದಲ್ಲೂ ಟೀಕೆ ಮಾಡಿಲ್ಲ. ಇದನ್ನು ಅರ್ಥಮಾಡಿಕೊಳ್ಳದ ಬಿಜೆಪಿ ಯವರು ಕೇವಲ ಪ್ರಚಾರಕ್ಕಾಗಿ ಧ್ರುವ ನಾರಾಯಣ್ ವಿರುದ್ದ ಪ್ರತಿಭಟನೆ ನಡೆಸಿ ದ್ದಾರೆ ಎಂದು ಆರೋಪಿಸಿದರು.

ಧ್ರುವನಾರಾಯಣ್ ಅವರು ಭಾಗವಹಿ ಸುವ ಕಾರ್ಯಕ್ರಮದಲ್ಲಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಯವರು ಹೇಳಿದ್ದಾರೆ. ಒಂದು ವೇಳೆ ಹಾಗೇ ಮಾಡಿದರೆ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವತಿಯಿಂದ ಬಿಜೆಪಿ ಸಚಿವರು, ಶಾಸಕರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಸೈಯದ್‍ರಫೀ, ಜಿಲ್ಲಾ ಮಾಧ್ಯಮ ಕಾರ್ಯ ದರ್ಶಿ ಅರುಣ್‍ಕುಮಾರ್, ಪ್ರಧಾನ ಕಾರ್ಯ ದರ್ಶಿಗಳಾದ ಚಿಕ್ಕಮಹದೇವು, ಆರ್.ಮಹ ದೇವು, ಜಿಲ್ಲಾ ವಕ್ತಾರ್ ವಡಗೆರೆದಾಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಕಾಗಲವಾಡಿ ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್, ಉಪಾಧ್ಯಕ್ಷರಾದ ಮಧುಸೂದನ್, ಸೋಫಿಯಾ, ಸಾಹುಲ್ ಹಮೀದ್, ನಗರ ಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ಮಹದೇವಶೆಟ್ಟಿ, ಸದಸ್ಯರಾದ ಎಸ್.ಸೋಮನಾಯಕ, ಯೋಗೇಶ್, ತಾಪಂ ಮಾಜಿ ಅಧ್ಯಕ್ಷ ಹೆಚ್. ವಿ.ಚಂದ್ರು, ಮಾಜಿ ಸದಸ್ಯ ರಾಜು, ಮುಖಂಡ ಪು.ಶ್ರೀನಿವಾಸನಾಯಕ, ಸೋಮಶೇಖರ್ ಕೆಲ್ಲಂಬಳ್ಳಿ, ಶ್ರೀನಿವಾಸ, ಶಿವಕುಮಾರ್, ಬ್ಲಾಕ್ ಅಧ್ಯಕ್ಷ ಶಿವಪ್ರಸಾದ್, ವರುಣ್, ಮಹದೇವಸ್ವಾಮಿ, ಕಿರಣ್, ಶಿವು, ನಯಾಜ್, ಸಲ್ಮಾನ್, ಅಜರ್, ಮೋಹನ್‍ದಾಸ್, ಚಂದನ ಇತರರು ಭಾಗವಹಿಸಿದ್ದರು.

Translate »